ಸೌಮ್ಯ ಕೊಲೆ ಆರೋಪಿ ಸತೀಶ್‌ಗೆ ಜೀವಾವಧಿ ಶಿಕ್ಷೆ

ಜೀವಾವಧಿ ಶಿಕ್ಷೆ
ಜೀವಾವಧಿ ಶಿಕ್ಷೆ

ಮಂಗಳೂರು: 2013ರ ಫೆಬ್ರವರಿಯಲ್ಲಿ ಬಂಟ್ವಾಳ ತಾಲೂಕಿನ ಬಾಳ್ತಿಲ ದಾಸಕೋಡಿ ಎಂಬಲ್ಲಿ ಅತ್ಯಾಚಾರಕ್ಕೆ ಪ್ರತಿರೋಧ ತೋರಿದ ಸೌಮ್ಯಳನ್ನು ದಾರುಣವಾಗಿ ಕೊಲೆ ಮಾಡಿದ್ದ ಸತೀಶ್ ಎಂಬಾತನಿಗೆ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೆಳ ಹಂತದ ನ್ಯಾಯಾಲಯ ಆರೋಪಿ ಸತೀಶ ತಪ್ಪಿತಸ್ಥನೆಂದು ಘೋಷಿಸಿತ್ತು. ಶಿಕ್ಷೆಯ ಪ್ರಮಾಣವನ್ನು ಡಿಸೆಂಬರ್ 5ಕ್ಕೆ ಮುಂದೂಡಿತ್ತು. ನಿನ್ನೆ ಶಿಕ್ಷೆಯ ಪ್ರಮಾಣ ಘೋಷಿಸಿದ ನ್ಯಾಯಾಲಯ ಸತೀಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಬಾಳ್ತಿಲ ಗ್ರಾಮದ ನಿವಾಸಿ 22 ವರ್ಷದ ಸೌಮ್ಯಳನ್ನು 2013ರ ಫೆಬ್ರವರಿ 24 ರಂದು ಆರೋಪಿ ಸತೀಶ್ ಆಕೆ ಬರುವ ದಾರಿಯಲ್ಲಿ ಹೊಂಚು ಹಾಕಿ ಕುಳಿತು ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿದ್ದಾನೆ. ಈ ವೇಳೆ ಆಕೆ ಪ್ರತಿರೋಧ ತೋರಿದ್ದಳು.

ಅಷ್ಟಕ್ಕೆ ಬಿಡದ ಪಾಪಿ ಸತೀಶ ಸೌಮ್ಯಳನ್ನು ರಸ್ತೆ ಪಕ್ಕದ ಗುಡ್ಡಕ್ಕೆ ಎಳೆದೊಯ್ದಿದ್ದಾನೆ. ಇದರಿಂದ ಗಾಬರಿಗೊಂಡ ಸೌಮ್ಯ ಈ ವಿಷಯವನ್ನು ಊರಿನವರಿಗೆ ತಿಳಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಇದರಿಂದ ಹೆದರಿದ ಸತೀಶ್ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.

ನಾಪತ್ತೆಯಾಗಿದ್ದ ಸೌಮ್ಯಳ ಕೈಯಲ್ಲಿದ್ದ ಟವೆಲ್, ಮೊಬೈಲ್ ಹಾಗೂ ಇತರ ವಸ್ತುಗಳು ರಸ್ತೆ ಬದಿ ಪತ್ತೆಯಾಗಿದ್ದವು. ನಂತರ ಸ್ಥಳೀಯರು ಹುಡುಕಾಟ ನಡೆಸಿದಾಗ ಆಕೆಯ ಮೃತದೇಹ ಕೆರೆಯ ಪಕ್ಕ ಪತ್ತೆಯಾಗಿತ್ತು. ಈ ವೇಳೆ ಸತೀಶ ಸ್ಥಳದಲ್ಲೇ ಇದ್ದ. ಸತೀಶನ ಮೇಲೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರಿಂದ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ದುಷ್ಕೃತ್ಯ ಬಯಲಾಗಿತ್ತು.

ವೈದ್ಯಕೀಯ ಪರೀಕ್ಷೆ, ಪೊಲೀಸ್ ತನಿಖೆ ಎಲ್ಲದರಿಂದ ಆರೋಪಿ ತಪ್ಪಿತಸ್ಥ ಎನ್ನುವುದು ಸಾಬೀತಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com