

ಮೇ 6 ರಂದು ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಸತತ ಮೂರನೇ ಸೋಲು ಕಂಡಿದ್ದು, ಮೂರು ಕ್ಯಾಚ್‌ಗಳನ್ನು ಕೈಬಿಟ್ಟಿದ್ದಕ್ಕೆ ತಂಡ ಭಾರಿ ಬೆಲೆ ತೆರಬೇಕಾಯಿತು. ಕಳೆದ ವರ್ಷದ ಫೈನಲಿಸ್ಟ್‌ಗಳು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭದಿಂದಲೂ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಮತ್ತು ಬಾಲ್‌ನಲ್ಲಿ ಅನುಕರಣೀಯ ಪ್ರದರ್ಶನ ನೀಡಿದರೂ, ಪಂಜಾಬ್ ಕಿಂಗ್ಸ್ (PBKS) ತಂಡವು ಕಳಪೆ ಫೀಲ್ಡಿಂಗ್ ಮಾಡಿ ಸೋಲಿಗೆ ಶರಣಾಗಿದೆ.
ಹೈದರಾಬಾದ್‌ನಲ್ಲಿ ನಡೆದ SRH ವಿರುದ್ಧದ ಪಂದ್ಯದಲ್ಲಿ, PBKS 24 ಎಸೆತಗಳ ಅಂತರದಲ್ಲಿ 3 ಕ್ಯಾಚ್‌ಗಳನ್ನು ಕೈಬಿಟ್ಟಿತು ಮತ್ತು ಒಂದು ಸ್ಟಂಪಿಂಗ್ ಅವಕಾಶವನ್ನು ಕೈಚೆಲ್ಲಿತು. 2026ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ ಕಳಪೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂಜಾಬ್ ಫೀಲ್ಡಿಂಗ್ ಮತ್ತೊಂದು ಮಟ್ಟದ ಕಳಪೆಯಾಗಿತ್ತು.
ಲಾಕಿ ಫರ್ಗುಸನ್ ಅವರು ಇಶಾನ್ ಕಿಶನ್ ಅವರನ್ನು ಶಾರ್ಟ್ ಡೆಲಿವರಿ ಮೂಲಕ ತೊಂದರೆಗೆ ಸಿಲುಕಿಸಿದರು. ಆದರೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಕೂಪರ್ ಕೊನೋಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚ್ ಕೈಬಿಟ್ಟರು. ಮುಂದಿನ ಓವರ್‌ನಲ್ಲಿ, ಐಪಿಎಲ್ 2026ರಲ್ಲಿ ಅತ್ಯಂತ ಕೆಟ್ಟ ಫೀಲ್ಡರ್‌ಗಳಲ್ಲಿ ಒಬ್ಬರಾಗಿರುವ ಶಶಾಂಕ್ ಸಿಂಗ್ ಎದುರಾಳಿ ತಂಡದ ಬ್ಯಾಟರ್‌ಗೆ ಮತ್ತೊಂದು ಅವಕಾಶ ನೀಡಿದರು.
ಯುಜ್ವೇಂದ್ರ ಚಾಹಲ್ ಅವರ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಅವರು ಟಾಪ್ ಎಡ್ಜ್ ಮಾಡಿದ್ದಾಗ ಆ ಚೆಂಡು ನೇರವಾಗಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಶಶಾಂಕ್ ಸಿಂಗ್ ಅವರತ್ತ ಹೋಯಿತು. ಆದರೆ, ಅವರು ಅದನ್ನು ಕೈಬಿಟ್ಟರು. ಇದು ಈ ಆವೃತ್ತಿಯ ಅವರ 4ನೇ ಡ್ರಾಪ್ ಕ್ಯಾಚ್ ಆಗಿದ್ದು, ನಮನ್ ಧೀರ್ (5) ಮುಂದಿದ್ದಾರೆ.
11ನೇ ಎಸೆತದಲ್ಲಿ ಯುಜ್ವೇಂದ್ರ ಚಾಹಲ್ ಮತ್ತೊಮ್ಮೆ ಬಲಿಪಶುವಾದರು. ಬ್ಯಾಟರ್ ಪುಲ್ ಶಾಟ್ ಅನ್ನು ತಪ್ಪಾಗಿ ಹೊಡೆದಿದ್ದರಿಂದ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿದ್ದ ಲಾಕಿ ಫರ್ಗುಸನ್ ಇಶಾನ್ ಕಿಶನ್ ಅವರ ಕ್ಯಾಚ್ ಕೈಚೆಲ್ಲಿದರು. ಓವರ್‌ನ ಕೊನೆಯ ಎಸೆತದಲ್ಲಿ, ಪ್ರಭ್ಸಿಮ್ರನ್ ಸಿಂಗ್ ಕೂಡ ಸ್ಟಂಪಿಂಗ್ ಅವಕಾಶವನ್ನು ತಪ್ಪಿಸಿಕೊಂಡರು ಮತ್ತು ಕಿಶನ್‌ಗೆ ಮೂರನೇ ಬಾರಿ ಅವಕಾಶ ಸಿಕ್ಕಿತು. ಲೆಗ್ ಸ್ಪಿನ್ನರ್ ಪಿಬಿಕೆಎಸ್‌ಗೆ 16 ಅವಕಾಶಗಳನ್ನು ಸೃಷ್ಟಿಸಿದ್ದಾರೆ. ಆದರೆ, ಅವರ ಬೌಲಿಂಗ್‌ನಿಂದ 7 ಕ್ಯಾಚ್‌ಗಳು ಮತ್ತು 1 ಸ್ಟಂಪಿಂಗ್ ಕೈಬಿಡಲಾಗಿದೆ.
ಕೈಬಿಟ್ಟ ಕ್ಯಾಚ್‌ಗಳು
* 7.1ನೇ ಓವರ್‌ನಲ್ಲಿ ಲಾಕಿ ಫರ್ಗುಸನ್ ಬೌಲಿಂಗ್‌ನಲ್ಲಿ 9 (9) ರನ್ ಗಳಿಸಿದ್ದ ಕಿಶನ್ ಅವರನ್ನು ಕೂಪರ್ ಕೊನೋಲಿ ಡ್ರಾಪ್ ಮಾಡಿದರು
* 8.4ನೇ ಓವರ್‌ನಲ್ಲಿ ಯುಜ್ವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ 23 (14) ರನ್ ಗಳಿಸಿದ್ದಾಗ ಕ್ಲಾಸೆನ್ ಅವರ ಕ್ಯಾಚನ್ನು ಶಶಾಂಕ್ ಡ್ರಾಪ್ ಮಾಡಿದರು.
* 10.2ನೇ ಓವರ್‌ನಲ್ಲಿ ಚಾಹಲ್ ಬೌಲಿಂಗ್‌ನಲ್ಲಿ 18 (14) ರನ್ ಗಳಿಸಿದ್ದ ಕಿಶನ್ ಅವರ ಕ್ಯಾಚನ್ನು ಲಾಕಿ ಫರ್ಗುಸನ್ ಡ್ರಾಪ್ ಮಾಡಿದರು.
* 10.6ನೇ ಓವರ್‌ನಲ್ಲಿ ಚಾಹಲ್ ಬೌಲಿಂಗ್‌ನಲ್ಲಿ ಕಿಶನ್ 18 (14) ರನ್ ಗಳಿಸಿದ್ದಾಗ ಪ್ರಭ್ಸಿಮ್ರನ್ ಸ್ಟಂಪಿಂಗ್ ಅವಕಾಶ ಕೈಬಿಟ್ಟರು.
ಕಿಶನ್ ಈ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡರು, 28 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು ಮತ್ತು 15ನೇ ಓವರ್‌ನಲ್ಲಿ 32 ಎಸೆತಗಳಲ್ಲಿ 55 ರನ್ ಗಳಿಸಿ ತಂಡಕ್ಕೆ ನೆರವಾದರು. ಮೊದಲ ಬಾರಿಗೆ ಅವರ ಕ್ಯಾಚ್ ಕೈಬಿಟ್ಟ ನಂತರ ಅವರು 23 ಎಸೆತಗಳಲ್ಲಿ 46 ರನ್ ಗಳಿಸಿದರು. ಕ್ಲಾಸೆನ್ ಅವರು ಪಿಬಿಕೆಎಸ್ ಬೌಲರ್‌ಗಳನ್ನು ಶಿಕ್ಷಿಸುವುದನ್ನು ಮುಂದುವರೆಸಿದರು. ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್, 32 ಎಸೆತಗಳಲ್ಲಿ ಅರ್ಧಶತಕ ತಲುಪಿದರು. ಆರಂಭದಲ್ಲಿ ಕ್ಯಾಚ್ ಕೈಬಿಟ್ಟ ನಂತರ 29 ಎಸೆತಗಳಲ್ಲಿ 46 ರನ್ ಗಳಿಸಿ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಔಟಾದರು.
Advertisement