ಸೈಬರ್ ಕೆಫೆ ಮೇಲೆ ನಿಗಾ

ನಿಯಮ ಪಾಲಿಸದ ಕಾರಣ ಕೆಫೆ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ...
ಸೈಬರ್ ಕೆಫೆಗಳ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ
ಸೈಬರ್ ಕೆಫೆಗಳ ಚಟುವಟಿಕೆಗಳ ಮೇಲೆ ಪೊಲೀಸರು ನಿಗಾ

ಬೆಂಗಳೂರು: ಮೆಹ್ದಿ ಬಂಧನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪೊಲೀಸರು, ನಗರದಲ್ಲಿರುವ ಸೈಬರ್ ಕೆಫೆಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಆರಂಭಿಸಿದ್ದಾರೆ. ಗ್ರಾಹಕನ ಗುರುತಿನ ಚೀಟಿ ಸಂಖ್ಯೆ, ಹೆಸರು, ಮೊಬೈಲು ಫೋನ್ ಸಂಖ್ಯೆ, ವಿಳಾಸ ಮುಂತಾದ ಮಾಹಿತಿಗಳನ್ನು ಪಡೆದುಕೊಳ್ಳದೇ ಇಂಟರ್‌ನೆಟ್ ಬಳಕೆಗೆ ಅವಕಾಶ ನೀಡುತ್ತಿದ್ದ ಕಬ್ಬನ್‌ಪಾರ್ಕ್ ಠಾಣೆ ವ್ಯಾಪ್ತಿಯ 2 ಹಾಗೂ ಹೈಗ್ರೌಂಡ್ಸ್‌ನ 1 ಕೆಫೆ ಮೇಲೆ ಮಂಗಳವಾರ ದಾಳಿ ನಡೆಸಲಾಗಿದೆ.

ನಿಯಮ ಪಾಲಿಸದ ಕಾರಣ ಕೆಫೆ ಮಾಲೀಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು. ಪ್ರತಿ ಸೈಬರ್ ಕೆಫೆ ಗ್ರಾಹಕರಿಂದ ಎಲ್ಲ ಮಾಹಿತಿ ಸಂಗ್ರಹಿಸುವುದು ಕಡ್ಡಾಯ.

ಒಂದು ವೇಳೆ ಅದನ್ನು ಪಾಲನೆ ಮಾಡದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಆ ಕೇಂದ್ರದ ಕಂಪ್ಯೂಟರ್‌ನಿಂದ ಏನಾದರೂ ಸಮಾಜಘಾತುಕ ಚಟುವಟಿಕೆಗಳು ನಡೆದಲ್ಲಿ ಅದಕ್ಕೆ ಮಾಲೀಕರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com