'ಕ್ಯಾಪ್ಟನ್ ಮಿಲ್ ಗಯಾ ಹೈ ಕೆಕೆಆರ್ ಕೋ': IPL 2027ಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ

ರಿಂಕು 2018 ರಿಂದ KKR ನಲ್ಲಿದ್ದಾರೆ. 2020ರ ದಶಕದಲ್ಲಿ ಫ್ರಾಂಚೈಸಿಯ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಬೆಳೆಯುತ್ತಿದ್ದಾರೆ ಮತ್ತು IPL 2024ರಲ್ಲಿ ಅವರು ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದರು.
Suresh Raina
ಸುರೇಶ್ ರೈನಾ
Updated on

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಐಪಿಎಲ್ 2027ನೇ ಆವೃತ್ತಿಗೆ ಹೊಸ ನಾಯಕನ ಅಗತ್ಯವಿದೆ. ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡ ಸತತ ಎರಡು ನಿರಾಶಾದಾಯಕ ಆವೃತ್ತಿಗಳನ್ನು ಎದುರಿಸಿದ್ದು, ನಾಯಕರಾಗಿದ್ದ ಅಜಿಂಕ್ಯ ರಹಾನೆ ಈಗ ನಿವೃತ್ತಿ ಹೊಂದಿರುವುದರಿಂದ, ಹೊಸ ನಾಯಕನ ಹುಡುಕಾಟ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರಂತಹ ಆಟಗಾರರು ಕೆಕೆಆರ್‌ಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎಂಬ ವದಂತಿಗಳಿವೆ. ಆದಾಗ್ಯೂ, ಭಾರತದ ಮಾಜಿ ಕ್ರಿಕೆಟಿಗ ಮತ್ತು ಐಪಿಎಲ್ ದಂತಕಥೆ ಸುರೇಶ್ ರೈನಾ, ಕೆಕೆಆರ್‌ಗೆ ಈಗಾಗಲೇ ಉತ್ತಮ ನಾಯಕನಾಗುವ ಅಭ್ಯರ್ಥಿಯನ್ನು ಹೊಂದಿದೆ ಎಂದಿದ್ದಾರೆ. ಅದುವೇ ರಿಂಕು ಸಿಂಗ್.

ರಿಂಕು ಇತ್ತೀಚೆಗೆ ಉತ್ತರ ಪ್ರದೇಶದ ಫ್ರಾಂಚೈಸಿ ಸ್ಪರ್ಧೆಯಾದ 2026ರ UPT20 ಆವೃತ್ತಿಯಲ್ಲಿ ಮೀರತ್ ಮಾವರಿಕ್ಸ್ ತಂಡವನ್ನು ಪ್ರಶಸ್ತಿಗೆ ಕೊಂಡೊಯ್ದರು. 2025ರಲ್ಲಿ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು.

ರಿಂಕು ತಮ್ಮ ನಾಯಕತ್ವದ ಅರ್ಹತೆಯನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ ಮತ್ತು 2027ರ ಐಪಿಎಲ್‌ನಲ್ಲಿ ಕೆಕೆಆರ್ ಅವರಿಗೆ ಹಾಟ್‌ಸೀಟ್‌ನಲ್ಲಿ ಅವಕಾಶ ನೀಡಬಹುದು ಎಂದು ರೈನಾ ಹೇಳಿದ್ದಾರೆ.

'ರಿಂಕು ಅವರ ನಾಯಕತ್ವವು ಪ್ರಶಂಸೆಗೆ ಅರ್ಹವಾಗಿದೆ. ಮೀರತ್ ಮಾವೆರಿಕ್ಸ್‌ಗೆ ನಾಲ್ಕನೇ ಸೀಸನ್, ನಾಲ್ಕನೇ ಫೈನಲ್. ಕೆಕೆಆರ್ ನಾಯಕನನ್ನು ಹುಡುಕುತ್ತಿದೆ. ಆದರೆ, ಅವರು ಅವರನ್ನು ಕಂಡುಕೊಂಡಿರಬಹುದು ಎಂದು ನಾನು ಭಾವಿಸುತ್ತೇನೆ' ಎಂದು ರೈನಾ ಹೇಳಿದರು.

'ಥೋಡಾ ಇನ್ವೆಸ್ಟ್ ಕೀಜಿಯೇ ರಿಂಕು ಸಿಂಗ್ ಪೆ, ಥೋಡಾ ಮ್ಯಾಚ್ಸ್ ದೀಜಿಯೇ (ರಿಂಕು ಸಿಂಗ್ ಅವರಲ್ಲಿ ಹೂಡಿಕೆ ಮಾಡಬೇಕು, ಅವರಿಗೆ ಕೆಲವು ಪಂದ್ಯಗಳನ್ನು ನೀಡಬೇಕು). ಏನಾಗುತ್ತದೆ ಎಂದು ನಿಮಗೆ ಗೊತ್ತಿಲ್ಲ' ಎಂದು ಹೇಳಿದರು.

Suresh Raina
ನಿವೃತ್ತಿ ಬಳಿಕ ಹೊಸ ಕೆಲಸ ಆರಂಭಿಸಿದ ಅಜಿಂಕ್ಯ ರಹಾನೆ; ಭಾರತ-ಶ್ರೀಲಂಕಾ ಸರಣಿ ಟೆಸ್ಟ್ ಕಾಮೆಂಟೇಟರ್ ಆಗಿ ಪದಾರ್ಪಣೆ!

ರಿಂಕು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಂತಹ ದೇಶೀಯ ಪಂದ್ಯಾವಳಿಗಳಲ್ಲಿ ಉತ್ತರ ಪ್ರದೇಶ ತಂಡದ ನಾಯಕತ್ವ ವಹಿಸಿದ್ದಾರೆ.

ರಿಂಕು 2018 ರಿಂದ KKR ನಲ್ಲಿದ್ದಾರೆ. 2020ರ ದಶಕದಲ್ಲಿ ಫ್ರಾಂಚೈಸಿಯ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಬೆಳೆಯುತ್ತಿದ್ದಾರೆ ಮತ್ತು IPL 2024ರಲ್ಲಿ ಅವರು ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದರು.

ಇತ್ತೀಚಿನ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಭಾವ್ಯ ಟ್ರೇಡಿಂಗ್ ಕುರಿತು ಕೆಕೆಆರ್ ಮುಂಬೈ ಇಂಡಿಯನ್ಸ್ (ಎಂಐ) ಜೊತೆ ಚರ್ಚೆ ನಡೆಸಿದೆ. ಆದರೆ, ಒಪ್ಪಂದ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com