4th ODI: ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಡಕೌಟ್; ಹೀನಾಯ ದಾಖಲೆ ಬರೆದ ಶ್ರೇಯಸ್ ಅಯ್ಯರ್

ಶುಕ್ರವಾರ ಬೇ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 334 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕಳೆದ 26 ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ..
Shreyas Iyer records unwanted first in ODI captaincy debut
ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಡಕೌಟ್
Updated on: 

ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡದ ಬ್ಯಾಟರ್‌ಗಳ ಕಳಪೆ ಪ್ರದರ್ಶನ ಹಲವು ಕೆಟ್ಟ ದಾಖಲೆಗಳಿಗೆ ಕಾರಣವಾಗಿದ್ದು, ಪ್ರಮುಖವಾಗಿ ನಾಯಕನಾಗಿ ಮೊದಲ ಏಕದಿನ ಪಂದ್ಯವನ್ನಾಡಿದ ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗುವ ಮೂಲಕ ಬೇಡದ ದಾಖಲೆ ಬರೆದಿದ್ದಾರೆ.

ಶುಕ್ರವಾರ ಬೇ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 334 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕಳೆದ 26 ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಅನುಭವಿಸಿದ ಅತ್ಯಂತ ದೊಡ್ಡ ಸೋಲಿಗೆ ಸಾಕ್ಷಿಯಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ವಿಲ್ ಯಂಗ್ ಅವರ ಅಮೋಘ ಶತಕದ ನೆರವಿನಿಂದ 50 ಓವರ್‌ಗಳಲ್ಲಿ 333 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಸಂಪೂರ್ಣ ಕುಸಿಯಿತು. ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಮೊದಲ ಓವರ್‌ನಲ್ಲೇ ಭಾರತದ ಮೂವರು ಪ್ರಮುಖ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಹಂಗಾಮಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.

ಹೆನ್ರಿ ತಮ್ಮ ಮಾರಕ ಬೌಲಿಂಗ್ ಮುಂದುವರಿಸಿ ಒಟ್ಟು ಆರು ವಿಕೆಟ್ ಕಬಳಿಸಿದರು. ಭಾರತದ ಪರ ಕೇವಲ ಮೂವರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಯಿತು. ಉಳಿದವರು ನ್ಯೂಜಿಲೆಂಡ್ ಬೌಲರ್‌ಗಳ ದಾಳಿಗೆ ತತ್ತರಿಸಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ಭಾರತ 26.4 ಓವರ್ ನಲ್ಲೇ 89 ರನ್ ಗಳಿಗೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 244 ರನ್ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ ಅಂತರವನ್ನು 2-1ಕ್ಕೆ ತಗ್ಗಿಸಿದೆ. ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ.

Shreyas Iyer records unwanted first in ODI captaincy debut
4th ODI: 26 ವರ್ಷಗಳಲ್ಲೇ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಹೀನಾಯ ಸೋಲು, ಆದರೂ 2 ಕಳಪೆ ದಾಖಲೆಗಳಿಂದ ಭಾರತ ಪಾರು!

ಅನಗತ್ಯ ದಾಖಲೆ ಬರೆದ ನಾಯಕ

ಏಕದಿನ ನಾಯಕತ್ವದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಭಾರತದ ಮೊದಲ ನಾಯಕ ಎಂಬ ಅನಗತ್ಯ ದಾಖಲೆಗೆ ಶ್ರೇಯಸ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಮೊದಲ ಏಕದಿನ ನಾಯಕತ್ವದ ಪಂದ್ಯದಲ್ಲಿ ತಲಾ 2 ರನ್ ಗಳಿಸಿದ್ದರು.

ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ 4 ರನ್, ಬಿಷನ್ ಸಿಂಗ್ ಬೇಡಿ ಅಜೇಯ 4 ರನ್, ಜಿ. ವಿಶ್ವನಾಥ್ 5 ರನ್ ಹಾಗೂ ರಾಹುಲ್ ದ್ರಾವಿಡ್ 6 ರನ್ ಗಳಿಸಿದ್ದರು.

Lowest Score by Indian on ODI Captaincy debut

  • 0 - 𝗦𝗵𝗿𝗲𝘆𝗮𝘀 𝗜𝘆𝗲𝗿

  • 2 - Virat Kohli/Rohit Sharma

  • 4 - Sunil Gavaskar

  • 4* - Bishan Bedi

  • 5 - G Vishwanath

  • 6 - Rahul Dravid

ಮೊದಲ ಓವರ್‌ನಲ್ಲೇ ಮೂವರು ಪ್ರಮುಖ ಆಟಗಾರರು ಔಟ್!

ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಭಾರತದ ಬ್ಯಾಟಿಂಗ್ ಬೆನ್ನೆಲುಬಿಗೆ ಆರಂಭದಲ್ಲೇ ಹೊಡೆತ ನೀಡಿದರು. ಮೊದಲ ಓವರ್‌ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಈ ಮೂವರೂ ಖಾತೆ ತೆರೆಯುವ ಮೊದಲೇ ಔಟಾದರು. ಪರಿಣಾಮ, ಭಾರತ ಮೊದಲ ಓವರ್ ಮುಗಿಯುವಷ್ಟರಲ್ಲೇ ಯಾವುದೇ ರನ್ ಗಳಿಸದೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮೊದಲ ಎಸೆತದಲ್ಲೇ ಔಟಾದ ಭಾರತೀಯ ಬ್ಯಾಟರ್‌ಗಳ ಪಟ್ಟಿಗೆ ರೋಹಿತ್

ಏಕದಿನ ಪಂದ್ಯದ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಔಟಾದ ಭಾರತೀಯ ಬ್ಯಾಟರ್‌ಗಳ ಪಟ್ಟಿಗೂ ರೋಹಿತ್ ಶರ್ಮಾ ಕೂಡ ಸೇರ್ಪಡೆಯಾಗಿದ್ದಾರೆ. ಈ ಪಟ್ಟಿಯಲ್ಲಿ ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ತಲಾ ಮೂರು ಬಾರಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದಾರೆ.

ಸುನಿಲ್ ಗವಾಸ್ಕರ್, ರವಿಶಾಸ್ತ್ರಿ, ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ಮನೋಜ್ ಪ್ರಭಾಕರ್ ತಲಾ ಒಂದು ಬಾರಿ ಈ ರೀತಿ ಔಟಾಗಿದ್ದಾರೆ. ಇದೀಗ ರೋಹಿತ್ ಕೂಡ ಈ ಅನಗತ್ಯ ಪಟ್ಟಿಗೆ ಸೇರಿದ್ದಾರೆ.

India batters dismissed on the first ball of an ODI innings

  • Sourav Ganguly (thrice)

  • Virender Sehwag (thrice)

  • Sunil Gavaskar, Ravi Shastri, Kris Srikkanth, Manoj Prabhakar, Rohit Sharma - once each

1983ರ ವಿಶ್ವಕಪ್ ನೆನಪಿಸಿದ ಭಾರತದ ಕುಸಿತ

ಭಾರತ ತಂಡದ ಆರಂಭಿಕ ಕುಸಿತ 1983ರ ವಿಶ್ವಕಪ್‌ನ ಜಿಂಬಾಬ್ವೆ ವಿರುದ್ಧದ ಪಂದ್ಯವನ್ನು ನೆನಪಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮೊದಲ ನಾಲ್ಕು ವಿಕೆಟ್‌ಗಳನ್ನು 10 ರನ್‌ಗಳ ಒಳಗೆ ಕಳೆದುಕೊಂಡಿದ್ದು ಇದು ಕೇವಲ ಎರಡನೇ ಬಾರಿ.

1983ರ ವಿಶ್ವಕಪ್‌ನಲ್ಲಿ ಟನ್‌ಬ್ರಿಡ್ಜ್ ವೆಲ್ಸ್‌ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲೂ ಭಾರತ 9 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ಪಂದ್ಯದಲ್ಲಿ ಕಪಿಲ್ ದೇವ್ ಅಜೇಯ 175 ರನ್ ಸಿಡಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.

Shreyas Iyer records unwanted first in ODI captaincy debut
4th ODI: 16 ವರ್ಷಗಳ ಬಳಿಕ ಮತ್ತದೇ ಆಘಾತ, ಒಂದೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ!

ಎರಡನೇ ಬಾರಿ ರೋಹಿತ್-ಕೊಹ್ಲಿ ಒಂದೇ ಪಂದ್ಯದಲ್ಲಿ ಡಕ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಒಂದೇ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2010ರಲ್ಲಿ ದಂಬುಲಾದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಇಬ್ಬರೂ ಡಕ್ ಆಗಿದ್ದರು.

ಆ ಪಂದ್ಯ ವೀರೇಂದ್ರ ಸೆಹ್ವಾಗ್ ಅವರ ವಿವಾದಾತ್ಮಕ 99 ರನ್‌ಗಳಿಗೂ ಪ್ರಸಿದ್ಧವಾಗಿದೆ. ಸೆಹ್ವಾಗ್ 99 ರನ್ ಗಳಿಸಿದ್ದಾಗ ಸುರಾಜ್ ರಾಂಡಿವ್ ಎಸೆದ ನೋಬಾಲ್‌ಗೆ ಸಿಕ್ಸರ್ ಬಾರಿಸಿದ್ದರು. ಆದರೆ ಆ ಎಸೆತ ನೋಬಾಲ್ ಆಗಿದ್ದರಿಂದ ರನ್ ಲೆಕ್ಕಕ್ಕೆ ಸೇರಲಿಲ್ಲ. ಹೀಗಾಗಿ ಸೆಹ್ವಾಗ್ ಶತಕ ವಂಚಿತರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X