ಓಯ್ ಅಂಧೇರೇ, ಸನ್‌ಸ್ಕ್ರೀನ್ ಹಚ್ಚಿದ್ಯಾ: ತಿಲಕ್ ವರ್ಮಾ ವಿರುದ್ಧದ ಅರ್ಷದೀಪ್ ಸಿಂಗ್ ಹೇಳಿಕೆಗೆ ಕ್ರಿಕೆಟ್ ಫ್ಯಾನ್ಸ್ ಗರಂ, Video!

ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮ ವರ್ತನೆಯಿಂದ ವಿವಾದಕ್ಕೆ ಸಿಲುಕಿದ್ದಾರೆ. ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಜೊತೆ ತಮಾಷೆಯಾಗಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Arshdeep Singh-Tilak Varma
ಅರ್ಷದೀಪ್ ಸಿಂಗ್-ತಿಲಕ್ ವರ್ಮಾ
Updated on

ಪಂಜಾಬ್ ಕಿಂಗ್ಸ್ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮತ್ತೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮ ವರ್ತನೆಯಿಂದ ವಿವಾದಕ್ಕೆ ಸಿಲುಕಿದ್ದಾರೆ. ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಜೊತೆ ತಮಾಷೆ ಮಾಡಿರುವುದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದಾಗ್ಯೂ, ಅನೇಕ ಬಳಕೆದಾರರು ಈ ಜೋಕ್ ಅನ್ನು ಟೀಕಿಸಿ, ಇದನ್ನು ಜನಾಂಗೀಯ ಕಾಮೆಂಟ್ ಎಂದು ಕರೆದಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಅರ್ಷದೀಪ್ ಸ್ನ್ಯಾಪ್‌ಚಾಟ್‌ನಲ್ಲಿ ತಿಲಕ್ ವರ್ಮಾ ಅವರೊಂದಿಗೆ ಮಾತನಾಡಿದನ್ನು ಕಾಣಬಹುದು. ವಿಡಿಯೋದಲ್ಲಿ ಅರ್ಶದೀಪ್ ಸಿಂಗ್ ಅವರು ತಿಲಕ್ ವರ್ಮಾ ಅವರನ್ನು ನೇರವಾಗಿ ನೋಡಿ, ಓಯ್ ಅಂಧೇರೇ, ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೀಯಾ? ಎಂದು ಕೇಳಿದ್ದಾರೆ. ‘ಅಂಧೇರೇ’ ಎಂದರೆ ಕತ್ತಲು ಅಥವಾ ಕಪ್ಪು ಎಂಬ ಅರ್ಥವಿದ್ದು, ಇದು ತಿಲಕ್ ಅವರ ಚರ್ಮದ ಬಣ್ಣವನ್ನು ಉದ್ದೇಶಿಸಿ ಮಾಡಿದ ಜನಾಂಗೀಯ ಕಾಮೆಂಟ್ ಎಂದು ನೆಟ್ಟಿಗರು ಅರ್ಷದೀಪ್ ಸಿಂಗ್ ವಿರುದ್ಧ ಕಿಡಿಕಾರುತ್ತಿದ್ದಾರೆ. ವಿಡಿಯೋ ವೈರಲ್ ಆದ ನಂತರ, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಳಕೆದಾರರು ಅರ್ಷ್‌ದೀಪ್ ಸಿಂಗ್ ಅವರನ್ನು ಟೀಕಿಸಿದರು. ಕೆಲವರು ಇದನ್ನು "ಜನಾಂಗೀಯ ನಿಂದನೆ" ಎಂದು ಕರೆದಿದ್ದಾರೆ. ಇತರರು ಅಂತಹ ಕಾಮೆಂಟ್‌ಗಳು ಸಾರ್ವಜನಿಕ ವೇದಿಕೆಯಲ್ಲಿ ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

Arshdeep Singh-Tilak Varma
ಒಂದಲ್ಲ 8 ಗೆಲುವು: 49 ಅಂತ ಕೆಣಕ್ಕಿದ್ದ KKR ಅನ್ನು ಸೋಲಿಸಿ ತಿರುಗೇಟು ನೀಡಿದ RCB ಫ್ರಾಂಚೈಸಿ!

ಅರ್ಷ್‌ದೀಪ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮ ಉಪಸ್ಥಿತಿ ಮತ್ತು ವ್ಲಾಗಿಂಗ್‌ಗಾಗಿ ಜನಪ್ರಿಯರಾಗಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ 6 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಆಗಾಗ್ಗೆ ಆಟಗಾರರೊಂದಿಗೆ ಹಾಸ್ಯಮಯ ವೀಡಿಯೊಗಳು ಮತ್ತು ಡ್ರೆಸ್ಸಿಂಗ್ ರೂಮ್ ವಿಷಯವನ್ನು ಹಂಚಿಕೊಳ್ಳುತ್ತಾರೆ. ಆದಾಗ್ಯೂ, ಆಟಗಾರರ ಸಾಮಾಜಿಕ ಮಾಧ್ಯಮ ಚಟುವಟಿಕೆಯು ವಿವಾದಕ್ಕೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ಬಿಸಿಸಿಐ ಸಾಮಾಜಿಕ ಮಾಧ್ಯಮ ಮತ್ತು ಐಪಿಎಲ್ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ತಂಡದ ನಿರ್ವಹಣೆಗೆ ಮೈದಾನದ ಹೊರಗಿನ ನಡವಳಿಕೆಯ ಕುರಿತು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ವರದಿಗಳು ಬಂದಿವೆ. ಈ ಮಾರ್ಗಸೂಚಿಗಳು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು, ಹೋಟೆಲ್ ಪ್ರೋಟೋಕಾಲ್‌ಗಳು, ಅತಿಥಿ ಪ್ರವೇಶ, ಭ್ರಷ್ಟಾಚಾರ ವಿರೋಧಿ ನಿಯಮಗಳು ಮತ್ತು ಸಾರ್ವಜನಿಕ ನಡವಳಿಕೆಯಂತಹ ವಿಷಯಗಳನ್ನು ಒಳಗೊಂಡಿವೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com