
ಬೆಂಗಳೂರು: ಚಾಕುವಿನಿಂದ ಬೆದರಿಸಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನಂದಿನಿ ಲೇಔಟ್‌ನ ರಾಜೀವ್ ಗಾಂಧಿ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮನೆ ಮುಂದೆ ಆಟವಾಡುತ್ತಿದ್ದ 14 ವರ್ಷದ ಬಾಲಕಿಯನ್ನು ಉದ್ಯಾನಕ್ಕೆ ಎಳೆದೊಯ್ದ ಇಬ್ಬರು ಯುವಕರು, ಚಾಕುವಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಂಠೀರವ ನಗರದ ನಿವಾಸಿಗಳಾದ ಲೋಕೇಶ್ ನರಸಿಂಹಯ್ಯ ಮತ್ತು ಕೃಷ್ಣಾನಂದನಗರದ ಮನೋಜ್(21) ಬಂಧಿತರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿ, ಬಂಧಿತ ಲೋಕೇಶ್ ಮತ್ತು ಮನೋಜ್ ಕೂಲಿ ಕಾರ್ಮಿಕರು. ಮಂಗಳವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಬಾಲಕಿಯನ್ನು ಪಾರ್ಕ್‌ಗೆ ಎಳೆದೊಯ್ದಿದ್ದಾರೆ. ಕೂಗಾಡಿದರೆ ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ ಎಂದು ವಿವರಿಸಿದರು.
ರಾತ್ರಿ ಮಗಳು ಮನೆಗೆ ಬಾರದಿರುವುದರಿಂದ ಅನುಮಾನಗೊಂಡ ಪೋಷಕರು ಆಕೆಗಾಗಿ ಹುಡುಕಾಟ ನಡೆಸಿದಾಗ ಪಾರ್ಕ್‌ನ ಬಳಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ತಿಳಿದುಬಂದಿದೆ. ತಕ್ಷಣ ಆಸ್ಪತ್ರೆಗೆ ಸಾಗಿ ಸಿದ್ದು, ಆಕೆ ಚೇತರಿಸಿಕೊಂಡ ನಂತರ ವಿಷಯ ತಿಳಿಸಿದ್ದಾಳೆ. ನಂತರ ಪೋಷಕರು ದೂರು ದಾಖಲಿಸಿದ್ದರು. ನಂದಿನಿ ಲೇಔಟ್ ಠಾಣೆ ಪೊಲೀಸರು ಬುಧವಾರ ಬೆಳಗ್ಗೆ ಆರೋಪಿಗಳನ್ನು ಬಂಧಿಸಿದರು.
ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Advertisement