1st T20I: ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್: ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಕಿವೀಸ್!

ಈ ಪಂದ್ಯದಲ್ಲಿ ಕಿವೀಸ್ ಪರ ಗ್ಲೇನ್ ಫಿಲಿಪ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 40 ಎಸೆತಗಳನ್ನು ಎದುರಿಸಿದ ಅವರು 3 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಅಜೇಯ 82 ರನ್ ಕಲೆಹಾಕಿ ನ್ಯೂಜಿಲೆಂಡ್..
New Zealand Script Highest T20I Total at Hagley Oval
ಭಾರತ-ನ್ಯೂಜಿಲೆಂಡ್ ಪಂದ್ಯ
Updated on: 

ಕ್ರೈಸ್ಟ್ ಚರ್ಚ್: ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 225 ರನ್ ಗಳ ಬೃಹತ್ ಮೊತ್ತ ಪೇರಿಸಿದ ನ್ಯೂಜಿಲೆಂಡ್ ತಂಡ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ಇತಿಹಾಸ ನಿರ್ಮಿಸಿದೆ.

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಗ್ಲೇನ್ ಫಿಲಿಪ್ಸ್ (ಅಜೇಯ 82) ಮತ್ತು ಫಿನ್ ಅಲೆನ್ (45 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು.

ಈ ಪಂದ್ಯದಲ್ಲಿ ಕಿವೀಸ್ ಪರ ಗ್ಲೇನ್ ಫಿಲಿಪ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 40 ಎಸೆತಗಳನ್ನು ಎದುರಿಸಿದ ಅವರು 3 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಅಜೇಯ 82 ರನ್ ಕಲೆಹಾಕಿ ನ್ಯೂಜಿಲೆಂಡ್ ಬೃಹತ್ ಮೊತ್ತದಲ್ಲಿ ಮಹತ್ತರ ಪಾತ್ರವಹಿಸಿದರು.

New Zealand Script Highest T20I Total at Hagley Oval
1st T20I: ಕಿವೀಸ್ ಪರ ಗ್ಲೇನ್ ಫಿಲಿಪ್ಸ್ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ ಗೆಲ್ಲಲು 226 ರನ್ ಬೃಹತ್ ಟಾರ್ಗೆಟ್

ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ದಾಖಲೆ

ಈ ಬೃಹತ್ ಮೊತ್ತದೊಂದಿಗೆ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನ್ಯೂಜಿಲೆಂಡ್ ತಂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. 2026ರಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿರುವ ನ್ಯೂಜಿಲೆಂಡ್, ಈ ಮೈದಾನದಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತನ್ನ ಗರಿಷ್ಠ ಮೊತ್ತ ದಾಖಲಿಸಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಪಂದ್ಯಗಳಲ್ಲಿ ಕಿವೀಸ್ ತಂಡ ಹಲವು ಬಾರಿ 200ಕ್ಕೂ ಅಧಿಕ ರನ್ ಗಳಿಸಿದೆ. ಈ ಪಟ್ಟಿಯಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ದಾಖಲಾದ 225/4 ಮೊತ್ತ ಅಗ್ರಸ್ಥಾನಕ್ಕೇರಿದೆ. ತಿರುವನಂತಪುರದಲ್ಲಿ 2026ರಲ್ಲಿ ದಾಖಲಿಸಿದ 225 ರನ್‌ಗಳ ಮೊತ್ತವೂ ಈ ಪಟ್ಟಿಯಲ್ಲಿದೆ.

ಭಾರತದ ವಿರುದ್ಧ ನ್ಯೂಜಿಲೆಂಡ್‌ನ 200ಕ್ಕೂ ಅಧಿಕ ಮೊತ್ತಗಳು

  • 225/4 – ಕ್ರೈಸ್ಟ್‌ಚರ್ಚ್, 2026

  • 225 – ತಿರುವನಂತಪುರ, 2026

  • 219/6 – ವೆಲ್ಲಿಂಗ್ಟನ್, 2019

  • 215/7 – ವಿಶಾಖಪಟ್ಟಣ, 2026

  • 212/4 – ಹ್ಯಾಮಿಲ್ಟನ್, 2019

  • 208/6 – ರಾಯ್‌ಪುರ, 2026 (ಸೋಲು)

  • 203/5 – ಆಕ್ಲೆಂಡ್, 2020 (ಸೋಲು)

ದೊಡ್ಡ ಮೊತ್ತ ಗಳಿಸಿದರೂ ಸೋಲು ಕಂಡಿದ್ದ ಕಿವೀಸ್

ಭಾರತದ ವಿರುದ್ಧ ನ್ಯೂಜಿಲೆಂಡ್ ಹಲವು ಬಾರಿ 200ಕ್ಕೂ ಅಧಿಕ ರನ್ ಗಳಿಸಿದ್ದರೂ, ದೊಡ್ಡ ಮೊತ್ತ ಗಳಿಸಿದ ಮಾತ್ರಕ್ಕೆ ಗೆಲುವು ಖಚಿತವಾಗಿಲ್ಲ. 2020ರಲ್ಲಿ ಆಕ್ಲೆಂಡ್‌ನಲ್ಲಿ 203/5 ಹಾಗೂ 2026ರಲ್ಲಿ ರಾಯ್‌ಪುರದಲ್ಲಿ 208/6 ರನ್ ಗಳಿಸಿದರೂ ನ್ಯೂಜಿಲೆಂಡ್ ಸೋಲು ಕಂಡಿತ್ತು.

ಹ್ಯಾಗ್ಲಿ ಓವಲ್‌ನಲ್ಲಿ ದಾಖಲಿಸಿದ 225/4 ಮೊತ್ತವು ಭಾರತದ ವಿರುದ್ಧದ ನ್ಯೂಜಿಲೆಂಡ್‌ನ ದೊಡ್ಡ ಟಿ20 ಮೊತ್ತಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com