ಹಿರಿಯ ಪತ್ರಕರ್ತ ಶಾ.ಅಶೋಕಬಾಬು
ಜಿಲ್ಲಾ ಸುದ್ದಿ
ಹಿರಿಯ ಪತ್ರಕರ್ತ ಶಾ.ಅಶೋಕಬಾಬು(57) ನಿಧನ
ತಮ್ಮ 'ಟೈಮ್ಸ್ ಮೊಬೈಲ್ ಟಿವಿ' ಕಚೇರಿಯಲ್ಲಿ ಹೃದಯಾಘಾತಕ್ಕೊಳಗಾಗಿದ್ದರು...
ಬೆಂಗಳೂರು: ಹಿರಿಯ ಪತ್ರಕರ್ತ ಶಾ.ಅಶೋಕಬಾಬು(57) ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಚಾಮರಾಜಪೇಟೆಯಲ್ಲಿನ ತಮ್ಮ 'ಟೈಮ್ಸ್ ಮೊಬೈಲ್ ಟಿವಿ' ಕಚೇರಿಯಲ್ಲಿ ಹೃದಯಾಘಾತಕ್ಕೊಳಗಾಗಿದ್ದರು.
ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದು, ಅವರ ಅಂತ್ಯಕ್ರಿಯೆ ಭಾನುವಾರ ನೆರವೇರಲಿದೆ. 'ಈ ಸಂಜೆ' ಪತ್ರಿಕೆಯಲ್ಲಿ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. 'ಕರ್ನಾಟಕ ನ್ಯೂಸ್ ನೆಟ್' ಸಂಸ್ಥೆಯನ್ನು ಸ್ಥಾಪಿಸಿದ್ದರು. ನಾಲ್ಕು ದಶಕಗಳಿಂದ ಪತ್ರಿಕಾರಂಗದ ವಿವಿಧ ಆಯಾಮಗಳಲ್ಲಿ ಬಾಬು ಸೇವೆ ಸಲ್ಲಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ