1st T20I: ಕಿವೀಸ್ ವಿರುದ್ಧ ಬೃಹತ್ ಗುರಿ ಚೇಸ್, ಇತಿಹಾಸ ಬರೆದ ಭಾರತ

ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 226 ರನ್ ಗಳ ಬೃಹತ್ ಮೊತವನ್ನು ಭಾರತ ತಂಡ 19.4 ಓವರ್ ನಲ್ಲೇ ಬೆನ್ನಟ್ಟಿ 4 ವಿಕೆಟ್ ಗಳ ರೋಚಕ ಜಯ ದಾಖಲಿಸಿತು.
Highest successful chases for India in T20Is
ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
Updated on: 

ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 226ರನ್ ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನು ಹತ್ತಿದ ಭಾರತ ತಂಡ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮತ್ತೊಂದು ಮಹತ್ವದ ದಾಖಲೆ ನಿರ್ಮಿಸಿದೆ.

ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 226 ರನ್ ಗಳ ಬೃಹತ್ ಮೊತವನ್ನು ಭಾರತ ತಂಡ 19.4 ಓವರ್ ನಲ್ಲೇ ಬೆನ್ನಟ್ಟಿ 4 ವಿಕೆಟ್ ಗಳ ರೋಚಕ ಜಯ ದಾಖಲಿಸಿತು. ಆ ಮೂಲಕ ಟಿ20 ಇತಿಹಾಸದ ಅತೀ ದೊಡ್ಡ ಗೆಲುವು ಸಾಧಿಸಿತು.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಆರಂಭಿಕ ಹಂತದಲ್ಲೇ ಆಕ್ರಮಣಕಾರಿ ಆಟವಾಡಿ ಪಂದ್ಯವನ್ನು ರೋಚಕ ಘಟ್ಟಕ್ಕೆ ಕೊಂಡೊಯ್ದಿತು.

ಭಾರತದ ಪರ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (67), ನಾಯಕ ಶ್ರೇಯಸ್ ಅಯ್ಯರ್ (42) ಮತ್ತು ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ನಮನ್ ಧೀರ್ ಅಜೇಯ 35 ರನ್ ಗಳಿಸಿ ಭಾರತದ ಗೆಲುವಿನ ರೂವಾರಿಗಳಾದರು.

Highest successful chases for India in T20Is
1st T20I: ಕೊನೆಯ ಕ್ಷಣದವರೆಗೂ ರೋಚಕ ಕಾದಾಟ, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್ ಭರ್ಜರಿ ಜಯ

ಭಾರತದ ಟಿ20 ಇತಿಹಾಸದ ಅತೀ ದೊಡ್ಡ ಗೆಲುವು

ಇನ್ನು ಇಂದು ಭಾರತಕ್ಕೆ ಸಿಕ್ಕ ಈ ಗೆಲುವು ಭಾರತದ ಟಿ20 ಇತಿಹಾಸದಲ್ಲಿ ಚೇಸಿಂಗ್ ವೇಳೆ ಸಿಕ್ಕ ಅತೀ ದೊಡ್ಡ ಜಯವಾಗಿದೆ. ಈ ಹಿಂದೆ 2023ರಲ್ಲಿ ವಿಶಾಖಪಟ್ಟಣಂನಲ್ಲಿ ಆಸ್ಟ್ರೇಲಿಯಾ ವಿರುದ್ಧ 209ರನ್ ಚೇಸ್ ಮಾಡಿತ್ತು.

ಇದು ಈ ವರೆಗಿನ ಭಾರತದ ಅತೀ ದೊಡ್ಡ ಗೆಲುವಾಗಿತ್ತು. ಇದೀಗ ಇಂದು ಭಾರತ ಚೇಸ್ ಮಾಡಿದ 226 ರನ್ ಗಳ ಪಂದ್ಯ ಈ ದಾಖಲೆಯನ್ನು ಮುರಿದು ಹಾಕಿದೆ.

Highest successful chases for India in T20Is

  • 226 vs NZ, Christchurch, 2026

  • 209 vs AUS, Visakhapatnam, 2023

  • 209 vs NZ, Raipur, 2026

  • 208 vs WI, Hyderabad, 2019

  • 207 vs SL, Mohali, 2009

  • 204 vs NZ, Auckland, 2020

Highest successful chases for India in T20Is
1st T20I: ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್: ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಕಿವೀಸ್!

ಚೇಸಿಂಗ್ ವೇಳೆ ನ್ಯೂಜಿಲೆಂಡ್ ವಿರುದ್ಧ ಸಿಕ್ಕ 2ನೇ ದೊಡ್ಡ ಗೆಲುವು

ಅಂತೆಯೇ ಇದು ನ್ಯೂಜಿಲೆಂಡ್ ವಿರುದ್ಧ ಚೇಸಿಂಗ್ ನಲ್ಲಿ ತಂಡವೊಂದಕ್ಕೆ ಸಿಕ್ಕ 2ನೇ ಅತೀ ದೊಡ್ಡ ಗೆಲುವಾಗಿದೆ. ಈ ಹಿಂದೆ 2018ರಲ್ಲಿ ಆಕ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 244ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com