
ಬೆಂಗಳೂರು: ಉಗ್ರ ಯಾಸೀನ್ ಭಟ್ಕಳ್ ಜತೆ ನಂಟಿನ ಶಂಕೆ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಆತನನ್ನು ತಪ್ಪಾಗಿ ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾಸೀನ್ ಭಟ್ಕಳ್‌ನ ಆಪ್ತನಾಗಿದ್ದ ಅಬ್ದುಲ್ ಖಾದೀರ್ ಸುಲ್ತಾನ್ ವಿರುದ್ಧ ಲುಕ್‌ಔಟ್(ಎಲ್‌ಓಸಿ) ನೋಟಿಸ್ ಜಾರಿ ಮಾಡಲಾಗಿತ್ತು. ಹೀಗಾಗಿ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ವ್ಯಕ್ತಿಯ ಹೆಸರು ಯಾಸೀನ್ ಭಟ್ಕಳನ ಆಪ್ತನ ಹೆಸರು ಒಂದೇ ಆಗಿದ್ದರಿಂದ ತಪ್ಪಾಗಿ ಗುರುತಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಶಂಕಿತ ವ್ಯಕ್ತಿ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಸಂಜೆ 6.30ಕ್ಕೆ ಬಿಐಎಎಲ್‌ಗೆ ಬಂದಿಳಿಯುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಎಲ್‌ಓಸಿ ಜಾರಿ ಮಾಡಿರುವ ಸುಲ್ತಾನ್‌ಗೂ ಈ ವ್ಯಕ್ತಿಗೂ ವಯಸ್ಸಿನಲ್ಲಿ ಹೆಚ್ಚಿನ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.
Advertisement