ಶಾಸಕ ಮುನಿರತ್ನ ಆಪ್ತನ ಮನೆ ಮೇಲೆ ಲೋಕಾ ದಾಳಿ, ನೂರಾರು ಕಡತಗಳ ವಶಕ್ಕೆ

ಶಾಸಕ ಮುನಿರತ್ನ ಅವರ ಆಪ್ತ ಎಂದು ಹೇಳಿಕೊಂಡು ಕಚೇರಿ ನಡೆಸುತ್ತಿದ್ದವನ ಮನೆ ಮೇಲೆ...
ಶಾಸಕ ಮುನಿರತ್ನ ಆಪ್ತನ ಮನೆ ಮೇಲೆ ಲೋಕಾ ದಾಳಿ, ನೂರಾರು ಕಡತಗಳ ವಶಕ್ಕೆ
Updated on

ಬೆಂಗಳೂರು: ಶಾಸಕ ಮುನಿರತ್ನ ಅವರ ಆಪ್ತ ಎಂದು ಹೇಳಿಕೊಂಡು ಕಚೇರಿ ನಡೆಸುತ್ತಿದ್ದವನ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಶನಿವಾರ ರಾತ್ರಿ ಹಠಾತ್ ದಾಳಿ ನಡೆಸಿ ನೂರಾರು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ.

ಈ ವೇಳೆ 300ಕ್ಕೂ ಹೆಚ್ಚು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ರಾಜರಾಜೇಶ್ವರಿನಗರ ಬಿಬಿಎಂಪಿ ವಲಯದಲ್ಲಿನ ಖಾಸಗಿ ಮನೆಯ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿ ತಡರಾತ್ರಿವರೆವಿಗೂ ಕಡತಗಳನ್ನು ಪರಿಶೀಲಿಸಿದರು. ಕೆಲವು ಅಗತ್ಯ ಇರುವ ದಾಖಲೆಗಳನ್ನು ಪೊಲೀಸರು ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ. ರಾಜರಾಜೇಶ್ವರಿ ವಲಯ ಬಿಬಿಎಂಪಿಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು 300 ಕಡತಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತರು ಪರಿಶೀಲನೆ ನಡೆಸುತ್ತಿದ್ದಾರೆ.

ಲೋಕಾಯುಕ್ತರು ದಾಳಿ ನಡೆಸಿದ ವೇಳೆ ಮನೆಯಲ್ಲಿ ರಾಜರಾಜೇಶ್ವರಿನಗರ ಬಿಬಿಎಂಪಿ ವಲಯದ ಕಾರ್ಯಪಾಲಕ ಎಂಜಿನಿಯರ್ ನಿರುಗಯದೆಂಡನ್ ಹಾಗೂ ಗುತ್ತಿಗೆದಾರರಾದ ರಾಘವೇಂದ್ರ, ರಾಮಚಂದ್ರ ಹಾಜರಿದ್ದರು.

ಬಿಬಿಎಂಪಿ ಅಧಿಕಾರಿಗಳು ಅಲ್ಲಿದಿದ್ದು, ಲೋಕಾಯುಕ್ತ ಪೊಲೀಸರಿಗೆ ಹಲವು ಅನುಮಾನಗಳು ಮೂಡಿವೆ. ಕಚೇರಿಯಲ್ಲಿ ಕೆಲಸ ಮಾಡಬೇಕಿದ್ದ ಅಧಿಕಾರಿ ಖಾಸಗಿ ಮನೆಯೊಂದರಲ್ಲಿ ಪತ್ತೆಯಾಗಿರುವುದರ ಮರ್ಮ ಏನೆಂಬುದರ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲೋಕಾಯುಕ್ತ ಪೊಲೀಸರು ಮನೆಯಲ್ಲಿ ಮೂವರನ್ನು ತೀವ್ರ ತಪಾಸಣೆ ನಡೆಸಿದವರು ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com