ಚಿನ್ನದ ನಾಣ್ಯ ಪ್ರಕರಣ: ಆರೋಪಿಗಳಿಂದ ಮತ್ತೆ 636 ಚಿನ್ನದ ನಾಣ್ಯಗಳು ವಶಕ್ಕೆ

ಶೌಚಾಲಯಕ್ಕೆ ಗುಂಡಿ ಅಗೆಯಬೇಕಾದರೆ ಕಾರ್ಮಿಕರಿಗೆ ಸಿಕ್ಕಿದ್ದು 93 ಚಿನ್ನದ ನಾಣ್ಯಗಳಲ್ಲ...
ಚಾಮರಾಜನಗರದ ಹರದನಹಳ್ಳಿಯಲ್ಲಿ ಸಿಕ್ಕಿದ ಚಿನ್ನದ ನಾಣ್ಯಗಳು
ಚಾಮರಾಜನಗರದ ಹರದನಹಳ್ಳಿಯಲ್ಲಿ ಸಿಕ್ಕಿದ ಚಿನ್ನದ ನಾಣ್ಯಗಳು

ಚಾಮರಾಜನಗರ: ಶೌಚಾಲಯಕ್ಕೆ ಗುಂಡಿ ಅಗೆಯಬೇಕಾದರೆ ಕಾರ್ಮಿಕರಿಗೆ ಸಿಕ್ಕಿದ್ದು 93 ಚಿನ್ನದ ನಾಣ್ಯಗಳಲ್ಲ, ಬರೋಬ್ಬರಿ 636 ನಾಣ್ಯಗಳು.

ಡಿಸೆಂಬರ್ 1ರಂದು ಚಾಮರಾಜನಗರದ ಹರದನಹಳ್ಳಿಯಲ್ಲಿ ಸಿದ್ದಿಕಿ ಎಂಬುವವರ ಜಾಗದಲ್ಲಿ ಶೌಚಾಲಯಕ್ಕೆ ಗುಂಡಿ ಅಗೆಯಬೇಕಾದರೆ, ಕಾರ್ಮಿಕರಿಗೆ 93 ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿತ್ತು.

ಆದರೆ, ಗುಂಡಿ ಅಗೆದ ಕಾರ್ಮಿಕರಿಗೆ ಸಿಕ್ಕಿದ್ದು 93 ಚಿನ್ನದ ನಾಣ್ಯಗಳಲ್ಲ. ಸಿಕ್ಕಿದ್ದು 636 ಚಿನ್ನದ ನಾಣ್ಯಗಳು. ಕಾರ್ಮಿಕರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸಿಕ್ಕಿದ್ದು 636 ಚಿನ್ನದ ನಾಣ್ಯಗಳೆಂದು ಬಾಯ್ಬಿಟ್ಟಿದ್ದಾರೆ.

ಚಿನ್ನದ ನಾಣ್ಯಗಳು ಪತ್ತೆಯಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಚಿನ್ನದ ನಾಣ್ಯಗಳನ್ನು ಕಾರ್ಮಿಕರಿಂದ ವಶಕ್ಕೆ ಪಡೆದ ರಾಮಸಮುದ್ರ ಠಾಣೆ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಸುಂದರ್, ಕುಮಾರ್, ನಂಜುಂಡ ಮತ್ತು ಸುರೇಶ್ ಬಂಧಿತ ಆರೋಪಿಗಳು.

ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗಾಗಿ ನಾಣ್ಯಗಳನ್ನು ಕಳುಹಿಸಲಾಗಿತ್ತು. ಹೈದಾರಲಿ, ತಂಜಾವೂರಿನ ಮರಾಠ ಕಾಲದ ನಾಣ್ಯಗಳು ಪತ್ತೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com