Friendship Cup ಜೊತೆಗೇ ಆಫ್ಘನ್ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ; Sarpanch Saab ಮಾಡಿದ್ದೇನು?

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ 127 ರನ್ ಅಂತರದ ಭರ್ಜರಿ ಜಯ ಸಾಧಿಸಿತು.
Shreyas Iyers Gesture Goes Viral As India-Afghanistan Series Lives Up To Friendship Cup Tagline
ಆಫ್ಘನ್ ನಾಯಕನೊಂದಿಗೆ ಪ್ರಶಸ್ತಿ ಹಂಚಿಕೊಂಡ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್
Updated on

ನವದೆಹಲಿ: ಭಾರತ-ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿದ್ದು, ಕಪ್ ಗೆಲ್ಲುವುದರೊಂದಿಗೆ ಆಫ್ಘನ್ ಅಭಿಮಾನಿಗಳ ಮನವನ್ನೂ ಗೆದ್ದಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ 127 ರನ್ ಅಂತರದ ಭರ್ಜರಿ ಜಯ ಸಾಧಿಸಿತು.

ಈ ಪಂದ್ಯದಲ್ಲಿ ಭಾರತದ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಡೆಸಿ ದಾಖಲೆಯ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಆ ಮೂಲಕ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತು.

ಅಭಿಷೇಕ್ ಶರ್ಮಾ (108) ಶತಕ ಮತ್ತು ಸಂಜು ಸ್ಯಾಮ್ಸನ್ (50) ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 221 ರನ್ ಪೇರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಆಫ್ಘಾನಿಸ್ತಾನ 94 ರನ್ ಗಳಿಗೆ ಆಲೌಟ್ ಆಯಿತು.

ಭಾರತದ ಪರ ನಿತೀಶ್ ಕುಮಾರ್ ರೆಡ್ಡಿ ಮತ್ತು ರವಿ ಬಿಷ್ಣೋಯ್ ತಲಾ 3 ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ 2 ಮತ್ತು ಯಶ್ ಠಾಕೂರ್, ಜಸ್ ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು.

Shreyas Iyers Gesture Goes Viral As India-Afghanistan Series Lives Up To Friendship Cup Tagline
'ಅಡಗಿಕೊಳ್ಳಲು ಈಗ ಎಲ್ಲಿಯೂ ಜಾಗವಿಲ್ಲ': ಭಾರತ ವಿರುದ್ಧದ T20 ಸರಣಿ ಸೋಲಿನ ಬಳಿಕ ಅಫ್ಘಾನಿಸ್ತಾನದ ಕೋಚ್ ರಿಚರ್ಡ್ ಪೈಬಸ್!

ಫ್ರೆಂಡ್‌ಶಿಪ್ ಕಪ್ ಹಂಚಿಕೊಂಡ ನಾಯಕ ಶ್ರೇಯಸ್ ಅಯ್ಯರ್

ಸರಣಿ ಮುಗಿದ ಬಳಿಕ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾಡಿದ ವಿಶೇಷ ಕಾರ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

‘ಫ್ರೆಂಡ್‌ಶಿಪ್ ಕಪ್’ ಎಂಬ ಸರಣಿಯ ಘೋಷವಾಕ್ಯಕ್ಕೆ ತಕ್ಕಂತೆ ನಡೆದ ಈ ಹೃದಯಸ್ಪರ್ಶಿ ಕ್ಷಣದಲ್ಲಿ, ಟ್ರೋಫಿಯೊಂದಿಗೆ ಭಾರತ ತಂಡದ ಆಟಗಾರರು ಫೋಟೋಗೆ ನಿಂತಿದ್ದಾಗ ಶ್ರೇಯಸ್ ಅಯ್ಯರ್ ಅವರು ಅಫ್ಘಾನಿಸ್ತಾನದ ನಾಯಕ ಇಬ್ರಾಹಿಂ ಜದ್ರಾನ್ ಅವರನ್ನು ಕೂಡ ತಮ್ಮೊಂದಿಗೆ ಫೋಟೋಗೆ ಬರುವಂತೆ ಆಹ್ವಾನಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಭಾರತದ ಇಶಾನ್ ಕಿಶನ್ ಮತ್ತು ಶ್ರೇಯಸ್ ಸೇರಿದಂತೆ ಭಾರತ ತಂಡದ ಹಲವು ಆಟಗಾರರು ಜದ್ರಾನ್ ಅವರನ್ನು ತಮ್ಮೊಂದಿಗೆ ಫೋಟೋಗೆ ಸೇರಿಕೊಳ್ಳುವಂತೆ ಕರೆಯುತ್ತಿರುವುದು ಕಾಣಿಸುತ್ತದೆ.

ಆಫ್ಘನ್ ಅಭಿಮಾನಿಗಳ ಮೆಚ್ಚುಗೆ

ಭಾರತ ಸರಣಿಯನ್ನು 3-0 ಅಂತರದಲ್ಲಿ ಗೆದ್ದಿದ್ದರೂ, ಎದುರಾಳಿ ತಂಡದ ನಾಯಕನನ್ನು ಗೆಲುವಿನ ಸಂಭ್ರಮದಲ್ಲಿ ತಮ್ಮೊಂದಿಗೆ ಸೇರಿಸಿಕೊಂಡ ಶ್ರೇಯಸ್ ಅವರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತ ವೇದಿಕೆಯಲ್ಲಿ ಭಾರತ ತಂಡ ಆಫ್ಘನ್ ತಂಡದ ನಾಯಕ ಜಡ್ರಾನ್ ಜೊತೆ ಪ್ರಶಸ್ತಿ ಹಂಚಿಕೊಳ್ಳುತ್ತಲೇ ಕ್ರೀಡಾಂಗಣದಲ್ಲಿ ಆಫ್ಘನ್ ಅಭಿಮಾನಿಗಳು ಕೂಗುತ್ತಾ ತಮ್ಮ ಮೆಚ್ಚುಗೆ ಸೂಚಿಸಿದರು.

ಮಾತ್ರವಲ್ಲದೇ ಭಾರತದಲ್ಲೇ ಅಫ್ಘಾನಿಸ್ತಾನ ಆತಿಥ್ಯ ವಹಿಸಿದ್ದ ಈ ಸರಣಿಯು ಉಭಯ ತಂಡಗಳ ನಡುವಿನ ಕ್ರಿಕೆಟ್ ಸಂಬಂಧದ ದೃಷ್ಟಿಯಿಂದಲೂ ವಿಶೇಷವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com