IND vs NZ ODIs: ಕೊನೆಯ ಎರಡು ಪಂದ್ಯಗಳಿಗೆ ಶುಭಮನ್ ಗಿಲ್ ಔಟ್, ಶ್ರೇಯಸ್ ಅಯ್ಯರ್ ಗೆ ನಾಯಕತ್ವ!

ಕಿವೀಸ್ ವಿರುದ್ಧದ ಗಿಲ್ ಅವರ ಸೀಮಿತ ಲಭ್ಯತೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನು ಘೋಷಿಸಿದಾಗಲೇ ವಿವರಿಸಿತ್ತು.
Virat Kohli, Shreyas Iyer
ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್
Updated on: 

ಬೇ ಓವಲ್‌: ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಮತ್ತು ಐದನೇ ಏಕದಿನ ಪಂದ್ಯಗಳಿಂದ ಶುಭ್ ಮನ್ ಗಿಲ್ ಹೊರಗುರುಳಿಯಲಿದ್ದು, ಶ್ರೇಯಸ್ ಅಯ್ಯರ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇದಕ್ಕೆ ಯಾವುದೇ ಗಾಯ ಅಥವಾ ಅನಿರೀಕ್ಷಿತ ಬೆಳವಣಿಗೆ ಕಾರಣವಲ್ಲ.

ಕಿವೀಸ್ ವಿರುದ್ಧದ ಗಿಲ್ ಅವರ ಸೀಮಿತ ಲಭ್ಯತೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನು ಘೋಷಿಸಿದಾಗಲೇ ವಿವರಿಸಿತ್ತು.

ನಾಲ್ಕನೇ ಏಕದಿನ ಪಂದ್ಯವನ್ನು ಟೌರಂಗಾದ ಬೇ ಓವಲ್‌ನಲ್ಲಿ ಆಡಲಾಗುವುದು, ಅಲ್ಲಿ ಆತಿಥೇಯರು ಗೆಲ್ಲಲೇಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಪ್ರಸ್ತುತ 2-0 ಮುನ್ನಡೆಯನ್ನು ಹೊಂದಿದೆ.

ಕೊನೆಯ ಎರಡು ಪಂದ್ಯಗಳಿಗೆ ಗಿಲ್ ಯಾಕೆ ಅಲಭ್ಯ? ಶುಭಮನ್ ಗಿಲ್ ಅವರ ಅನುಪಸ್ಥಿತಿಯು ಭಾರತದ ಪ್ರವಾಸಕ್ಕಾಗಿ ಯೋಜಿಸಲಾದ ಮೂಲ ವೇಳಾಪಟ್ಟಿಯ ಭಾಗವಾಗಿದೆ. ತಂಡವನ್ನು ಘೋಷಿಸುವ ಸಮಯದಲ್ಲಿ, ಆರಂಭಿಕ ಆಟಗಾರ ಮೂರನೇ ಏಕದಿನ ಪಂದ್ಯದವರೆಗೆ ಮಾತ್ರ ಭಾಗವಹಿಸುತ್ತಾರೆ ಎಂದು ಬಿಸಿಸಿಐ ನಿರ್ದಿಷ್ಟಪಡಿಸಿತ್ತು.

ಉಳಿದ ಎರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಲು ಅಯ್ಯರ್ ಅವರನ್ನು ನಾಯಕನ್ನಾಗಿ ಘೋಷಿಸಲಾಗಿತ್ತು.

Virat Kohli, Shreyas Iyer
ಭಾರತ-ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯ ಮಳೆಗಾಹುತಿ: ಟಾಸ್ ಕೂಡ ನಡೆಯದೆ ರದ್ದು!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಲ್ಲಿ ಪ್ರಾಮುಖ್ಯತೆ ಹೊಂದಿರುವ ಮುಂಬರುವ ಟೆಸ್ಟ್ ಸರಣಿಯಲ್ಲಿ ಗಿಲ್ ಭಾರತವನ್ನು ಮುನ್ನಡೆಸಲಿದ್ದಾರೆ. ಆದ್ದರಿಂದ ಫಿಟ್ ನೆಸ್ ದೃಷ್ಟಿಯಿಂದ ಮೂರನೇ ಪಂದ್ಯದ ನಂತರ ODI ಸೆಟಪ್‌ನಿಂದ ಅವರ ನಿರ್ಗಮನವನ್ನು ಮುಂಚಿತವಾಗಿಯೇ ಯೋಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X