50 ವರ್ಷದ ಸೇವೆಗೆ 15 ರುಪಾಯಿ ಸಂಬಳ!

50 ವರ್ಷಗಳಿಂದ ಕಾಲೇಜಿನ ಸ್ವಚ್ಛತೆಗಾಗಿ ಈ ವೃದ್ಧೆ ಹರಿಸಿದ ಬೆವರಿಗೆ ಬೆಲೆಯೇ ಇಲ್ಲ...
ಎಲಿಜಬೆತ್
ಎಲಿಜಬೆತ್

ಮಂಗಳೂರು: ಹೆಸರು: ಎಲಿಜಬೆತ್, ವಯಸ್ಸು: 72 ವರ್ಷ, ವೃತ್ತಿ: ಸರ್ಕಾರಿ ಮಹಿಳಾ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಸ್ವಚ್ಛತೆ, ವೇತನ: ರೂ.15!

ಆಶ್ಚರ್ಯವಾದರೂ ಸತ್ಯ. 1964 ಡಿಸೆಂಬರ್ 1 ರಿಂದ ಅಂದರೆ ಬರೋಬ್ಬರಿ 50 ವರ್ಷಗಳಿಂದ ಕಾಲೇಜಿನ ಸ್ವಚ್ಛತೆಗಾಗಿ ಈ ವೃದ್ಧೆ ಹರಿಸಿದ ಬೆವರಿಗೆ ಬೆಲೆಯೇ ಇಲ್ಲ. ಅಂದಿನಿಂದ ಇಂದಿನವರೆಗೂ ಅಷ್ಟೇ ವೇತನಕ್ಕೆ ದುಡಿಯುತ್ತಿದ್ದಾಳೆ.

ಭರ್ಜರಿ ಪ್ರಚಾರದೊಂದಿಗೆ ದೇಶಾದ್ಯಂತ ಸ್ವಚ್ಥತಾ ಆಂದೋಲನ ನಡೆಯುತ್ತಿದೆ. ಆದರೆ ಸರ್ಕಾರಿ ಕಾಲೇಜಿನಲ್ಲೇ 50 ವರ್ಷಗಳಿಂದ ಪಾಯಿಖಾನೆ ತೊಳೆಯುತ್ತಿರುವ ಈ ವೃದ್ಧೆ ಬಗ್ಗೆ ಯಾರಿಗೂ ಕಾಳಜಿ ಇಲ್ಲ.

ಮೂಲ ವೇತನ ರೂ.15, ಮನೆ ಬಾಡಿಗೆ ಭತ್ಯೆ ಮತ್ತು ಇತರ ಭತ್ಯೆ ಸೇರಿ ಒಟ್ಟು ಸಾವಿರ ರೂಪಾಯಿ ಈಗ ಸಿಗುತ್ತೆ. ಆದರೆ ಒಂದು ತಿಂಗಳ ಸಂಬಂಳ ಕೈಗೆ ಸಿಗುವುದು ಮೂರು ತಿಂಗಳು ತಡವಾಗಿ! ಈ ಇಳಿ ವಯಸ್ಸಿನಲ್ಲೂ ನಡೆದುಕೊಂಡು ಹೋಗಿ ನಡೆದುಕೊಂಡು ಬರುವ ವೃದ್ಧೆಯನ್ನು ನೋಡಿದರೆ ಕಣ್ಣಿನಲ್ಲಿ ನೀರಿಳಿಯುತ್ತೆ.

ಈ ಪ್ರಕರಣ ಕುರಿತು ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಡಾ.ರವೀಂದ್ರನಾಥ್ ಶ್ಯಾನುಭಾಗ್ ಹೇಳುವುದಿಷ್ಟು: ಎಲಿಜಬೆತ್ ಅವರಂತೆ ಅನಿಷ್ಠ ಸಂಬಳಕ್ಕೆ ದುಡಿಯುತ್ತಿದ್ದ ಉಡುಪಿಯ ಅಕ್ಕು ಮತ್ತು ಲೀಲಾ ಪ್ರಕರಣದಲ್ಲಿ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಸುಪ್ರೀಂಕೋರ್ಟ್ ಈಗಾಗಲೇ ನೀಡಿದೆ.

ಅದೇ ಪ್ರಕರಣದ ನಿರ್ಣಯವನ್ನು ಎಲ್ಲರಿಗೂ ಅನ್ವಯಿಸಿ ಸರ್ಕಾರ ಪಿಂಚಣಿ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಬೇಕು. ಮಂಗಳೂರಿನ ಎಲಿಜಬೆತ್, ಮಲ್ಪೆಯ ಪದ್ಮಾ ಸೇರಿದಂತೆ ರಾಜ್ಯದಲ್ಲಿ ಒಟ್ಟು 70ಕ್ಕೂ ಅಧಿಕ ಮಂದಿ ಸ್ವಚ್ಛತೆಗಾರರು ಹೀಗೆ ದುಡಿಯುತ್ತಿದ್ದಾರೆ. ಸರ್ಕಾರ ಇವರಿಗೆ ಅವರ ಪಾಲಿನ ಸೌಲಭ್ಯ ನೀಡದಿದ್ದರೆ ಮತ್ತೆ ನ್ಯಾಯಾಲಯ ಮೆಟ್ಟಿಲೇರಿ ಹೊರಾಡುವುದು ಖಚಿತ

-ರಾಘವೇಂದ್ರ ಅಗ್ನಿಹೋತ್ರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com