'ಕರ್ನಾಟಕ ಮೊಬೈಲ್ ಒನ್' ಚಾಲನೆಗೆ ಕ್ಷಣಗಣನೆ

600ಕ್ಕೂ ಹೆಚ್ಚು ಇಲಾಖೆಗಳ ಸೇವೆಗಳು ಹಾಗೂ ಮಾಹಿತಿಯನ್ನು ತಿಳಿಯಬಹುದು...
'ಕರ್ನಾಟಕ ಮೊಬೈಲ್ ಒನ್' ಚಾಲನೆಗೆ ಕ್ಷಣಗಣನೆ
Updated on

ಬೆಂಗಳೂರು: ಮೊಬೈಲ್ ಮೂಲಕ ಸರ್ಕಾರದ ನಾನಾ ಸೇವೆಗಳು ಜನಸಾಮಾನ್ಯರಿಗೆ ಲಭ್ಯವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಯೋಜನೆಗೆ ಮುಂದಾಗಿದೆ. ಮೊಬೈಲ್ ಮೂಲಕ ಸರ್ಕಾರದ ವಿವಿಧ ಇಲಾಖೆಗಳ ಸೇವೆ ಪಡೆಯಲು 'ಕರ್ನಾಟಕ ಮೊಬೈಲ್ ಒನ್' ಸೇವೆ ಉಪಯೋಗಿಕಾರಿಯಾಗಲಿದೆ.

ತುಮಕೂರು ರಸ್ತೆಯಲ್ಲಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆಯೋಜಿಸಲಾಗಿರುವ 'ಕರ್ನಾಟಕ ಮೊಬೈಲ್ ಒನ್' ಸೇವೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.

'ಕರ್ನಾಟಕ ಮೊಬೈಲ್ ಒನ್' ಸೇವೆಯು ದೇಶದ ಯಾವುದೇ ಮೂಲೆಯಿಂದಲೂ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಸೇವೆಗಳ ಮಾಹಿತಿ ಅಥವಾ ಲಾಭವನ್ನು ಪಡೆಯಬಹುದಾದ ತಂತ್ರಜ್ಞಾನವಾಗಿದೆ.

ರಾಜ್ಯದ ಇ-ಗವರ್ನೆನ್ಸ್ನಲ್ಲಿ 'ಕರ್ನಾಟಕದ ಮೊಬೈಲ್ ಒನ್' ಪ್ರಮುಖ ಪಾತ್ರ ವಹಿಸಲಿದೆ. ಶಿಕ್ಷಣ, ಪೊಲೀಸ್, ಸಾರಿಗೆ, ಗ್ರಾಮೀಣಾಬಿವೃದ್ಧಿ, ಅಬಕಾರಿ, ಅರಣ್ಯ, ಪರಿಸರ, ಸೇರಿದಂತೆ 600ಕ್ಕೂ ಹೆಚ್ಚು ಇಲಾಖೆಗಳ ಸೇವೆಗಳು ಹಾಗೂ ಮಾಹಿತಿಯನ್ನು ತಿಳಿಯಬಹುದು. ಅಲ್ಲದೆ ವ್ಯಾಪಾರ-ವಹಿವಾಟಿಗೆ ಸಂಬಂಧಿತ ಸೇವೆಗಳನ್ನು ಸಹ ಸಾರ್ವಜನಿಕರು ಪಡೆಯಬಹುದು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಹಾಗೂ ರಾಷ್ಟ್ರಪತಿ ಆಗಮನದ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com