
ಬೆಂಗಳೂರು: ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶದ ವೇಳೆ ನಟಿ ಮೈತ್ರಿಯಾ ಗೌಡ ಅವರು ಸಮಾವೇಶವನ್ನು ಪ್ರವೇಶಿಸಲು ಮುಂದಾಗಿದ್ದು, ಈ ವೇಳೆ ಮೈತ್ರಿಯಾ ಅವರನ್ನು ಪೊಲೀಸರು ತಡೆದು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.
ಸಮಾವೇಶದ ಸ್ಥಳಕ್ಕೆ ಮೈತ್ರೇಯಿ ಅವರು ಬರುತ್ತಿದ್ದಂತೆ ಪೊಲೀಸರು ಅವರನ್ನು ಹಿಂಬಾಲಿಸಿ ಪ್ರಶ್ನಿಸಿದರು. ಅಲ್ಲದೆ ಸಮಾವೇಶಕ್ಕೆ ಪ್ರವೇಶಿದಂತೆ ಪೊಲೀಸರು ತಡೆದ ಸಂದರ್ಭದಲ್ಲಿ ತಳ್ಳಾಟ ನೂಕಾಟ ಸಂಭವಿಸಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಬಂದಿರುವುದಾಗಿ ಹೇಳಿದ ಮೈತ್ರಿಯಾ ಸಮಾವೇಶ ನಡೆಯುತ್ತಿರುವ ಮೈದಾನಕ್ಕೆ ತೆರಳಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಮೈತ್ರಿಯಾ ಗೌಡ ಅವರು ಸಮಾವೇಶ ಸ್ಥಳಕ್ಕೆ ತೆರಳಲು ಅವಕಾಶ ನಿರಾಕರಿಸಿದ ಪೊಲೀಸರು ಅವರನ್ನು ಬಲವಂತವಾಗಿ ಅಲ್ಲಿಂದ ಕರೆದೊಯ್ದರು.
Advertisement