

ನಿಶಿನ್: ಜಪಾನ್ ನ ನಿಶಿನ್ ನಗರದ ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಏಷ್ಯನ್ ಗೇಮ್ಸ್ 2026ರ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರ ಅರ್ಧಶತಕಗಳ ನೆರವಿನಿಂದ ಭಾರತವು 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು.
ಇದಕ್ಕೂ ಮುನ್ನ ಸಾಹಿಬ್‌ಜಾದಾ ಫರ್ಹಾನ್ ನೇತೃತ್ವದ ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್, ಮೊದಲಿಗೆ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ 9 ಎಸೆತಗಳಲ್ಲಿ 2 ಸಿಕ್ಸರ್ ಗಳೊಂದಿಗೆ 15 ರನ್ ಗಳಿಸಿ ಉಸ್ಮಾನ್ ಖಾನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಅಭಿಷೇಕ್ ಶರ್ಮಾ 7 ಸಿಕ್ಸರ್ , 3 ಬೌಂಡರಿಗಳೊಂದಿಗೆ 61 ರನ್ ಸಿಡಿಸಿದರು. ಬಳಿಕ ಉಸ್ಮಾನ್ ಖಾನ್ ಗೆ ಸ್ಟಂಪ್ ಔಟ್ ಮಾಡಿದರು. ಬಳಿಕ ಬಂದ ಸಂಜು ಸ್ಯಾಮ್ಸನ್ ಕೇವಲ 2 ರನ್ ಗಳಿಗೆ ಔಟಾದರೆ, ನಾಯಕ ಶ್ರೇಯಸ್ ಅಯ್ಯರ್ 21, ಇಶಾನ್ ಕಿಶಾನ್ 20 ರನ್ ಗಳಿಸಿದರು.
ತಿಲಕ್ ವರ್ಮಾ 51 ರನ್ ಸಿಡಿಸಿ ಅಜೇಯರಾಗಿ ಉಳಿದರು. ಶಿವಂ ದುಬೆ 27 ರನ್, ಅಕ್ಷರ್ ಪಟೇಲ್ 1 ರನ್ ಗಳಿಸುವ ಮೂಲಕ ಔಟಾಗದೆ ಉಳಿದರು. ಹೀಗಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು.
ಪಾಕಿಸ್ತಾನ ಪರ ಅಹ್ಮದ್ ದಾನಿಯಲ್ ಹಾಗೂ ಅರ್ಫತ್ ಮಿನ್ ಹ್ಯಾಸ್ ತಲಾ 2 ವಿಕೆಟ್ ಪಡೆದರೆ, ಸಾಯಿಮ್ ಅಯುಬ್, ಅಬ್ರಾರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.