ಕೇವಲ 114 ಎಸೆತಗಳಲ್ಲಿ ದ್ವಿಶತಕ: ಗಿಲ್ ದಾಖಲೆ ಪುಡಿಗಟ್ಟಿ ಹೊಸ ವಿಶ್ವದಾಖಲೆ ಬರೆದ ಹ್ಯಾರಿ ಬ್ರೂಕ್!

ರಾವಲ್ಪಿಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡದ ಬ್ರೂಕ್, ಕೇವಲ 114 ಎಸೆತಗಳಲ್ಲಿ ಸ್ಫೋಟಕ ದ್ವಿಶತಕ ಸಿಡಿಸುವ ಮೂಲಕ ಅಸಾಮಾನ್ಯ ಸಾಧನೆ ಮಾಡಿದರು.
Brook Breaks Gill's Record With Fastest ODI Double Ton
ಹ್ಯಾರಿ ಬ್ರೂಕ್
Updated on: 

ರಾವಲ್ಪಿಂಡಿ: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ನಾಯಕ ಹ್ಯಾರಿ ಬ್ರೂಕ್ ಅವರು ದಾಖಲೆಯ ಅತಿ ವೇಗದ ದ್ವಿಶತಕ ಸಿಡಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಇಂದು ರಾವಲ್ಪಿಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡದ ಬ್ರೂಕ್, ಕೇವಲ 114 ಎಸೆತಗಳಲ್ಲಿ ಸ್ಫೋಟಕ ದ್ವಿಶತಕ ಸಿಡಿಸುವ ಮೂಲಕ ಅಸಾಮಾನ್ಯ ಸಾಧನೆ ಮಾಡಿದರು.

ಶ್ರೀಲಂಕಾ ಬೌಲರ್‌ಗಳನ್ನು ಅಕ್ಷರಶಃ ದಂಡಿಸಿದ ಬ್ರೂಕ್​, 16 ಬೌಂಡರಿ ಹಾಗೂ 10 ಸಿಕ್ಸರ್‌ಗಳ ಸಹಿತ 202 ರನ್ ಬಾರಿಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆಗೆ ಬ್ರೂಕ್ ಪಾತ್ರರಾಗಿದ್ದಾರೆ.

Brook Breaks Gill's Record With Fastest ODI Double Ton
India vs New Zealand: ಭುವಿ ಭರ್ಜರಿ ಕಂಬ್ಯಾಕ್; ವಿಶ್ವ ದಾಖಲೆ ಬರೆದ 'ಸ್ವಿಂಗ್ ಸುಲ್ತಾನ್'!

ಶುಭಮಾನ್ ಗಿಲ್ ದಾಖಲೆ ಪುಡಿಗಟ್ಟಿದ ಬ್ರೂಕ್

ಕಳೆದ ತಿಂಗಳಷ್ಟೆ ಶುಭಮಾನ್ ಗಿಲ್ ಅವರು ವೆಸ್ಟ್ ಇಂಡೀಸ್ ವಿರುದ್ಧ 117 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಅತಿ ವೇಗವಾಗಿ ದ್ವಿಶತಕ ಬಾರಿಸಿದ ದಾಖಲೆ ನಿರ್ಮಿಸಿದ್ದರು.

ಇದೀಗ ಬ್ರೂಕ್ ಕೇವಲ 114 ಎಸೆತಗಳಲ್ಲೇ ದ್ವಿಶತಕ ಪೂರೈಸಿದ್ದು, ಶುಭ್‌ಮನ್ ಗಿಲ್ ದಾಖಲೆಯನ್ನು ಪುಡಿಪುಡಿಗಟ್ಟಿ, ಹೊಸ ದಾಖಲೆ ನಿರ್ಮಿಸಿದ್ದಾರೆ.

ಅತಿ ವೇಗವಾಗಿ ದ್ವಿಶತಕ ಬಾರಿಸಿದ ಆಟಗಾರರು

  • 114 ಎಸೆತಗಳು – ಹ್ಯಾರಿ ಬ್ರೂಕ್ (ಇಂಗ್ಲೆಂಡ್) vs ಶ್ರೀಲಂಕಾ (2026)

  • 117 ಎಸೆತಗಳು – ಶುಭ್‌ಮನ್ ಗಿಲ್ (ಭಾರತ) vs ವೆಸ್ಟ್ ಇಂಡೀಸ್ (2026)

  • 126 ಎಸೆತಗಳು – ಇಶಾನ್ ಕಿಶನ್ (ಭಾರತ) vs ಬಾಂಗ್ಲಾದೇಶ (2022)

  • 128 ಎಸೆತಗಳು – ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) vs ಅಫ್ಘಾನಿಸ್ತಾನ (2023)

  • 136 ಎಸೆತಗಳು – ಪತುಮ್ ನಿಸ್ಸಾಂಕ (ಶ್ರೀಲಂಕಾ) vs ಅಫ್ಘಾನಿಸ್ತಾನ (2024)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com