T20 ವಿಶ್ವಕಪ್ 2026 ಫೈನಲ್: Sanju Samson ವಿಚಾರವಾಗಿ ಕೋಚ್ ಗಂಭೀರ್ ರನ್ನೇ ಟ್ರೋಲ್ ಮಾಡಿದ Arshdeep Singh; Video

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್ ಗಳ ಅಂತರದಲ್ಲಿ ಮಣಿಸಿ ತನ್ನ ಸತತ 2ನೇ ಮತ್ತು ಒಟ್ಟಾರೆ 3ನೇ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು.
Arshdeep Singh Trolls Sanju Samson, Gautam Gambhir
ಸಂಜು ಸ್ಯಾಮ್ಸನ್, ಅರ್ಶ್ ದೀಪ್ ಸಿಂಗ್ ಮತ್ತು ಗೌತಮ್ ಗಂಭೀರ್
Updated on

ಅಹ್ಮದಾಬಾದ್: ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಯ ಫೈನಲ್ ನಲ್ಲಿ ನ್ಯೂಜಿಲೆಂಡ್ ಮಣಿಸಿ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದ ಟೀಂ ಇಂಡಿಯಾ ಸಂಭ್ರಮಾಚರಣೆಯಲ್ಲಿರುವಂತೆಯೇ ಇತ್ತ ತಂಡದ ಸ್ಟಾರ್ ವೇಗಿ ಅರ್ಶ್ ದೀಪ್ ಸಿಂಗ್ ಸಂಜು ಸ್ಯಾಮ್ಸನ್ ವಿಚಾರವಾಗಿ ಕೋಚ್ ಗೌತಮ್ ಗಂಭೀರ್ ರನ್ನೇ ಟ್ರೋಲ್ ಮಾಡಿದ್ದಾರೆ.

ಹೌದು.. ನಿನ್ನೆ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್ ಗಳ ಅಂತರದಲ್ಲಿ ಮಣಿಸಿ ತನ್ನ ಸತತ 2ನೇ ಮತ್ತು ಒಟ್ಟಾರೆ 3ನೇ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಪಂದ್ಯದ ಬಳಿಕ ಇಡೀ ತಂಡ ಮೈದಾನದ ಪೂರ್ತಿ ಓಡಾಡಿ ಸಂಭ್ರಮಿಸಿದರೆ, ಅವರೊಟ್ಟಿಗೆ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಕೂಡ ಟ್ರೋಫಿಯೊಂದಿಗೆ ಸಂಭ್ರಮಿಸಿದರು.

ಈ ನಡುವೆ ತಂಡದ ಪ್ರಮುಖ ಸ್ಟಾರ್ ವೇಗಿ ಅರ್ಶ್ ದೀಪ್ ಸಿಂಗ್ ಕೋಟ್ ಗೌತಮ್ ಗಂಭೀರ್ ರನ್ನೇ ಟ್ರೋಲ್ ಮಾಡಿದ ಪ್ರಸಂಗ ಕೂಡ ನಡೆಯಿತು. ಈ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್ ರೊಂದಿಗೆ ರೀಲ್ಸ್ ಮಾಡಿದ ಅರ್ಶ್ ದೀಪ್ ಸಿಂಗ್ ಕೊನೆಗೂ ನ್ಯಾಯ ಸಿಕ್ತು ಎಂದು ಕೂಗುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಮತ್ತೊಂದು ವಿಡಿಯೋದಲ್ಲಿ ಅರ್ಶ್ ದೀಪ್ ಸಿಂಗ್ 'ಪಾಜಿ.. ಕಡೇ ಪಕ್ಷ ಈಗಲಾದರೂ ನಗಿ.. 'ಎಂದು ಕೋಚ್ ಗಂಭೀರ್ ಗೆ ಹೇಳಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.

Arshdeep Singh Trolls Sanju Samson, Gautam Gambhir
T20 ವಿಶ್ವಕಪ್ 2026 ಫೈನಲ್: 'Coach Saab..'; ಭಾರತದ ಗೆಲುವಿನ ಕುರಿತು MS Dhoni ಪೋಸ್ಟ್; ಗೌತಮ್ ಗಂಭೀರ್ ಗೆ ನೀಡಿದ ಸಂದೇಶ ಏನು?

ಈ ವಿಡಿಯೋವನ್ನು ಅರ್ಶ್ ದೀಪ್ ಸಿಂಗ್ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಅವರ ಕುರಿತೇ ಮಾಡಿದ್ದು ಎಂದು ಹೇಳಲಾಗಿದೆ. ಕಾರಣ ಈ ಟೂರ್ನಿಗೆ ತಂಡ ಪ್ರಕಟಿಸುವಾಗ ಸಂಜು ಪ್ರಮುಖ ಆಯ್ಕೆಯಾಗಿರಲಿಲ್ಲ. ಹೀಗಾಗಿ ಅವರನ್ನು ಆರಂಭಿಕ ಪಂದ್ಯಗಳಿಂದ ದೂರ ಇಡಲಾಗಿತ್ತು.

ಆದರೆ ಅಭಿಷೇಕ್ ಶರ್ಮಾ ಗಾಯಗೊಂಡು, ಸತತ ವೈಫಲ್ಯ ಅನುಭವಿಸುತ್ತಲೇ ಸಂಜುರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆ ಬಳಿಕ ಸಂಜು ತೋರಿದ ಪ್ರದರ್ಶನ ಎಲ್ಲರಿಗೂ ತಿಳಿದೇ ಇದೆ. ಇದೇ ವಿಚಾರವಾಗಿ ಇದೀಗ ಅರ್ಶ್ ದೀಪ್ ಸಿಂಗ್ ಕೋಚ್ ಗಂಭೀರ್ ರನ್ನೇ ಟ್ರೋಲ್ ಮಾಡಿದ್ದಾರೆ ಎನ್ನಲಾಗಿದೆ.

ಇಂಗ್ಲೆಂಡ್ ವಿರುದ್ಧ 2ನೇ ಸೆಮಿ ಫೈನಲ್ ಪಂದ್ಯದ ಬಳಿಕ ಸಂಜು ಸ್ಯಾಮ್ಸನ್ ಕೂಡ ಇದೇ ರೀತಿ ಮಾತನಾಡಿದ್ದರು. ತಮಗೆ ತಂಡದಲ್ಲಿ ಸಾಕಷ್ಟು ಅವಕಾಶಗಳು ಸಿಗಲಿಲ್ಲ. ಆದಾಗ್ಯೂ ಡಗೌಟ್ ನಲ್ಲಿ ಕುಳಿತೇ ನಾನು ಸಾಕಷ್ಟು ಕಲಿತಿದ್ದೆ ಎಂದು ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com