Body-Line Bowling: GT ಹೆಣೆದ ಚಕ್ರವ್ಯೂಹ, ಹೋರಾಡಿದ Vaibhav Sooryavanshi, ಗುಜರಾತ್ ಬೌಲರ್ ಗಳ ವಿರುದ್ಧ ಇರ್ಫಾನ್ ಪಠಾಣ್ ತೀವ್ರ ಅಸಮಾಧಾನ!

ನ್ಯೂ ಚಂಡೀಗಢದ ಮುಲ್ಲನ್ ಪುರ ಕ್ರೀಡಾಂಣದಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಗುಜರಾತ್ ಟೈಟನ್ಸ್ ತಂಡ 7 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಐಪಿಎಲ್ ಟೂರ್ನಿಯ ಫೈನಲ್ ಗೇರಿತು.
Irfan Pathan Upset By GT's Vaibhav Sooryavanshi Strategy
ವೈಭವ್ ಸೂರ್ಯವಂಶಿ
Updated on

ನ್ಯೂ ಚಂಡೀಗಢ: ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯದಲ್ಲಿ 15 ವರ್ಷದ ಯುವ ಪ್ರತಿಭೆ ವೈಭಲ್ ಸೂರ್ಯವಂಶಿಯನ್ನು ಕಟ್ಟಿಹಾಕಲು ಗುಜರಾತ್ ಟೈಟನ್ಸ್ ಹೆಣೆದಿದ್ದ ಚಕ್ರವ್ಯೂಹ ಬಹುತೇಕ ಸಫಲವಾಯಿತಾದರೂ, ಕೊನೆಯ ಹಂತದಲ್ಲಿ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಖದರ್ ತೋರಿಸಿದರು.

ನ್ಯೂ ಚಂಡೀಗಢದ ಮುಲ್ಲನ್ ಪುರ ಕ್ರೀಡಾಂಣದಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಗುಜರಾತ್ ಟೈಟನ್ಸ್ ತಂಡ 7 ವಿಕೆಟ್ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಐಪಿಎಲ್ ಟೂರ್ನಿಯ ಫೈನಲ್ ಗೇರಿತು.

ರಾಜಸ್ತಾನ ಪರ ಭಾರತದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಕೊನೆಯ ಹಂತದವರೆಗೂ ವಿರೋಚಿತ ಹೋರಾಟ ತೋರಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ 47 ಎಸೆತಗಳಲ್ಲಿ 96 ರನ್ ಸಿಡಿಸಿ ರಾಜಸ್ಥಾನ ತಂಡವನ್ನು 20 ಓವರ್‌ಗಳಲ್ಲಿ 214/6 ಎಂಬ ಸ್ಪರ್ಧಾತ್ಮಕ ಮೊತ್ತಕ್ಕೆ ತಲುಪಿಸಿದರು.

ಆದರೆ ಶತಕದ ಹೊಸ್ತಿಲಲ್ಲಿದ್ದಾಗಲೇ ಮತ್ತದೇ ಬ್ಯಾಕ್ ಶಾಟ್ ಗೆ ಪ್ರಯತ್ನಿಸಿ ವಿಕೆಟ್ ಕೈಚೆಲ್ಲಿದರು. ಒಂದು ವೇಳೆ ವೈಭವ್ ಕೊನೆಯ ಎಸೆತದವರೆಗೂ ಕ್ರೀಸ್ ನಲ್ಲಿದಿದ್ದರೆ ರಾಜಸ್ತಾನ ಇನ್ನೊಂದು 20 ರನ್ ಗಳನ್ನು ಹೆಚ್ಚುವರಿಯಾಗಿ ಕಲೆಹಾಕುತ್ತಿತ್ತು. ಆಗ ಫಲಿತಾಂಶ ಬೇರೆಯದೇ ಆಗಿರುತ್ತಿತ್ತು ಎಂದು ಚರ್ಚಿಸಲಾಗುತ್ತಿದೆ.

Irfan Pathan Upset By GT's Vaibhav Sooryavanshi Strategy
IPL 2026: ರಾಜಸ್ಥಾನ್ ರಾಯಲ್ಸ್ ಸೋಲಿನ ಬಳಿಕ ಭಾವುಕರಾಗಿ ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ-Viral Video

ಸಂಪೂರ್ಣ ವಿಫಲವಾದ ಮಧ್ಯಮ ಕ್ರಮಾಂಕ, ಜವಾಬ್ದಾರಿ ಹೊತ್ತ ವೈಭವ್

ಇದಕ್ಕೂ ಮುನ್ನ ಎಲಿಮಿನೇಟರ್ ಪಂದ್ಯದಲ್ಲಿ Sunrisers Hyderabad ವಿರುದ್ಧ 97 ರನ್ ಗಳಿಸಿದ್ದ ವೈಭವ್, ಮತ್ತೊಮ್ಮೆ ದೊಡ್ಡ ಇನ್ನಿಂಗ್ಸ್ ಆಡಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ತಂಡದ ಮೇಲಿನ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿಫಲವಾದ ಸಂದರ್ಭದಲ್ಲಿ ಜವಾಬ್ದಾರಿಯನ್ನು ಹೊತ್ತುಕೊಂಡ ಅವರು, ಪರಿಪಕ್ವತೆಯ ಆಟವಾಡಿ ತಂಡದ ಮೊತ್ತವನ್ನು ಗೌರವಾನ್ವಿತ ಮಟ್ಟಕ್ಕೆ ಕೊಂಡೊಯ್ದರು.

ವೈಭವ್ ಸೂರ್ಯವಂಶಿ ಕಟ್ಟಿಹಾಕಲು ಚಕ್ರವ್ಯೂಹ ಹೆಣೆದ GT

ಇನ್ನು ಇಡೀ ಟೂರ್ನಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಲೇ ಹಲವು ದಾಖಲೆಗಳನ್ನು ನಿರ್ಮಿಸಿರುವ ವೈಭವ್ ಸೂರ್ಯವಂಶಿ, ಈ ಪಂದ್ಯದಲ್ಲೂ ಅಪಾಯಕಾರಿಯಾಗಿದ್ದರು. ಆದರೆ ಶುಭ್ ಮನ್ ಗಿಲ್ ನೇತೃತ್ವದ ಗುಜರಾತ್ ತಂಡ ಅಕ್ಷರಶಃ ಅವರನ್ನು ಬೃಹತ್ ಮೊತ್ತ ಪೇರಿಸದಂತೆ ತಡೆದರು.

ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಗುಜರಾತ್ ವೇಗಿಗಳು Body-Line ನಲ್ಲಿ ಬೌಲಿಂಗ್ ಮಾಡುವ ಮೂಲಕ ಅವರನ್ನು ಭಾಗಶಃ ಕಟ್ಟಿಹಾಕಲು ಯತ್ನಿಸಿದರು. ಅವರ ಈ ಇನ್ನಿಂಗ್ಸ್ ನಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿಗಳು ಮಾತ್ರ ಇದ್ದವು. ಸಾಮಾನ್ಯವಾಗಿ ಸೂರ್ಯವಂಶಿ ಬೌಂಡರಿಗಿಂತ ಸಿಕ್ಸರ್ ಗಳನ್ನೇ ಹೆಚ್ಚು ಸಿಡಿಸುತ್ತಿದ್ದರು. ಆದರೆ ಈ ಪಂದ್ಯದಲ್ಲಿ ಅದು ಸಾಧ್ಯವಾಗಲಿಲ್ಲ.

ಇರ್ಫಾನ್ ಪಠಾಣ್ ಅಸಮಾಧಾನ

ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಮಾಡುವ ವೇಳೆ ವೇಗಿಗಳು Kagiso Rabada ಮತ್ತು Mohammed Siraj ದೇಹದತ್ತ ಗುರಿಯಾಗಿಸಿದ ಬೌಲಿಂಗ್ ಮಾಡಿದ್ದು ಚರ್ಚೆಗೆ ಕಾರಣವಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಭಾರತೀಯ ಕ್ರಿಕೆಟಿಗ Irfan Pathan ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

“15 ವರ್ಷದ ವೈಭವ್ ಸೂರ್ಯವಂಶಿಯನ್ನು ತಡೆಯಲು ಬಾಡಿಲೈನ್ ಬೌಲಿಂಗ್ ಮಾಡುವುದು ನನಗೆ ಸರಿಯೆಂದು ಅನಿಸುವುದಿಲ್ಲ. ಅವನು ದೊಡ್ಡ ಆಟಗಾರರ ವಿರುದ್ಧ ಆಡುತ್ತಿದ್ದಾನೆ ಎಂಬುದು ಗೊತ್ತಿದೆ. ಆದರೆ ಒಬ್ಬ ತಂದೆಯಾಗಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಪಠಾಣ್ ಬರೆದಿದ್ದಾರೆ.

ಸುಲಭವಾಗಿ ಗುರಿಮುಟ್ಟಿದ ಗುಜರಾತ್

ಇನ್ನು ರಾಜಸ್ಥಾನದ ಈ ಹೋರಾಟವನ್ನು Shubman Gill ತಮ್ಮ ಶತಕದ ಮೂಲಕ ಮಸುಕುಗೊಳಿಸಿದರು. ಗಿಲ್ ಕೇವಲ 53 ಎಸೆತಗಳಲ್ಲಿ ಅಜೇಯ 104 ರನ್ ಸಿಡಿಸಿ Gujarat Titans ತಂಡವನ್ನು 18.4 ಓವರ್‌ಗಳಲ್ಲಿ ಗುರಿ ತಲುಪುವಂತೆ ಮಾಡಿದರು. ಗುಜರಾತ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. 215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಪರ ಗಿಲ್ ಹಾಗೂ Sai Sudharsan ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದರು.

ಇಬ್ಬರೂ ಸೇರಿ ಕೇವಲ 77 ಎಸೆತಗಳಲ್ಲಿ 167 ರನ್‌ಗಳ ಅಮೋಘ ಜೊತೆಯಾಟ ನಿರ್ಮಿಸಿ ಪಂದ್ಯವನ್ನು ರಾಜಸ್ಥಾನದ ಕೈಯಿಂದ ಕಸಿದುಕೊಂಡರು. ಸುದರ್ಶನ್ 32 ಎಸೆತಗಳಲ್ಲಿ 58 ರನ್ ಗಳಿಸಿದರೆ, ಗಿಲ್ ಶತಕದೊಂದಿಗೆ ತಂಡದ ಜಯವನ್ನು ಖಚಿತಪಡಿಸಿದರು. ಇದರೊಂದಿಗೆ ಗುಜರಾತ್ ಟೈಟನ್ಸ್ ಐದು ಸೀಸನ್‌ಗಳಲ್ಲಿ ಮೂರನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

Irfan Pathan Upset By GT's Vaibhav Sooryavanshi Strategy
IPL 2026: ಗಿಲ್ ಸ್ಫೋಟಕ ಶತಕ; RR ವಿರುದ್ಧ GT ರೋಚಕ ಗೆಲುವು; ಫೈನಲ್​​ಗೆ ಎಂಟ್ರಿ

ಫೈನಲ್‌ನಲ್ಲಿ ಆರ್‌ಸಿಬಿ ಎದುರು ಮತ್ತೆ ಮುಖಾಮುಖಿ

ಈಗ ಗುಜರಾತ್ ಟೈಟನ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ಗಳಾದ Royal Challengers Bengaluru ತಂಡವನ್ನು ಎದುರಿಸಲಿದೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಸಮರದಲ್ಲಿ ಎರಡೂ ತಂಡಗಳು ಕಪ್‌ಗಾಗಿ ಪೈಪೋಟಿ ನಡೆಸಲಿವೆ. 2022ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿದ್ದ ಗುಜರಾತ್ ಟೈಟನ್ಸ್, ಮತ್ತೊಮ್ಮೆ ಟ್ರೋಫಿ ಗೆಲ್ಲುವ ಕನಸಿನೊಂದಿಗೆ ಫೈನಲ್‌ಗೆ ಕಾಲಿಟ್ಟಿದೆ. ಮತ್ತೊಂದೆಡೆ, ವೈಭವ್ ಸೂರ್ಯವಂಶಿಯ ಅದ್ಭುತ ಪ್ರದರ್ಶನದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ಟೂರ್ನಿಯಿಂದ ಹೊರಬಿದ್ದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com