10 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯ: ಕೇರಳದ ಕುಟುಂಬಕ್ಕೆ ಮನೆ ಕೀಲಿ ಕೈ ಹಸ್ತಾಂತರಿಸಿದ Sanju Samson ತಾಯಿ! Video

ಸಂಜು ಸ್ಯಾಮ್ಸನ್ ಚಾರಿಟಬಲ್ ಫೌಂಡೇಷನ್ ನೆರವಿನಿಂದ ಕುಟುಂಬಕ್ಕೆ ಹೊಸ ಮನೆಯ ಭಾಗ್ಯ ಸಿಕ್ಕಿದೆ. ಸಂಜು ಅವರ ತಾಯಿ ಸ್ವತಃ ಮನೆ ಮಾಲೀಕ ಮಹಿಳೆಗೆ ಮನೆಯ ಕೀಲಿ ಹಸ್ತಾಂತರಿಸಿದ್ದಾರೆ.
Sanju Samson Foundation Completes Kerala Family’s Home After 10-Year Wait
ಮಹಿಳೆಗೆ ಮನೆ ಕೀಲಿ ಕೈ ಹಸ್ತಾಂತರಿಸಿದ ಸಂಜು ಸ್ಯಾಮ್ಸನ್ ತಾಯಿ
Updated on: 

ತಿರುವನಂತಪುರಂ: ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಕ್ರಿಕೆಟ್ ಮಾತ್ರವಲ್ಲದೇ ಕ್ರಿಕೆಟೇತರ ಕಾರ್ಯಗಳಿಂದಾಗಿಯೂ ಸುದ್ದಿಗೆ ಗ್ರಾಸವಾಗಿದ್ದು ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಂಜು ಸ್ಯಾಮ್ಸನ್ ಚಾರಿಟಬಲ್ ಫೌಂಡೇಷನ್ ನೆರವಿನಿಂದ ಕುಟುಂಬಕ್ಕೆ ಹೊಸ ಮನೆಯ ಭಾಗ್ಯ ಸಿಕ್ಕಿದೆ. ಸಂಜು ಅವರ ತಾಯಿ ಸ್ವತಃ ಮನೆ ಮಾಲೀಕ ಮಹಿಳೆಗೆ ಮನೆಯ ಕೀಲಿ ಹಸ್ತಾಂತರಿಸಿದ್ದಾರೆ.

ನಿರ್ಮಾಣ ಆರಂಭವಾಗಿ ಬರೋಬ್ಬರಿ 10 ವರ್ಷಗಳಿಗೂ ಹೆಚ್ಚು ಕಾಲ ಅಪೂರ್ಣವಾಗಿದ್ದ ಕೇರಳದ ಕುಟುಂಬವೊಂದರ ಮನೆ ಕೊನೆಗೂ ಪೂರ್ಣಗೊಂಡಿದೆ. ನವೆಂಬರ್ 11ರಂದು ಸಂಜು ಸ್ಯಾಮ್ಸನ್ ಅವರ 32ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫೌಂಡೇಷನ್ ಈ ಕುರಿತ ವಿಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋದಲ್ಲಿ ಸಂಜು ಅವರ ತಾಯಿ ಮಹಿಳೆಗೆ ಮನೆಯ ಕೀಲಿ ನೀಡುತ್ತಿರುವ ದೃಶ್ಯವಿದೆ.

Sanju Samson Foundation Completes Kerala Family’s Home After 10-Year Wait
'ಟಾಪ್ ಆರ್ಡರ್ ಅಲ್ಲ.. ಮಧ್ಯಮ ಕ್ರಮಾಂಕವೇ ದುರ್ಬಲ': ನ್ಯೂಜಿಲೆಂಡ್ ವಿರುದ್ಧ 244 ರನ್ ಸೋಲಿನ ಬಳಿಕ ದಿನೇಶ್ ಕಾರ್ತಿಕ್ ಅಚ್ಚರಿ ಹೇಳಿಕೆ!

10 ವರ್ಷಗಳ ಕನಸು ನನಸು

ಗಲ್ಫ್ ನ್ಯೂಸ್ ವರದಿ ಪ್ರಕಾರ, ಈ ಕುಟುಂಬ ಮನೆ ನಿರ್ಮಾಣ ಆರಂಭಿಸಿ ಸುಮಾರು 10 ವರ್ಷಗಳಾದರೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ ಸಂಜು ಸ್ಯಾಮ್ಸನ್ ಫೌಂಡೇಷನ್ ನೆರವಿಗೆ ಧಾವಿಸಿ ಮನೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಈ ಯೋಜನೆಯಲ್ಲಿ ಶ್ರೀ ಧನ್ಯಾ ಹೋಮ್ಸ್ ನಿರ್ಮಾಣ ಕಾರ್ಯ ಕೈಗೊಂಡಿತ್ತು.

ಮನೆ ಕೀಲಿ ಸ್ವೀಕರಿಸಿದ ಮಹಿಳೆ ತಮ್ಮ ಸಂತಸವನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಮನೆ ನಿರ್ಮಾಣ ಆರಂಭವಾಗಿ 10 ವರ್ಷಗಳು ಕಳೆದಿದ್ದರೂ ಅದು ಪೂರ್ಣಗೊಳ್ಳುತ್ತದೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದೆವು ಎಂದು ಅವರು ಹೇಳಿದ್ದಾರೆ.

ಮಹಿಳೆ ಹೇಳಿದ್ದೇನು?

“ನಾವು ಈ ಮನೆಯ ನಿರ್ಮಾಣವನ್ನು ಆರಂಭಿಸಿ 10 ವರ್ಷಗಳಾಗಿವೆ. ಒಂದು ದಿನ ಈ ಮನೆ ಪೂರ್ಣಗೊಳ್ಳುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಸಂಜು ಸ್ಯಾಮ್ಸನ್ ಫೌಂಡೇಷನ್ ಈ ಜವಾಬ್ದಾರಿ ವಹಿಸಿಕೊಂಡು ನಮ್ಮ ಮನೆ ನಿರ್ಮಾಣವನ್ನು ಪೂರ್ಣಗೊಳಿಸಿದೆ” ಎಂದು ಮಹಿಳೆ ಕೃತಜ್ಞತೆ ಸಲ್ಲಿಸಿದ್ದಾರೆ.

ತಮ್ಮ ಕುಟುಂಬದ ಪರವಾಗಿ ಫೌಂಡೇಷನ್‌ಗೆ ಧನ್ಯವಾದ ತಿಳಿಸಿದ ಅವರು, “ನಮ್ಮ ಕುಟುಂಬದ ಕೃತಜ್ಞತೆ ಮತ್ತು ಋಣ ಯಾವಾಗಲೂ ಉಳಿಯುತ್ತದೆ. ನಾವು ಸದಾ ಅವರಿಗಾಗಿ ಪ್ರಾರ್ಥಿಸುತ್ತೇವೆ” ಎಂದಿದ್ದಾರೆ.

ಹುಟ್ಟುಹಬ್ಬದಂದು ಸಂಜು ಕುಟುಂಬದ ಕೊಡುಗೆ

ನವೆಂಬರ್ 11ರಂದು ಸಂಜು ಸ್ಯಾಮ್ಸನ್ ಅವರ 32ನೇ ಹುಟ್ಟುಹಬ್ಬದಂದೇ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಮೈದಾನದಲ್ಲಿ ತಮ್ಮ ಆಟದ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತಿರುವ ಸಂಜು, ಸಾಮಾಜಿಕ ಸೇವೆಯ ಮೂಲಕವೂ ಗಮನ ಸೆಳೆಯುತ್ತಿದ್ದಾರೆ.

ಈ ಬಾರಿ ಅವರ ತಾಯಿ ಮನೆ ಕೀಲಿ ಹಸ್ತಾಂತರಿಸುವ ಮೂಲಕ ಕುಟುಂಬದ ಬಹುದಿನಗಳ ಕನಸು ನನಸಾಗಲು ಕಾರಣರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X