IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಆರ್ ಸಿಬಿ ತಂಡ ಡೆತ್ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ, ಕೊನೆಯ ಕೇವಲ ಐದು ಓವರ್‌ಗಳಲ್ಲಿ 86 ರನ್ ಕಲೆಹಾಕಿ ಗುಜರಾತ್ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಛಿದ್ರ ಮಾಡಿತು.
Rajat Patidar produces all-time IPL playoff masterclass
ರಜತ್ ಪಾಟಿದಾರ್ ಬ್ಯಾಟಿಂಗ್ ಅಬ್ಬರ
Updated on

ಧರ್ಮಶಾಲಾ: ಐಪಿಎಲ್ ಟೂರ್ನಿಯ ಇಂದಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಅಜೇಯ 93 ರನ್ ಗಳಿಸಿ ಕೇವಲ 7 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದ್ದು, ಗುಜರಾತ್ ಗೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಿದೆ.

ಆರ್ ಸಿಬಿ ಬ್ಯಾಟಿಂಗ್ ನಲ್ಲಿ ತಂಡದ ಉಳಿದೆಲ್ಲಾ ಆಟಗಾರರ ಬ್ಯಾಟಿಂಗ್ ಒಂದು ತೂಕವಾದರೆ, ನಾಯಕ ರಜತ್ ಪಾಟಿದಾರ್ ಅವರ ಬ್ಯಾಟಿಂಗ್ ಮಾತ್ರವೇ ಒಂದು ತೂಕದಲ್ಲಿತ್ತು.

ರಜತ್ ಪಾಟಿದಾರ್ (Rajat Patidar) IPL ಇತಿಹಾಸದ ಅತ್ಯುತ್ತಮ ಪ್ಲೇಆಫ್ ಇನ್ನಿಂಗ್ಸ್‌ ಪ್ರದರ್ಶಿಸಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿಬಿ ಪರವಾಗಿ Gujarat Titans ವಿರುದ್ಧ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿದರು. ಅವರ ಈ ಅದ್ಭುತ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 9 ಭಾರಿ ಸಿಕ್ಸರ್‌ಗಳು ಸೇರಿದ್ದವು.

ಇನ್ನೂ ವಿಶೇಷವೆಂದರೆ ರಜತ್ ಪಾಟಿದಾರ್ ಕೇವಲ ಒಂದೇ ಒಂದು ಎಸೆತವನ್ನು ಮಾತ್ರ ಡಾಟ್ ಮಾಡಿದ್ದರು. ಪಾಟಿದಾರ್ ಅವರ ಸ್ಫೋಟಕ ಇನ್ನಿಂಗ್ಸ್ RCB ತಂಡವನ್ನು ಭಾರೀ 254/5 ಮೊತ್ತಕ್ಕೆ ಕೊಂಡೊಯ್ದಿತು - ಇದು ಈಗ IPL ನಾಕೌಟ್ ಇತಿಹಾಸದಲ್ಲಿನ ಅತಿ ದೊಡ್ಡ ಮೊತ್ತವಾಗಿದೆ.

Rajat Patidar produces all-time IPL playoff masterclass
IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

ದಾಖಲೆಯ ಸ್ಟ್ರೈಕ್ ರೈಟ್

ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಅವರ ಈ ಸ್ಫೋಟಕ ಬ್ಯಾಟಿಂಗ್ 281.82ರ ಭಾರೀ ಸ್ಟ್ರೈಕ್ ರೇಟ್ ಹೊಂದಿತ್ತು. ಇದೂ ಕೂಡ ದಾಖಲೆಯಾಗಿದ್ದು, ಇದು IPL ಇತಿಹಾಸದಲ್ಲಿ ನಾಯಕನೊಬ್ಬ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಇನ್ನಿಂಗ್ಸ್‌ಗಳಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ ಪಂದ್ಯ ಇದಾಗಿದೆ.

ಪಾಟಿದಾರ್ ಅವರ ನಿರ್ಭಯ ಬ್ಯಾಟಿಂಗ್‌ನ ಬಲದಿಂದ RCB 254/5 ಭಾರೀ ಮೊತ್ತ ಕಲೆಹಾಕಿತು, ಇದು ಈಗ IPL ಪ್ಲೇಆಫ್ ಇತಿಹಾಸದಲ್ಲಿನ ಅತಿ ದೊಡ್ಡ ತಂಡದ ಮೊತ್ತವಾಗಿದೆ.

ಡೆತ್ ಓವರ್ ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್

ರಜತ್ ಪಾಟಿದಾರ್ ಮಾತ್ರವಲ್ಲದೇ ಕೃನಾಲ್ ಪಾಂಡ್ಯ ಮತ್ತು ಜಿತೇಶ್ ಶರ್ಮಾ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಆರ್ ಸಿಬಿ ತಂಡ ಡೆತ್ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ, ಕೊನೆಯ ಕೇವಲ ಐದು ಓವರ್‌ಗಳಲ್ಲಿ 86 ರನ್ ಕಲೆಹಾಕಿ ಗುಜರಾತ್ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಛಿದ್ರ ಮಾಡಿತು.

ಎರಡೆರಡು ಜೀವದಾನ

ರಜತ್ ಪಾಟಿದಾರ್ ಗೆ ಗುಜರಾತ್ ಫೀಲ್ಡರ್ ಗಳು ಒಂದೇ ಓವರ್ ನಲ್ಲಿ ಎರಡೆರಡು ಜೀವದಾನ ಸಿಕ್ಕಿತು. ಸತತ ಜೀವದಾನ ಸಿಕ್ಕ ನಂತರ ಪಾಟಿದಾರ್ ಅವರ ಇನ್ನಿಂಗ್ಸ್ ಇನ್ನಷ್ಟು ಅಪಾಯಕಾರಿ ರೂಪ ಪಡೆಯಿತು. ಆ ಕ್ಷಣದಿಂದ ಅವರು ಗುಜರಾತ್ ನ ಪ್ರತಿಯೊಬ್ಬ ಬೌಲರ್‌ನನ್ನೂ ಕ್ರೂರವಾಗಿ ದಂಡಿಸಿದರು.

Rajat Patidar produces all-time IPL playoff masterclass
IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

ಪ್ಲೇಆಫ್ ನಲ್ಲಿ ಅದ್ಭುತ ಇನ್ನಿಂಗ್ಸ್

ಈ ಪಂದ್ಯದ ಸ್ಫೋಟಕ ಇನ್ನಿಂಗ್ಸ್ ಸೇರಿದಂತೆ ರಜತ್ ಪಾಟಿದಾರ್ ಆರು IPL ಪ್ಲೇಆಫ್ ಇನ್ನಿಂಗ್ಸ್‌ಗಳಲ್ಲಿ ಪಾಟಿದಾರ್ 112ಕ್ಕಿಂತ ಹೆಚ್ಚಿನ ಸರಾಸರಿ ಮತ್ತು ಸುಮಾರು 200ರ ಸ್ಟ್ರೈಕ್ ರೇಟ್‌ನೊಂದಿಗೆ 338 ರನ್ ಗಳಿಸಿದ್ದಾರೆ.

ಈ ಪಯಣವು 2022ರ ಎಲಿಮಿನೇಟರ್‌ನಲ್ಲಿ Lucknow Super Giants ವಿರುದ್ಧದ ಅವರ ಐತಿಹಾಸಿಕ ಅಜೇಯ 112 ರನ್‌ಗಳಿಂದ ಆರಂಭವಾಯಿತು. ಅಂದು ಅನ್ಕ್ಯಾಪ್ಡ್ ಆಟಗಾರನೊಬ್ಬ ದಾಖಲಿಸಿದ ಮೊದಲ IPL ಪ್ಲೇಆಫ್ ಶತಕವಾಗಿತ್ತು. ಆ ಬಳಿಕ ಅವರು Rajasthan Royals, Punjab Kings ಮತ್ತು ಈಗ Gujarat Titans ವಿರುದ್ಧವೂ ಪಂದ್ಯ ಗೆಲ್ಲಿಸಿದ ಇನ್ನಿಂಗ್ಸ್‌ಗಳನ್ನು ಆಡುತ್ತಲೇ ಬಂದಿದ್ದಾರೆ.

Rajat Patidar in IPL playoffs

  • 112* (54) vs LSG, Eliminator 2022

  • 58 (42) vs RR, Qualifier 2, 2022

  • 34 (22) vs RR, Eliminator 2024

  • 15* (8) vs PBKS, Qualifier 1, 2025

  • 26 (16) vs PBKS, Final 2025

  • 93* (33) vs GT, Qualifier 1, 2026

ಅತೀ ಹೆಚ್ಚು ಸಿಕ್ಸರ್

IPL ಪ್ಲೇಆಫ್ ಇತಿಹಾಸದಲ್ಲಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಇದೀಗ ರಜತ್ ಪಾಟಿದಾರ್ ಕೂಡ ಸ್ಥಾನ ಪಡೆದಿದ್ದು, ರಜತ್ ಪಾಟಿದಾರ್ 24 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಸುರೇಶ್ ರೈನಾ (40), ಎಂಎಸ್ ಧೋನಿ (28) ಮತ್ತು ಕೀರನ್ ಪೊಲಾರ್ಡ್ (25) ಮಾತ್ರ ಪಾಟಿದಾರ್‌ಗಿಂತ ಮೇಲಿದ್ದಾರೆ. ಇದು ಅವರನ್ನು ನಾಕೌಟ್ ಪಂದ್ಯಗಳ ವಿಶೇಷಜ್ಞನಾಗಿ ತೋರಿಸುವ ಮಹತ್ವದ ಸಾಧನೆಯಾಗಿದೆ.

ರಜತ್ ಸಿಕ್ಸರ್ ಗೆ ಕೊಹ್ಲಿ ಸಮೇತ ಇಡೀ ಕ್ರೀಡಾಂಗಣವೇ ದಂಗು

ಇನ್ನು ಈ ಪಂದ್ಯದಲ್ಲಿ ರಜತ್ ಪಾಟಿದಾರ್ ಸಿಡಿಸಿದ ಒಂದು ಸಿಕ್ಸರ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಇಡೀ ಜಗತ್ತಿಗೇ ಸಾಬಿತು ಪಡಿಸಿತು. ಮಾತ್ರವಲ್ಲದೇ ರನ್ ಮೆಷಿನ್ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಕ್ರೀಡಾಂಗಣವೇ ಆ ಸಿಕ್ಸರ್ ಹೊಡೆದ ಪರಿ ನೋಡಿ ಒಂದು ಕ್ಷಣ ದಂಗಾಯಿತು.

ಆರ್ ಸಿಬಿ ಇನ್ನಿಂಗ್ಸ್ ನ 17ನೇ ಓವರ್ ನಲ್ಲಿ ಕಾಗಿಸೋ ರಬಾಡಾ ಎಸೆದ 4ನೇ ಗುಡ್ ಲೆಂಥ್ ಎಸೆತವನ್ನು ರಜತ್ ಪಾಟಿದಾರ್ ಅವರು ಬ್ಯಾಕ್ ಫುಟ್ ನಲ್ಲಿ ಓವರ್ ಕವರ್ ನತ್ತ ಭಾರಿಸಿದರು. ಆ ಹೊಡೆತ ಎಷ್ಟು ಬಲವಾಗಿತ್ತು ಎಂದರೆ ಚೆಂಡು ಬ್ಯಾಟ್ ಗೆ ತಾಗುತ್ತಲೇ ರಾಕೆಟ್ ವೇಗದಲ್ಲಿ ಬೌಂಡರಿ ಮೇಲೆ ಹಾರಿ ಪ್ರೇಕಕರಿದ್ದ ಗ್ಯಾಲರಿಗೆ ಹೋಗಿ ಬಿತ್ತು. ಈ ಸಿಕ್ಸರ್ ನ ಕಂಡ ವಿರಾಟ್ ಕೊಹ್ಲಿ ಕೂಡ ಒಂದು ಕ್ಷಣ ದಂಗಾದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com