ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video

ಯುವ ಪ್ರತಿಭೆ ಸೂರ್ಯವಂಶಿ, ಯಾವುದೇ ಹಿಂಜರಿಕೆಯಿಲ್ಲದೆ ಎರಡನೇ ಓವರ್‌ನಲ್ಲೇ ಪಾಕಿಸ್ತಾನದ ಬೌಲರ್ ಸಾದ್ ಮಸೂದ್ ವಿರುದ್ಧ ಆಕ್ರಮಣಕಾರಿ ಆಟಕ್ಕೆ ಮುಂದಾದರು.
Vaibhav Sooryavanshi
ವೈಭವ್ ಸೂರ್ಯವಂಶಿ
Updated on: 

ನಿಶಿನ್‌: ಜಪಾನ್ ನ ನಿಶಿನ್‌ ನಗರದ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಆಟಗಾರ ಸೈಮ್ ಅಯುಬ್, ಭಾರತದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Suryavanshi) ಅವರನ್ನು ಔಟ್ ಮಾಡಿದ ನಂತರ ಅಣಕಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತದ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಯುವ ಪ್ರತಿಭೆ ಸೂರ್ಯವಂಶಿ, ಯಾವುದೇ ಹಿಂಜರಿಕೆಯಿಲ್ಲದೆ ಎರಡನೇ ಓವರ್‌ನಲ್ಲೇ ಪಾಕಿಸ್ತಾನದ ಬೌಲರ್ ಸಾದ್ ಮಸೂದ್ ವಿರುದ್ಧ ಆಕ್ರಮಣಕಾರಿ ಆಟಕ್ಕೆ ಮುಂದಾದರು.

ಸೂರ್ಯವಂಶಿ ಆ ಓವರ್‌ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಸತತವಾಗಿ ಬೌಂಡರಿ ಗೆರೆಯಾಚೆಗೆ ಚೆಂಡನ್ನು ಅಟ್ಟುವ ಮೂಲಕ ಎರಡು ಭರ್ಜರಿ ಸಿಕ್ಸರ್‌ಗಳನ್ನು ಬಾರಿಸಿದರು. ಈ ಆಕ್ರಮಣಕಾರಿ ಆಟದ ಫಲವಾಗಿ, ಕೇವಲ ಒಂಬತ್ತು ಎಸೆತಗಳಲ್ಲಿ 15 ರನ್ ಗಳಿಸುವ ಮೂಲಕ ಭಾರತೀಯ ತಂಡದ ಡಗ್‌ಔಟ್‌ನಲ್ಲಿ ಸಂಭ್ರಮದ ವಾತಾವರಣ ನಿರ್ಮಿಸಿದರು.

ಆದಾಗ್ಯೂ, ಮೂರನೇ ಓವರ್‌ನ ಮೊದಲ ಎಸೆತದಲ್ಲೇ ಸೈಮ್ ಅಯೂಬ್ ಮೂಲಕ ಪಾಕಿಸ್ತಾನ ತಿರುಗೇಟು ನೀಡಿತು. ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 9 ಎಸೆತಗಳಲ್ಲಿ 15 ರನ್ ಗಳಿಸಿ ಆಡುತ್ತಿದ್ದಾಗ, ಸೈಮ್ ಅಯೂಬ್ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್ ಮಾಡಲು ಹೋಗಿ ಕ್ಯಾಚ್ ನೀಡಿದರು. ವೈಭವ್ ಅವರ ವಯಸ್ಸು ಕೇವಲ 15 ವರ್ಷ ಆಗಿರುವುದರಿಂದ, ಸೈಮ್ ಅಯೂಬ್ ಅವರು ಕೈಯಲ್ಲಿ ಮಗುವನ್ನು ಎತ್ತಿ ತೂಗುವಂತೆ ಸನ್ನೆ ಮಾಡಿ (Baby Celebration) ವೈಭವ್ ಸೂರ್ಯವಂಶಿಯವರ ಚಿಕ್ಕ ವಯಸ್ಸನ್ನು ಅಣಕಿಸಿದರು.

ವಿಕೆಟ್ ಬಿದ್ದ ಬಳಿಕ ತಮ್ಮ ತಂಡದ ಸಹ ಆಟಗಾರರೊಂದಿಗೆ ಸಂಭ್ರಮಿಸುವ ಬದಲು , ಮಗುವನ್ನು ತೊಟ್ಟಿಲಲ್ಲಿ ತೂಗುವಂತಹ ಸನ್ಹೆಯನ್ನು ಅಯುಬ್ ಮಾಡಿದರು.

Vaibhav Sooryavanshi
ಏಷ್ಯನ್ ಗೇಮ್ಸ್ 2026 ಫೈನಲ್: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಭರ್ಜರಿ ಅರ್ಧ ಶತಕ, ಪಾಕ್ ಗೆಲ್ಲಲು 212 ರನ್ ಗಳ ಗುರಿ ನೀಡಿದ ಭಾರತ!

ಇದು ಸೂರ್ಯವಂಶಿಯ ಚಿಕ್ಕ ವಯಸ್ಸನ್ನು ಅಣಕಿಸಿದ್ದು, ಪಂದ್ಯಕ್ಕೆ ತಕ್ಷಣವೇ ರೋಚಕತೆಯನ್ನು ತುಂಬಿತು. ಏಷ್ಯನ್ ಗೇಮ್ಸ್‌ ಟ್ರೋಫಿ ಗೆಲ್ಲಲು ಸಾಂಪ್ರಾದಾಯಿಕ ಎದುರಾಳಿಗಳ ನಡುವೆ ನಡೆಯುತ್ತಿರುವ ಈ ಕಾದಾಟದಲ್ಲಿ ಮೈದಾನದ ವಾತಾವರಣವನ್ನು ಇನ್ನಷ್ಟು ಬಿಸಿಯಾಗಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com