ಭಾರತ-ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯ ಮಳೆಗಾಹುತಿ: ಟಾಸ್ ಕೂಡ ನಡೆಯದೆ ರದ್ದು!

ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ ನಲ್ಲಿ ನಡೆಯಬೇಕಿದ್ದ 3ನೇ ಏಕದಿನ ಪಂದ್ಯ ನಿರಂತರ ಮಳೆಯ ಕಾರಣ ಒಂದೇ ಒಂದು ಎಸೆತ ಕೂಡ ಕಾಣದೆ ರದ್ದಾಗಿದೆ.
Hamilton ODI washed out without a ball being bowled
ಭಾರತ-ನ್ಯೂಜಿಲೆಂಡ್ 3ನೇ ಏಕದಿನ ಪಂದ್ಯ ರದ್ದು
Updated on: 

ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ.

ನ್ಯೂಜಿಲೆಂಡ್ ನ ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ ನಲ್ಲಿ ನಡೆಯಬೇಕಿದ್ದ 3ನೇ ಏಕದಿನ ಪಂದ್ಯ ನಿರಂತರ ಮಳೆಯ ಕಾರಣ ಒಂದೇ ಒಂದು ಎಸೆತ ಕೂಡ ಕಾಣದೆ ರದ್ದಾಗಿದೆ.

ನಿರಂತರ ಮಳೆಯಿಂದಾಗಿ ಫೀಲ್ಡ್ ಅಂಪೈರ್ ಗಳು ಪಂದ್ಯವನ್ನು ಕೈಬಿಡಲು ನಿರ್ಧರಿಸಿದರು ಎನ್ನಲಾಗಿದೆ.

ಪಂದ್ಯ ಆರಂಭಿಸಲು ಕೊನೆಯ ಬಾರಿ ಅಂಪೈರ್‌ಗಳು ಮೈದಾನದ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆದರೆ ಮಳೆ ನಿಲ್ಲದ ಕಾರಣ ಪಂದ್ಯ ನಡೆಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿ ಉಭಯ ತಂಡಗಳ ನಾಯಕರಿಗೆ ಮಾಹಿತಿ ನೀಡಿದರು.

ಈ ವೇಳೆ ಎರಡೂ ತಂಡಗಳ ಆಟಗಾರರು ಪರಸ್ಪರ ಕೈಕುಲುಕಿ ನಗುತ್ತಾ ಮೈದಾನದಿಂದ ನಿರ್ಗಮಿಸಿದರು.

Hamilton ODI washed out without a ball being bowled
'ಓ ಮೈ ಗಾಡ್': ದೀಪಾವಳಿ ಹಬ್ಬಕ್ಕೆ ಶಾಲಾ ಶಿಕ್ಷಕಿ ಮನೆಗೆ ತೆರಳಿ ಸರ್‌ಪ್ರೈಸ್ ಕೊಟ್ಟ ಅಭಿಷೇಕ್ ಶರ್ಮಾ; ಹೃದಯಸ್ಪರ್ಶಿ Video ವೈರಲ್!

ಕಿವೀಸ್`ಗೆ ಸರಣಿ ಸಮಬಲವೊಂದೇ ದಾರಿ

ಇನ್ನು 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದೆ.

3ನೇ ಪಂದ್ಯ ರದ್ದಾಗಿರುವುದರಿಂದ ಬಾರಿ ಉಳಿದಿರುವ 2 ಪಂದ್ಯಗಳನ್ನು ಗೆದ್ದರಷ್ಟೇ ಕಿವೀಸ್ ಸರಣಿಯನ್ನು ಸಮ ಮಾಡಿಕೊಳ್ಳಲಿದೆ.

ಒಂದು ಪಂದ್ಯ ಗೆದ್ದು ಮತ್ತೊಂದು ಪಂದ್ಯ ರದ್ದಾದರೂ ಸರಣಿ ಭಾರತದ ತೆಕ್ಕೆಗೆ ಹೋಗಲಿದೆ. ಹೀಗಾಗಿ ಭಾರತಕ್ಕೆ ಸರಣಿ ಸೋಲುವ ಭೀತಿ ಇಲ್ಲ.

ಅಂದಹಾಗೆ ಸರಣಿಯ ಇನ್ನುಳಿದ ಎರಡು ಪಂದ್ಯಗಳು ಮೌಂಟ್ ಮೌಂಗನುಯಿಯಲ್ಲಿ ನಡೆಯಲಿವೆ. ಈಗಾಗಲೇ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X