'ನಾನು ಫಲಿತಾಂಶಗಳನ್ನು ತಂದುಕೊಡಬಲ್ಲೆ': LSG ಮಾಲೀಕ ಸಂಜೀವ್ ಗೋಯೆಂಕಾಗೆ ಅನಿರೀಕ್ಷಿತ ಮನವಿ ಮಾಡಿದ ಭಾರತದ ಮಾಜಿ ಆಟಗಾರ!

ಎಲ್‌ಎಸ್‌ಜಿ, ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಬದಲಿಗೆ, ರಿಷಬ್ ಪಂತ್ ಅವರನ್ನು ಬಿಡುಗಡೆ ಮಾಡಿದೆ.
Sanjiv Goenka
ಸಂಜೀವ್ ಗೋಯೆಂಕಾ
Updated on: 

ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್, ಲಕ್ನೋ ಸೂಪರ್ ಜೈಂಟ್ಸ್ (LSG) ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ಫ್ರಾಂಚೈಸಿಯಲ್ಲಿ ಸಂಭಾವ್ಯ ಸ್ಪಿನ್-ಬೌಲಿಂಗ್ ತರಬೇತುದಾರ ಹುದ್ದೆಗೆ ಸಂಪರ್ಕಿಸಿದ್ದಾರೆ. ತಮ್ಮ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶಿವರಾಮಕೃಷ್ಣನ್, ಗೋಯೆಂಕಾ ಅವರಿಗೆ 'ಫಲಿತಾಂಶಗಳನ್ನು ನೀಡುತ್ತೇನೆ' ಎಂದು ಭರವಸೆ ನೀಡಿದ್ದಾರೆ. ಇಂಗ್ಲಿಷ್ ಪ್ರಥಮ ದರ್ಜೆ ಮಾಜಿ ಕ್ರಿಕೆಟಿಗ ಕಾರ್ಲ್ ಕ್ರೋವ್ ಸದ್ಯ LSGಯ ಸ್ಪಿನ್-ಬೌಲಿಂಗ್ ಕೋಚ್ ಆಗಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತೊರೆದ ನಂತರ 2026ರ ಐಪಿಎಲ್‌ಗೆ ಮುಂಚಿತವಾಗಿ ಅವರು ಫ್ರಾಂಚೈಸಿ ಸೇರಿದ್ದಾರೆ.

'ಡಾ. ಸಂಜೀವ್ ಗೋಯೆಂಕಾ, ನಾನು ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್. ನೀವು ಸ್ಪಿನ್ ಬೌಲಿಂಗ್ ಕೋಚ್‌ಗಾಗಿ ಹುಡುಕುತ್ತಿದ್ದರೆ, ದಯವಿಟ್ಟು ನನಗೆ ತಿಳಿಸಿ. ನಾನು ಉತ್ತಮ ಫಲಿತಾಂಶಗಳನ್ನು ನೀಡಬಲ್ಲೆ ಎಂಬ ವಿಶ್ವಾಸ ನನಗಿದೆ' ಎಂದು ಶಿವರಾಮಕೃಷ್ಣನ್ 'X'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಟಿ20 ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಪಂದ್ಯ ಗೆಲ್ಲಿಸಿಕೊಡುವ ಆಟಗಾರರಾಗಬಲ್ಲರು ಎಂಬುದನ್ನು ನಾನು ತೋರಿಸಿಕೊಡಲು ಬಯಸುತ್ತೇನೆ' ಎಂದು ಅವರು ಹೇಳಿದರು.

ಈಮಧ್ಯೆ, ಎಲ್‌ಎಸ್‌ಜಿ (LSG) ಒಂದು ಕುತೂಹಲಕಾರಿ ನಡೆ ಇಟ್ಟಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಬದಲಿಗೆ, ರಿಷಬ್ ಪಂತ್ ಅವರನ್ನು ಬಿಡುಗಡೆ ಮಾಡಿದ್ದು, ಅವರು ಐಪಿಎಲ್ 2027ರ ಆವೃತ್ತಿಗಾಗಿ ಮತ್ತೆ ಡಿಸಿ ತಂಡವನ್ನು ಸೇರಿಕೊಂಡಿದ್ದಾರೆ.

ಪಂತ್ ₹15 ಕೋಟಿಗೆ ಡಿಸಿ ತಂಡ ಸೇರಿಕೊಂಡಿದ್ದರೆ, ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವ ಎಲ್‌ಎಸ್‌ಜಿ ಅವರಿಗೆ ₹13.5 ಕೋಟಿ ಪಾವತಿಸಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಐದು ಯಶಸ್ವಿ ಆವೃತ್ತಿಗಳನ್ನು ಕಳೆದ ನಂತರ, ಕುಲದೀಪ್ ಈಗ ಎಲ್‌ಎಸ್‌ಜಿ ತಂಡವನ್ನು ಸೇರಿಕೊಳ್ಳುತ್ತಿದ್ದಾರೆ.

ಈ ಎಡಗೈ ಸ್ಪಿನ್ನರ್, ಡೆಲ್ಲಿ ಕ್ಯಾಪಿಟಲ್ಸ್‌ ಪರ 65 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಕಬಳಿಸುವ ಮೂಲಕ, ಟೂರ್ನಿಯಲ್ಲಿ ವಿಕೆಟ್ ಪಡೆಯುವ ಅತ್ಯಂತ ಪರಿಣಾಮಕಾರಿ ಬೌಲರ್‌ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com