ಓವರ್ ಆ್ಯಕ್ಟಿಂಗ್ ಮಾಡಿದ್ರೆ 50 ಪೈಸೆನೂ ಸಿಗಲ್ಲ: Pak ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಗೇಲಿ ಮಾಡಿದ ಬಾಂಗ್ಲಾ ಆಟಗಾರರು, Video!

ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ವರ್ತನೆಗಳಿಂದ ಬೇಸತ್ತ ಬಾಂಗ್ಲಾದೇಶದ ಆಟಗಾರರು ಸಿಲ್ಹೆಟ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಅವರನ್ನು ವ್ಯಾಪಕವಾಗಿ ಗೇಲಿ ಮಾಡಿದರು.
Mohammad Rizwan, Litton Das
ಮೊಹಮ್ಮದ್ ರಿಜ್ವಾನ್, ಲಿಟನ್ ದಾಸ್
Updated on

ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ವರ್ತನೆಗಳಿಂದ ಬೇಸತ್ತ ಬಾಂಗ್ಲಾದೇಶದ ಆಟಗಾರರು ಸಿಲ್ಹೆಟ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಅವರನ್ನು ವ್ಯಾಪಕವಾಗಿ ಗೇಲಿ ಮಾಡಿದರು. ಎರಡನೇ ಮತ್ತು ಅಂತಿಮ ಟೆಸ್ಟ್‌ನ ನಾಲ್ಕನೇ ದಿನದಂದು, ಪಾಕಿಸ್ತಾನಿ ಆಟಗಾರ ಪದೇ ಪದೇ ಚೆಂಡನ್ನು ನಿಧಾನಗೊಳಿಸಲು ಪ್ರಯತ್ನಿಸಿದರು. ಇದಕ್ಕಾಗಿ ಬಾಂಗ್ಲಾದೇಶದ ಆಟಗಾರರು ಅವರನ್ನು ಖಂಡಿಸಿದರು. ಅಲ್ಲದೆ ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಓವರ್ ಆ್ಯಕ್ಟಿಂಗ್ ಮಾಡಿದ್ದಕ್ಕಾಗಿ 50 ರೂಪಾಯಿ ಕಟ್ ಮಾಡುವುದಾಗಿ ಮೊಹಮ್ಮದ್ ರಿಜ್ವಾನ್ ಗೆ ಬಾಂಗ್ಲಾ ಆಟಗಾರ ಲಿಟನ್ ದಾಸ್ ಗೇಲಿ ಮಾಡಿದರು. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿತು. ಹೀಗಾಗಿ ಮೈದಾನದಲ್ಲಿರುವ ಅಂಪೈರ್‌ಗಳು ಮಧ್ಯಪ್ರವೇಶಿಸಬೇಕಾದ ಹಂತಕ್ಕೆ ತಲುಪಿತು. ವಾಗ್ವಾದದ ನಂತರ, ಬಾಂಗ್ಲಾದೇಶದ ಆಟಗಾರರು ರಿಜ್ವಾನ್ ಅವರನ್ನು ಪ್ರಸಿದ್ಧ ಬಾಲಿವುಡ್ ಹಾಸ್ಯ ಚಿತ್ರದ ಸಂಭಾಷಣೆಯೊಂದಿಗೆ ಟ್ರೋಲ್ ಮಾಡಿದರು.

Mohammad Rizwan, Litton Das
WTCಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆ: ಪಾಕಿಸ್ತಾನವನ್ನು 2-0 ಅಂತರದಿಂದ ಸೋಲಿಸಿ Team Indiaನ ಹಿಂದಿಕ್ಕಿದ ಬಾಂಗ್ಲಾ!

ಪಾಕಿಸ್ತಾನದ ಎರಡನೇ ಇನ್ನಿಂಗ್ಸ್‌ನ 72ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಮೊಹಮ್ಮದ್ ರಿಜ್ವಾನ್ 53 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಸೈಟ್‌ಸ್ಕ್ರೀನ್ ಮುಂದೆ ಯಾರೋ ಓಡಾಡುತ್ತಿದ್ದಾರೆ ಎಂದು ದೂರು ನೀಡಿ ಆಟವನ್ನು ನಿಲ್ಲಿಸಿದರು. ಬಾಂಗ್ಲಾದೇಶದ ಬೌಲರ್‌ಗಳ ಲಯವನ್ನು ಅಡ್ಡಿಪಡಿಸಲು ಮತ್ತು ಸಮಯ ವ್ಯರ್ಥ ಮಾಡಲು ರಿಜ್ವಾನ್ ಉದ್ದೇಶಪೂರ್ವಕವಾಗಿ ಇದನ್ನು ಮಾಡುತ್ತಿದ್ದಾರೆ ಎಂದು ಲಿಟ್ಟನ್ ದಾಸ್ ನಂಬಿದ್ದರು. ಸಮಸ್ಯೆ ಏನು ಎಂದು ಲಿಟನ್ ರಿಜ್ವಾನ್ ಅವರನ್ನು ಕೇಳಿದಾಗ, ರಿಜ್ವಾನ್, 'ನೋಡಿ, ಸೈಟ್‌ಸ್ಕ್ರೀನ್ ಮುಂದೆ ಯಾರೋ ನಿಂತಿದ್ದಾರೆ' ಎಂದು ಉತ್ತರಿಸಿದರು. ಇದಕ್ಕೆ ವ್ಯಂಗ್ಯವಾಡಿದ ಲಿಟನ್ ದಾಸ್, "ಅವರು ಅರ್ಧಶತಕ ಗಳಿಸಿದ ನಂತರ, ಅವರ ಓವರ್ ಆ್ಯಕ್ಟಿಂಗ್ ಪ್ರಾರಂಭವಾಗುತ್ತಿದೆ ಎಂದು ಹೇಳಿದರು.

ಓವರ್ ಮುಗಿದ ನಂತರವೂ, ಬಾಂಗ್ಲಾದೇಶದ ಆಟಗಾರರು ರಿಜ್ವಾನ್ ಅವರನ್ನು ಗೇಲಿ ಮಾಡುವುದು ನಿಲ್ಲಿಸಲಿಲ್ಲ. ರಿಜ್ವಾನ್ ಆಗಾಗ್ಗೆ ಮೈದಾನದಲ್ಲಿ ಅವರ ವಿಲಕ್ಷಣ ವರ್ತನೆಗಳು ಮತ್ತು ನಾಟಕಗಳಿಗೆ ಹೆಸರುವಾಸಿಯಾಗಿದ್ದಾರೆ. ಇದರ ಲಾಭವನ್ನು ಪಡೆದುಕೊಂಡು, ರಿಜ್ವಾನ್ ಬಳಿ ನಿಂತಿದ್ದ ಬಾಂಗ್ಲಾದೇಶದ ಫೀಲ್ಡರ್‌ಗಳು ಪ್ರಸಿದ್ಧ ಬಾಲಿವುಡ್ ಚಲನಚಿತ್ರಗಳ ಐಕಾನಿಕ್ ಡೈಲಾಗ್‌ಗಳನ್ನು ಅನುಕರಿಸುವ ಮೂಲಕ ಅವರನ್ನು ಕೀಟಲೆ ಮಾಡಲು ಪ್ರಾರಂಭಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com