"49 ಸಾಲ್ ಬಾದ್ ಭಿ ಮೇರೆ ಸಾಥ್ ಹೈ"; ಮೊದಲ ಬ್ಯಾಟ್‌ನ ಮಾತೇ ಬೇರೆ...: ಭಾವುಕ ಪೋಸ್ಟ್ ಹಂಚಿಕೊಂಡ ಸಚಿನ್!

ಸಚಿನ್ ತೆಂಡೂಲ್ಕರ್ ಅವರು ತಾವು 16 ವರ್ಷ 205 ದಿನಗಳ ಪ್ರಾಯದವರಾಗಿದ್ದಾಗ ಇದೇ ದಿನದಂದು, ಅಂದರೆ 1989ರ ನವೆಂಬರ್ 15ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
"Even After 49 Years, It's Still With Me": Sachin Tendulkar's Heartwarming Bat Tribute
ಸಚಿನ್ ತೆಂಡೂಲ್ಕರ್
Updated on: 

37 ವರ್ಷಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು, ತಮ್ಮ ಬಾಲ್ಯದ ಒಂದು ಐಕಾನಿಕ್ ಫೋಟೋವನ್ನು ತಮ್ಮ 53ನೇ ವಯಸ್ಸಿನಲ್ಲಿ ಮರುಸೃಷ್ಟಿಸುವ ಮೂಲಕ ಈ ವಿಶೇಷ ಸಂದರ್ಭವನ್ನು ಅತ್ಯಂತ ಭಾವುಕವಾಗಿ ಮತ್ತು ವಿಶಿಷ್ಟವಾಗಿ ಆಚರಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರು ತಾವು 16 ವರ್ಷ 205 ದಿನಗಳ ಪ್ರಾಯದವರಾಗಿದ್ದಾಗ ಇದೇ ದಿನದಂದು, ಅಂದರೆ 1989ರ ನವೆಂಬರ್ 15ರಂದು ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ದಶಕಗಳ ಕಾಲ ಭಾರತದ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂಬ ದಾಖಲೆ ಸಚಿನ್ ಹೆಸರಿನಲ್ಲಿತ್ತು. ಈ ವರ್ಷದ ಆರಂಭದಲ್ಲಿ ವೈಭವ್ ಸೂರ್ಯವಂಶಿ ಅವರು 15 ವರ್ಷ ಮತ್ತು 99 ದಿನಗಳ ವಯಸ್ಸಿನಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವ ಮೂಲಕ ಸಚಿನ್ ಅವರ ಈ ದಾಖಲೆಯನ್ನು ಮುರಿದಿದ್ದರು.

"Even After 49 Years, It's Still With Me": Sachin Tendulkar's Heartwarming Bat Tribute
IND vs PAK, U19 Asia Cup: ಪಾಕ್ ಬೌಲರ್‌ಗಳ ಬೆವರಿಳಿಸಿದ ಸೆಹ್ವಾಗ್ ಪುತ್ರ; ಆರ್ಯವೀರ್ ಆಟಕ್ಕೆ ಫ್ಯಾನ್ಸ್ ಫಿದಾ! Video

49 ವರ್ಷಗಳಾದರೂ ಜೊತೆಯಲ್ಲೇ ಇದೆ ಮೊದಲ ಬ್ಯಾಟ್!

ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ಜರ್ನಿಯ ಬಗ್ಗೆ ಮಾತನಾಡುವಾಗ, ಉದ್ದನೆಯ ಕೂದಲು ಬಿಟ್ಟುಕೊಂಡು, ಕೈಯಲ್ಲಿ ಬ್ಯಾಟ್ ಹಿಡಿದು ಚೆಂಡನ್ನು ಎದುರಿಸಲು ಸಜ್ಜಾಗಿರುವ ಅವರ ಬಾಲ್ಯದ ಫೋಟೋ ಎಲ್ಲರ ಕಣ್ಣಮುಂದೆ ಬರುತ್ತದೆ. ಒಬ್ಬ ಬಾಲ ಪ್ರತಿಭೆ ವಿಶ್ವ ಕ್ರಿಕೆಟ್‌ನ ಮಹಾನ್ ದಿಗ್ಗಜನಾಗಿ ಬೆಳೆದ ಪಯಣದ ಆರಂಭವನ್ನು ಆ ಚಿತ್ರ ಸೆರೆಹಿಡಿದಿತ್ತು.

ಇದೀಗ ದಶಕಗಳ ನಂತರ, 53 ವರ್ಷದ ಸಚಿನ್ ಅದೇ ಬಾಲ್ಯದ ಫೋಟೋದಲ್ಲಿ ಹಿಡಿದಿದ್ದ ಬ್ಯಾಟ್ ಅನ್ನು ಹಿಡಿದು ಅದೇ ಭಂಗಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, ಮೊದಲ ಬ್ಯಾಟ್‌ನ ಮಾತೇ ಬೇರೆ, 49 ವರ್ಷಗಳ ನಂತರವೂ ಅದು ನನ್ನೊಂದಿಗಿದೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X