

ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಟಿ20 ವಿಶ್ವಕಪ್‌ನ ಅತ್ಯಂತ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡ ಸಜ್ಜಾಗುತ್ತಿರುವಾಗ, ವರುಣ್ ಚಕ್ರವರ್ತಿ ಅವರ ಫಾರ್ಮ್ ಕುಸಿತವು ಮುಂಬರುವ ಪಂದ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಜಸ್ಪ್ರೀತ್ ಬುಮ್ರಾ ಅವರ ಮೇಲೆ ಒತ್ತಡವನ್ನು ಹೆಚ್ಚಿಸಬಹುದು ಎಂದು ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಹೇಳಿದ್ದಾರೆ. ಟಿ20ಐ ಬೌಲರ್‌ಗಳಲ್ಲಿ ಅಗ್ರ ಶ್ರೇಯಾಂಕಿತರಾಗಿರುವ ಚಕ್ರವರ್ತಿ, ಗುಂಪು ಹಂತದಲ್ಲಿ ಭಾರತದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದು, ನಾಲ್ಕು ಪಂದ್ಯಗಳಲ್ಲಿ 5.2 ಎಕಾನಮಿ ದರದಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದಾಗ್ಯೂ, ಸೂಪರ್ 8 ಹಂತದ ನಂತರ, ಅಷ್ಟೇ ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಗಳಿಸಿದ್ದಾರೆ ಮತ್ತು ಅವರ ಎಕಾನಮಿ ರೇಟ್ 11.6ಕ್ಕೆ ಏರಿದೆ.
ಪಂದ್ಯಾವಳಿಯ ಸೂಪರ್ 8 ಪಂದ್ಯಗಳಲ್ಲಿ, ವರುಣ್ ಚಕ್ರವರ್ತಿ ಎದುರಾಳಿ ಬ್ಯಾಟರ್‌ಗಳಿಂದ ಸವಾಲನ್ನು ಎದುರಿಸಿದ್ದಾರೆ. ಇದಕ್ಕೂ ಮೊದಲು, ಅವರು ಸ್ಥಿರ ಪ್ರದರ್ಶನ ನೀಡುತ್ತಿದ್ದರು.
'ವರುಣ್ ಚಕ್ರವರ್ತಿ ಅವರ ಕಳಪೆ ಫಾರ್ಮ್ ಭಾರತಕ್ಕೆ ಕಳವಳಕಾರಿಯಾಗಿದೆ. ಏಕೆಂದರೆ, ಅವರು ಸಾಮಾನ್ಯವಾಗಿ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಮತ್ತು ಆಟವನ್ನು ನಿಯಂತ್ರಿಸುವ ಪ್ರಮುಖ ಬೌಲರ್ ಆಗಿದ್ದಾರೆ. ಆದರೆ, ಅವರ ಕಳಪೆ ಪಾರ್ಮ್‌ನಿಂದಾಗಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಜಸ್ಪ್ರೀತ್ ಬುಮ್ರಾ ಅವರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಎದುರಾಳಿಗಳು ಈಗ ವರುಣ್ ಮತ್ತು ಬುಮ್ರಾ ಇಬ್ಬರ ಬಗ್ಗೆ ಚಿಂತಿಸುವ ಬದಲು ಬುಮ್ರಾ ಅವರ ನಾಲ್ಕು ಓವರ್‌ಗಳ ಮೇಲೆ ಮಾತ್ರ ಗಮನಹರಿಸಬಹುದು. ಇದು ಭಾರತದ ನಾಯಕನಿಗೆ ತಂಡವನ್ನು ನಿರ್ವಹಿಸುವುದು ಕಷ್ಟಕರವಾಗಿಸುತ್ತದೆ' ಎಂದು ಕುಂಬ್ಳೆ ESPNcricinfo ನಲ್ಲಿ ಹೇಳಿದರು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ, ಟೂರ್ನಮೆಂಟ್‌ನಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದ ಚಕ್ರವರ್ತಿ, ಒಂದು ವಿಕೆಟ್ ಪಡೆದು ಬರೋಬ್ಬರಿ 64 ರನ್ ಬಿಟ್ಟುಕೊಡುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡರು. ಇದು ಅವರ ಅತ್ಯಂತ ದುಬಾರಿ ಟಿ20ಐ ಪ್ರದರ್ಶನವಾಗಿದ್ದು, ಟೂರ್ನಮೆಂಟ್ ಇತಿಹಾಸದಲ್ಲಿ ಜಂಟಿ ಎರಡನೇ ಅತ್ಯಂತ ದುಬಾರಿ ಪ್ರದರ್ಶನವಾಗಿದೆ. ಡಿಸೆಂಬರ್ 2025 ರಿಂದ ಇದು ಅವರ 11ನೇ ಅತ್ಯಂತ ದುಬಾರಿ ಟಿ20ಐ ಸ್ಪೆಲ್‌ಗಳಲ್ಲಿ ಒಂದಾಗಿದೆ.
ಭಾರತವು ಟಿ20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಎಂದಿಗೂ ಸೋಲಿಸಿಲ್ಲ ಮತ್ತು ಅಹಮದಾಬಾದ್‌ನಲ್ಲಿ ನಡೆದ ಐಸಿಸಿ ಈವೆಂಟ್‌ಗಳ ಇತ್ತೀಚಿನ ಇತಿಹಾಸವು ಮೆನ್ ಇನ್ ಬ್ಲೂ ತಂಡಕ್ಕೆ ಪರವಾಗಿಲ್ಲ. ಈಮಧ್ಯೆ, ಕಿವೀಸ್ ಇನ್ನೂ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿಲ್ಲ. ಇದೀಗ ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರೋಮಾಂಚಕ ಫೈನಲ್‌ಗೆ ವೇದಿಕೆ ಸಜ್ಜಾಗಿದೆ.
Advertisement