IPL 2026: 'ಕೆಲ್ಸಕ್ ಬರೋ ಪ್ರಶ್ನೇ ಕೇಳ್ರೀ..' : ಸುದ್ದಿಗೋಷ್ಟಿಯಲ್ಲಿ ಪತ್ರಕರ್ತನ ಬೆವರಿಳಿಸಿದ GT ಬ್ಯಾಟರ್ Glenn Phillips

ಪಂದ್ಯ ಸೋಲಿನ ನಂತರ ಗುಜರಾತ್ ಬ್ಯಾಟರ್ Glenn Phillips ಮಾಧ್ಯಮಗಳ ಮುಂದೆ ಬಂದು ಪ್ರಶ್ನೆಗಳನ್ನು ಎದುರಿಸಿದರು.
Glenn Phillips loses cool during presser
ಗ್ಲೇನ್ ಫಿಲಿಪ್ಸ್
Updated on

ಅಹ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2026 ಸೀಸನ್ ನಲ್ಲಿ RCB ಕ್ವಾಲಿಫೈಯರ್-1 ಪಂದ್ಯದಲ್ಲಿ ಸೋತು 2ನೇ ಕ್ವಾಲಿಫೈಯರ್ ಗೆ ಸಿದ್ಧವಾಗಿರುವ ಗುಜರಾತ್ ಟೈಟನ್ಸ್ ಫೈನಲ್ ಗೇರಲು ಇಂದು ರಾಜಸ್ತಾನ ರಾಯಲ್ಸ್ ತಂಡವನ್ನು ಎದುರಿಸುತ್ತಿದೆ.

ಮೊದಲ ಕ್ವಾಲಿಫೈಯರ್ ನಲ್ಲಿ ಆರ್ ಸಿಬಿ ನೀಡಿದ 255 ರನ್‌ಗಳ ಭಾರೀ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಕೇವಲ 162 ರನ್‌ಗಳಿಗೆ ಆಲೌಟ್ ಆಯಿತು. ಗುಜರಾತ್ ನ ರಾಹುಲ್ ತೆವಾಟಿಯಾ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ವಿಫಲವಾದ ಕಾರಣ ಗುಜರಾತ್‌ ಸೋಲು ಕಂಡಿತು.

ಪಂದ್ಯ ಸೋಲಿನ ನಂತರ ಗುಜರಾತ್ ಬ್ಯಾಟರ್ Glenn Phillips ಮಾಧ್ಯಮಗಳ ಮುಂದೆ ಬಂದು ಪ್ರಶ್ನೆಗಳನ್ನು ಎದುರಿಸಿದರು. ಈ ವೇಳೆ ಪತ್ರಕರ್ತನೋರ್ವ ಕೇಳಿದ ಪ್ರಶ್ನೆ ಗ್ಲೇನ್ ಫಿಲಿಪ್ಸ್ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಇಷ್ಟಕ್ಕೂ ಆಗಿದ್ದೇನು?

“ಆರ್‌ಸಿಬಿ ನೀಡಿದ 255 ರನ್‌ಗಳ ದೊಡ್ಡ ಗುರಿ ನೋಡುತ್ತಿದ್ದಂತೆಯೇ ನಿಮ್ಮ ಮನಸ್ಸಿನಲ್ಲಿ ಸೋಲಿನ ಭಯ ಶುರುವಾಯಿತೇ?” ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಅಚ್ಚರಿಗೊಂಡ ಗ್ಲೆನ್ ಫಿಲಿಪ್ಸ್ ಬಳಿಕ ಆ ವರದಿಗಾರನಿಗೆ ಖಡಕ್ ಉತ್ತರ ನೀಡಿದರು.

“ಇದು ಸಂಪೂರ್ಣ ಅರ್ಥವಿಲ್ಲದ ಪ್ರಶ್ನೆ. ವೃತ್ತಿಪರ ಕ್ರಿಕೆಟಿಗರು ಎಂದಿಗೂ ಗುರಿಯನ್ನು ನೋಡಿ ಹೆದರುವುದಿಲ್ಲ. ಪಂದ್ಯದಲ್ಲಿ ಎಷ್ಟೇ ಟಾರ್ಗೆಟ್ ಇದ್ದರೂ ಅದನ್ನು ಬೆನ್ನಟ್ಟುವ ಪ್ರಯತ್ನವೇ ಮಾಡುತ್ತಾರೆ. ಇಂತಹ ವಿಚಿತ್ರ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬರುವುದೇ ಇಲ್ಲ. ನೀವು ಕೇಳಿದ ಪ್ರಶ್ನೆ ತುಂಬಾ ಕೆಟ್ಟದು ಎಂದು ನೇರವಾಗಿಯೇ ಗ್ಲೇನ್ ಫಿಲಿಪ್ಸ್ ಹೇಳಿದರು.

ಅಲ್ಲದೆ ಐಪಿಎಲ್‌ನಲ್ಲಿ ಇದಕ್ಕಿಂತ ದೊಡ್ಡ ಗುರಿಗಳನ್ನೂ ಯಶಸ್ವಿಯಾಗಿ ಬೆನ್ನಟ್ಟಿದ ಸಂದರ್ಭಗಳಿವೆ ಎಂಬುದನ್ನು ಮರೆತಿರಾ? ಆದರೆ, ಕಣ್ಣ ಮುಂದೆ ದೊಡ್ಡ ಗುರಿ ಇದ್ದಾಗ ಒತ್ತಡ ಇರುವುದು ಸಹಜ. ಕೆಲವೊಮ್ಮೆ ಆ ಒತ್ತಡದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದೇ ಇರಬಹುದು,” ಎಂದು ಅವರು ಹೇಳಿದರು.

“ನಾವು ಮೈದಾನಕ್ಕಿಳಿದು ನಮ್ಮಿಂದಾದ ಎಲ್ಲ ಪ್ರಯತ್ನವನ್ನೂ ಮಾಡಿದ್ದೇವೆ. ದುರದೃಷ್ಟವಶಾತ್, 250 ರನ್‌ಗಳ ಗುರಿ ಬೆನ್ನಟ್ಟುವಾಗ ಪ್ರತಿಯೊಂದು ವಿಷಯವೂ ಸರಿಯಾಗಿ ನಡೆಯಬೇಕು. ನಾವು ಕೂಡ ಎಲ್ಲವೂ ಸರಿಯಾಗಿ ನಡೆಯಲೆಂದು ಪ್ರಯತ್ನಿಸಿದ್ದೇವೆ. ಆದರೆ ಅದು ಸಾಧ್ಯವಾಗಲಿಲ್ಲ' ಎಂದು ಗ್ಲೇನ್ ಫಿಲಿಪ್ಸ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com