IND vs PAK, U19 Asia Cup: ಪಾಕ್ ಬೌಲರ್‌ಗಳ ಬೆವರಿಳಿಸಿದ ಸೆಹ್ವಾಗ್ ಪುತ್ರ; ಆರ್ಯವೀರ್ ಆಟಕ್ಕೆ ಫ್ಯಾನ್ಸ್ ಫಿದಾ! Video

ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗಾಯದ ಸಮಸ್ಯೆಯ ನಡುವೆಯೂ ಆರ್ಯವೀರ್ ಸೆಹ್ವಾಗ್ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ.
Aaryavir Sehwag brings Virat Kohli vibes to U19 Asia Cup final with brave fifty
ಆರ್ಯವೀರ್ - ವಿರಾಟ್ ಕೊಹ್ಲಿ
Updated on: 

ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಹಾಗೂ ಭಾರತ ಅಂಡರ್-19 ತಂಡದ ಆರಂಭಿಕ ಆಟಗಾರ ಆರ್ಯವೀರ್ ಸೆಹ್ವಾಗ್ ಅವರು ಪಾಕಿಸ್ತಾನ ಬೌಲರ್‌ಗಳ ಬೆವರಿಳಿಸಿದ್ದಾರೆ.

ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಗಾಯದ ಸಮಸ್ಯೆಯ ನಡುವೆಯೂ ಆರ್ಯವೀರ್ ಸೆಹ್ವಾಗ್ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿಯವರ 'ನನ್ನ ಬ್ಯಾಟ್ ಮಾತನಾಡಲಿ' (let my bat do the talking) ಎಂಬ ಭಂಗಿಯನ್ನು ಪ್ರದರ್ಶಿಸಿದರು.

ಡಿಸೆಂಬರ್ 16, 2018 ರಂದು ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತಮ್ಮ 25ನೇ ಶತಕವನ್ನು ಪೂರೈಸಿದಾಗ ವಿರಾಟ್ ಕೊಹ್ಲಿ ಇದೇ ರೀತಿ ಬ್ಯಾಟ್ ತೋರಿಸಿದ್ದರು. ಇದೀಗ ಆರ್ಯವೀರ್ ಸೆಹ್ವಾಗ್ ತಮ್ಮ ಅರ್ಧಶತಕವನ್ನು ಪೂರೈಸಿದ ನಂತರ ಅದೇ ಕ್ಷಣವನ್ನು ಮರುಸೃಷ್ಟಿಸಿದರು. ನೋವಿನ ನಡುವೆಯೂ ಹೋರಾಡಿ ಆಡಿದ ತಮ್ಮ ಇನಿಂಗ್ಸ್‌ಗೆ ಇದು ವಿಶೇಷ ಮೆರುಗನ್ನು ನೀಡಿತು.

Aaryavir Sehwag brings Virat Kohli vibes to U19 Asia Cup final with brave fifty
T20 cricket: ನಾಯಕತ್ವದಲ್ಲೂ ಹೊಸ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ!

ಶನಿವಾರ ಅಲ್ ಅಮೆರತ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್ಯವೀರ್ ಕೇವಲ 51 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಅಲ್ಲದೆ ಮೊದಲ ವಿಕೆಟ್​ಗೆ ನಾಯಕ ಲಕ್ಷ್ಯ ರೈಚಂದಾನಿ ಜೊತೆಗೂಡಿ 95 ರನ್​​ಗಳ ಜೊತೆಯಾಟವನ್ನು ಕಟ್ಟಿದರು. ಈ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು.

ಆರ್ಯವೀರ್ 61 ಎಸೆತಗಳಲ್ಲಿ 58 ರನ್ ಗಳಿಸಿ ಲಾಂಗ್ ಆನ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ಬೌಂಡರಿಗಳನ್ನು ಸಿಡಿಸಿದ ಆರ್ಯವೀರ್, ಬಲಗೈಗೆ ಗಾಯವಾಗಿದ್ದರೂ ಅದನ್ನು ಲೆಕ್ಕಿಸದೆ ತಂಡಕ್ಕಾಗಿ ಹೋರಾಡಿದರು.

ಈ ಬಾರಿಯ ಅಂಡರ್-19 ಏಷ್ಯಾಕಪ್‌ನಲ್ಲಿ ಆರ್ಯವೀರ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿ ಒಟ್ಟು 356 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕವೂ ಸೇರಿದೆ.

ಭಾರತ ಗೆಲ್ಲಲು 338 ರನ್‌ ಟಾರ್ಗೆಟ್

ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಏಷ್ಯಾಕಪ್ ಪ್ರಶಸ್ತಿ ಗೆಲ್ಲಲು 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ದಾಖಲೆಯ ಒಂಬತ್ತನೇ ಬಾರಿ ಅಂಡರ್-19 ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X