ಶೀಘ್ರದಲ್ಲೇ ವೈಭವ್ ಸೂರ್ಯವಂಶಿ ಭಾರತ ಪದಾರ್ಪಣೆ?; BCCI, RR ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಎಚ್ಚರಿಕೆ!

ಪವರ್‌ಪ್ಲೇಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸೂರ್ಯವಂಶಿ ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವರ್ಷ ಪವರ್ ಪ್ಲೇನಲ್ಲಿ ಅವರು 430 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 230 ಆಗಿದೆ.
Vaibhav Sooryavanshi
ವೈಭವ್ ಸೂರ್ಯವಂಶಿ
Updated on

15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅವರನ್ನು ಈಗಾಗಲೇ ಭಾರತೀಯ ಕ್ರಿಕೆಟ್‌ನಲ್ಲಿ ಮುಂದಿನ ದೊಡ್ಡ ಆಟಗಾರ ಎಂದು ಬಿಂಬಿಸಲಾಗುತ್ತಿದೆ; ಮತ್ತು ಅದಕ್ಕೆ ಒಳ್ಳೆಯ ಕಾರಣವೂ ಇದೆ. ಐಪಿಎಲ್ 2025 ರಲ್ಲಿ ಅವರು ಎಲ್ಲರ ಗಮನ ಸೆಳೆದರು. ಆಗ 14 ವರ್ಷದ ಅವರು 7 ಪಂದ್ಯಗಳಲ್ಲಿ 252 ರನ್ ಗಳಿಸಿದರು. ಐಪಿಎಲ್ 2026 ರಲ್ಲಿಯೂ, ಅವರು ತಮ್ಮ ಅಬ್ಬರವನ್ನು ಮುಂದುವರಿಸಿದ್ದು, ಆಡಿರುವ 15 ಇನಿಂಗ್ಸ್‌ಗಳಲ್ಲಿ 680 ರನ್ ಗಳಿಸಿದ್ದಾರೆ. ವೈಭವ್ ಅವರನ್ನು ಭಾರತೀಯ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಈಗಾಗಲೇ ವ್ಯಾಪಕ ಕರೆಗಳು ಕೇಳಿಬರುತ್ತಿವೆ.

ವೈಭವ್ ಸೂರ್ಯವಂಶಿ ಬಗ್ಗೆ ಅರುಣ್ ಧುಮಾಲ್ ಹೇಳಿಕೆ

ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಗಾಗಿ ವೈಭವ್ ಸೂರ್ಯವಂಶಿ ಅವರನ್ನು ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅಲ್ಲಿ ತಿಲಕ್ ವರ್ಮಾ ಅವರ ನಾಯಕರಾಗಿರುತ್ತಾರೆ. ಈ ಬ್ಯಾಟಿಂಗ್ ಸೆನ್ಸೇಶನ್ ಏನು ಮಾಡಬಹುದು ಎಂಬುದನ್ನು ನೋಡಲು ಅಭಿಮಾನಿಗಳು ಈಗಾಗಲೇ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಅವರನ್ನು ಅಂತರರಾಷ್ಟ್ರೀಯ ರಂಗಕ್ಕೆ ಕರೆದೊಯ್ಯುವ ಹಾದಿಯು ತೀವ್ರ ಎಚ್ಚರಿಕೆಯಿಂದ ರೂಪಿಸಲಾದ, ಕ್ರಮೇಣ ಪ್ರಯಾಣವಾಗಿರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಸಿಸಿಐ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಅವರ 'ಕೈ ಹಿಡಿದುಕೊಳ್ಳಬೇಕು', ಅವರ ಮಾರ್ಗದರ್ಶನದಲ್ಲಿ ಅವರು ಉತ್ತಮವಾಗುತ್ತಾರೆ. ಅವರ ಮನೋಧರ್ಮವು ಹಾಗೇ ಉಳಿಯುವಂತೆ ಸರಿಯಾದ ಮಾರ್ಗವನ್ನು ತೋರಿಸುವ ವಿಷಯದಲ್ಲಿ ಬಿಸಿಸಿಐ ಮತ್ತು ಫ್ರಾಂಚೈಸಿ ಅವರ ಕೈ ಹಿಡಿದುಕೊಳ್ಳುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕ್ರೀಡೆಯು ದೈಹಿಕ ಕೌಶಲ್ಯದ ಬಗ್ಗೆ ಮಾತ್ರವಲ್ಲ, ಮಾನಸಿಕ ದೃಢತೆಯನ್ನೂ ಬಯಸುತ್ತದೆ' ಎಂದು ಐಪಿಎಲ್ ಎಲಿಮಿನೇಟರ್‌ಗೆ ಮುನ್ನ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಟೈಮ್ಸ್ ಆಫ್ ಇಂಡಿಯಾಗೆ ಸ್ಪಷ್ಟಪಡಿಸಿದ್ದಾರೆ.

Vaibhav Sooryavanshi
ವೈಭವ್ ಸೂರ್ಯವಂಶಿಯನ್ನು ತಡೆಯುವುದು ಹೇಗೆ?; ಐಪಿಎಲ್ ಮುಗಿದ ನಂತರ ಹೇಳುತ್ತೇನೆ ಎಂದ RR ವೇಗಿ ಜೋಫ್ರಾ ಆರ್ಚರ್

'ಮತ್ತು ಖಂಡಿತವಾಗಿಯೂ, ಅವರಲ್ಲಿರುವ ಕೌಶಲ್ಯವು ಮುಂಬರುವ ಹಲವು ವರ್ಷಗಳ ಕಾಲ ಭಾರತಕ್ಕಾಗಿ ಪ್ರದರ್ಶನ ನೀಡಲು ಅನುವು ಮಾಡಿಕೊಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ' ಎಂದರು.

ಈಮಧ್ಯೆ, ಆರ್‌ಆರ್ 2008 ರಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದರು. ಅಂದಿನಿಂದ ಈವರೆಗೂ ಅವರು ಪ್ರಶಸ್ತಿಗಾಗಿ ಎದುರು ನೋಡುತ್ತಿದ್ದಾರೆ. ಪವರ್‌ಪ್ಲೇಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸೂರ್ಯವಂಶಿ ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವರ್ಷ ಪವರ್ ಪ್ಲೇನಲ್ಲಿ ಅವರು 430 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 230 ಆಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com