ಪಾಕಿಸ್ತಾನಕ್ಕೆ ಮತ್ತೆ ಆಘಾತ, ಬಾಂಗ್ಲಾದೇಶಕ್ಕೆ 2ನೇ ಜಯ: WTC ಅಂಕಪಟ್ಟಿಯಲ್ಲಿ ಭಾರತವನ್ನೇ ಹಿಂದಿಕ್ಕಿದ ಬಾಂಗ್ಲಾ ಟೈಗರ್ಸ್!

ಬಾಂಗ್ಲಾದೇಶದ ಸಿಲ್ಹಟ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧ 78 ರನ್ ಗಳ ಭರ್ಜರಿ ಜಯ ಸಾಧಿಸಿತು.
Bangladesh overtake India in WTC points table with historic 2-0 win over Pakistan
ಪಾಕಿಸ್ತಾನ ಸೋಲಿಸಿದ ಬಾಂಗ್ಲಾದೇಶ
Updated on

ನವದೆಹಲಿ: ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಪಾಕಿಸ್ತಾನಕ್ಕೆ ತವರಿನ ರುಚಿ ತೋರಿಸಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ 2ನೇ ಟೆಸ್ಟ್ ಪಂದ್ಯದಲ್ಲೂ ಐತಿಹಾಸಿ ಜಯ ಸಾಧಿಸಿದೆ.

ಬಾಂಗ್ಲಾದೇಶದ ಸಿಲ್ಹಟ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಪಾಕಿಸ್ತಾನ ವಿರುದ್ಧ 78 ರನ್ ಗಳ ಭರ್ಜರಿ ಜಯ ಸಾಧಿಸಿತು.

ಬಾಂಗ್ಲಾದೇಶ ನೀಡಿದ 436 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ಪಾಕಿಸ್ತಾನ ತನ್ನ 2ನೇ ಇನ್ನಿಂಗ್ಸ್ ನಲ್ಲಿ 358 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 78 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಪಾಕಿಸ್ತಾನ ಪರ ನಾಯಕ ಶಾನ್ ಮಸೂದ್ (71), ಬಾಬರ್ ಆಜಂ (47), ಸಲ್ಮಾನ್ ಅಘಾ (71) ಮತ್ತು ಮಹಮದ್ ರಿಜ್ವಾನ್ 94 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಪಾಕಿಸ್ತಾನ ಕೆಳ ಕ್ರಮಾಂಕದ ಬ್ಯಾಟರ್ ಗಳು ಬೇಗನೇ ವಿಕೆಟ್ ಕೈ ಚೆಲ್ಲಿದ್ದರಿಂದ ಸೋಲು ಉಂಟಾಯಿತು.

ಇನ್ನು ಬಾಂಗ್ಲಾದೇಶ ಪರ ಟೈಜುಲ್ ಇಸ್ಲಾಂ 6 ವಿಕೆಟ್ ಕಬಳಿಸಿ ಬಾಂಗ್ಲಾದೇಶದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಉಳಿದಂತೆ ನಹಿದ್ ರಾಣಾ 2, ಶೋರಿಫುಲ್ ಇಸ್ಲಾಂ ಮತ್ತು ಮೆಹದಿ ಹಸನ್ ಮಿರಾಜ್ ತಲಾ 1 ವಿಕೆಟ್ ಪಡೆದರು.

Bangladesh overtake India in WTC points table with historic 2-0 win over Pakistan
ಓವರ್ ಆ್ಯಕ್ಟಿಂಗ್ ಮಾಡಿದ್ರೆ 50 ಪೈಸೆನೂ ಸಿಗಲ್ಲ: Pak ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಗೇಲಿ ಮಾಡಿದ ಬಾಂಗ್ಲಾ ಆಟಗಾರರು; Video

ಐತಿಹಾಸಿಕ ಜಯ

ಈ ಪಂದ್ಯದ ಗೆಲುವಿನೊಂದಿಗೆ ಬಾಂಗ್ಲಾದೇಶ ತಂಡ ಪಾಕಿಸ್ತಾನ ವಿರುದ್ದ ತವರಿನಲ್ಲಿ ಐತಿಹಾಸಿಕ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈಗಾಗಲೇ ಢಾಕಾ ಟೆಸ್ಟ್ ಪಂದ್ಯ ಗೆದ್ದಿದ್ದ ಬಾಂಗ್ಲಾದೇಶ ಇದೀಗ ಸಿಲ್ಹಟ್ ಟೆಸ್ಟ್ ಪಂದ್ಯವನ್ನೂ ಗೆದ್ದು ಈ ಸಾಧನೆ ಮಾಡಿದೆ.

ಭಾರತವನ್ನೇ ಹಿಂದಿಕ್ಕಿದ ಬಾಂಗ್ಲಾಟೈಗರ್ಸ್!

ಈ ಪಂದ್ಯದ ಗೆಲುವಿನೊಂದಿಗೆ ಬಾಂಗ್ಲಾದೇಶ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಭಾರತವನ್ನೇ ಹಿಂದಿಕ್ಕಿದೆ. ಪಾಕಿಸ್ತಾನದ ವಿರುದ್ಧದ ಸರಣಿ ಜಯದೊಂದಿಗೆ ಬಾಂಗ್ಲಾದೇಶ WTC ಅಂಕಪಟ್ಟಿಯಲ್ಲಿ ತನ್ನ ಅಂಕಗಳಿಕೆಯನ್ನು 28ಕ್ಕೆ ಏರಿಕೆ ಮಾಡಿಕೊಂಡಿದ್ದು, ಅಲ್ಲದೆ ತನ್ನ ಗೆಲುವಿನ ಸರಾಸರಿಯನ್ನು 58.33ಕ್ಕೆ ಏರಿಸಿಕೊಂಡಿದೆ.

ಆ ಮೂಲಕ ಭಾರತ ತಂಡವನ್ನೇ ಬಾಂಗ್ಲಾದೇಶ ಹಿಂದಿಕ್ಕಿದೆ. ಭಾರತ ತಂಡ ತಾನಾಡಿರುವ 9 ಟೆಸ್ಟ್ ಪಂದ್ಯಗಳ ಪೈಕಿ 4 ಗೆಲುವು 4 ಸೋಲು ಮತ್ತು ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಆ ಮೂಲಕ ಭಾರತ ಅಂಕಗಳಿಕೆ 52 ಆಗಿದ್ದು, ಗೆಲುವಿನ ಸರಾಸರಿ 48.15ರಷ್ಟಿದೆ. ಹೀಗಾಗಿ ಭಾರತ ಬಾಂಗ್ಲಾದೇಶಕ್ಕಿಂತ ಕೆಳಗಿನ ಸ್ಥಾನಕ್ಕೆ ಕುಸಿದಿದೆ.

ಇತ್ತ ಬಾಂಗ್ಲಾದೇಶ ವಿರುದ್ಧ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಸೋತ ಪಾಕಿಸ್ತಾನ 8ನೇ ಸ್ಥಾನದಲ್ಲೇ ಮುಂದುವರೆದಿದೆ. ಪ್ರಸ್ತುತ ಶೇ.87.50 ಗೆಲುವಿನ ಸರಾಸರಿ ಹೊಂದಿರುವ ಆಸ್ಟ್ರೇಲಿಯಾ ಮತ್ತು ಶೇ.77.78ರಷ್ಟು ಗೆಲುವಿನ ಸರಾಸರಿ ಹೊಂದಿರುವ ನ್ಯೂಜಿಲೆಂಡ್ ಅಗ್ರ 2 ಸ್ಥಾನಗಳಲ್ಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com