Senior Women’s T20 Trophy: ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದ ಕರ್ನಾಟಕದ ವನಿತೆಯರು! ಸಿಎಂ ಡಿಕೆಶಿ ಅಭಿನಂದನೆ, Video

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಶುಭಾ ಸತೀಶ್ ನಾಯಕತ್ವದ ಕರ್ನಾಟಕದ ವನಿತೆಯರು, 11 ಬಾರಿಯ ಚಾಂಪಿಯನ್ ರೈಲ್ವೇಸ್ ತಂಡವನ್ನು ಕೇವಲ 3 ರನ್‌ಗಳಿಂದ ಮಣಿಸಿ ರೋಚಕ ಗೆಲುವು ಸಾಧಿಸಿತು.
Karnataka Women’s Cricket Team
ಕರ್ನಾಟಕದ ವನಿತೆಯರು
Updated on: 

ಅಹಮದಾಬಾದ್: ಕರ್ನಾಟಕದ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ನಿರ್ಮಿಸಿದೆ. ಚೊಚ್ಚಲ ಬಾರಿಗೆ 'ಸೀನಿಯರ್ ಮಹಿಳೆಯರ ಟಿ20 ಕ್ರಿಕೆಟ್' ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಶುಭಾ ಸತೀಶ್ ನಾಯಕತ್ವದ ಕರ್ನಾಟಕದ ವನಿತೆಯರು, 11 ಬಾರಿಯ ಚಾಂಪಿಯನ್ ರೈಲ್ವೇಸ್ ತಂಡವನ್ನು ಕೇವಲ 3 ರನ್‌ಗಳಿಂದ ಮಣಿಸಿ ರೋಚಕ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಶುಭಾ ಸತೀಶ್ 48, ನಿಕಿ ಪ್ರಸಾದ್ 28 ರನ್ ಗಳಿಸಿದರು.

Karnataka Women’s Cricket Team
ಶ್ರೇಯಾಂಕಾ ಪಾಟೀಲ್ ಸ್ಫೋಟಕ ಬ್ಯಾಟಿಂಗ್: 5 ಸಿಕ್ಸರ್, 7 ಬೌಂಡರಿ, 29 ಎಸೆತಗಳಲ್ಲಿ 76 ರನ್; ಆಯ್ಕೆದಾರರಿಗೆ ಕಠಿಣ ಸಂದೇಶ!

ಗುರಿ ಬೆನ್ನಟ್ಟಿದ ರೈಲ್ವೇಸ್ 146 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು. ಈ ಗೆಲುವಿನಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಪ್ರಮುಖ ಪಾತ್ರ ವಹಿಸಿದರು. ಟೂರ್ನಿಯಲ್ಲಿ 10 ಪಂದ್ಯಗಳಿಂದ 22 ವಿಕೆಟ್ ಹಾಗೂ 154 ರನ್ ಗಳಿಸಿ ಅಮೋಘ ಆಲ್‌ರೌಂಡ್ ಪ್ರದರ್ಶನ ನೀಡಿದರು. ಫೈನಲ್‌ನಲ್ಲೂ 29ಕ್ಕೆ 2 ವಿಕೆಟ್ ಪಡೆದು ಮಿಂಚಿದರು.

ಇತಿಹಾಸ ನಿರ್ಮಿಸಿದ ಚಾಂಪಿಯನ್ ಗಳಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಐತಿಹಾಸಿಕ ಗೆಲುವು ನಮ್ಮ ಮಹಿಳಾ ಕ್ರೀಡಾಪಟುಗಳ ಅಸಾಧಾರಣ ಪ್ರತಿಭೆ, ದೃಢತೆ ಮತ್ತು ಛಲವನ್ನು ಪ್ರತಿಬಿಂಬಿಸುತ್ತದೆ ಹಾಗೂ ರಾಜ್ಯಕ್ಕೆ ಅಪಾರ ಹೆಮ್ಮೆಯನ್ನು ತಂದಿದೆ. ಈ ಜಯವು ಕರ್ನಾಟಕದ ಅಸಂಖ್ಯಾತ ಯುವತಿಯರಿಗೆ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸ್ಫೂರ್ತಿಯಾಗಲಿ ಎಂದು ಎಕ್ಸ್ ಪೋಸ್ಟ್ ನಲ್ಲಿ ಸಂದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X