ಜಿಲ್ಲಾ ಸುದ್ದಿ
ಶೌಚಾಲಯದ ಗುಂಡಿ ಅಗೆಯುವಾಗ ಸಿಕ್ಕಿತು 34 ಚಿನ್ನದ ನಾಣ್ಯಗಳು!
ಶೌಚಾಲಯದ ಗುಂಡಿ ಅಗೆಯುತ್ತಿದ್ದ ಇಬ್ಬರು ಕಾರ್ಮಿಕರಿಗೆ 34 ಚಿನ್ನದ...
ಚಾಮರಾಜನಗರ: ಶೌಚಾಲಯದ ಗುಂಡಿ ಅಗೆಯುತ್ತಿದ್ದ ಇಬ್ಬರು ಕಾರ್ಮಿಕರಿಗೆ 34 ಚಿನ್ನದ ನಾಣ್ಯಗಳು ಸಿಕ್ಕಿವೆ.
ಚಾಮರಾಜನಗರದ ಹದರನಹಳ್ಳಿಯಲ್ಲಿ ಸಿದ್ದಿಖಿ ಎಂಬುವವರಿಗೆ ಸೇರಿದ ಜಾಗದಲ್ಲಿ ಶೌಚಾಲಯದ ಗುಂಡಿ ಅಗೆಯುತ್ತಿದ್ದಾಗ, ಕಾರ್ಮಿಕರಿಗೆ 34 ಚಿನ್ನದ ನಾಣ್ಯಗಳು ಸಿಕ್ಕಿವೆ.
34 ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆದ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರಿಶೀಲನೆಗಾಗಿ ಕಳುಹಿಸಿದ್ದಾರೆ.
ಮೂವರುನ್ನು ರಾಮಸಮುದ್ರ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಡಳಿತ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ