ಸಾರ್ವಜನಿಕ ಜೀವನದಲ್ಲಿ ರಜೆ ಎಲ್ಲಿದೆ?

ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗೂ ವಿವಾದಗಳಿಗೂ ಹತ್ತಿರದ ನಂಟು. ನೆಹರೂ-ಗಾಂಧಿ ಕುಟುಂಬದ ಕಟ್ಟಾ ಬೆಂಬಲಿಗ, ಆ ಕುಟುಂಬದ ಕಾನೂನು ರಕ್ಷಕವಚವಾಗಿ ಕರೆಸಿಕೊಂಡಿರುವ ಭಾರದ್ವಾಜ್ ಈಗ ಪಕ್ಷದ ವಿರುದ್ಧವೇ ಬಹಿರಂಗ ಆಕ್ರೋಶ...
ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರದ್ವಾಜ್
ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರದ್ವಾಜ್

ಬೆಂಗಳೂರು: ಕರ್ನಾಟಕದ ಮಾಜಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗೂ ವಿವಾದಗಳಿಗೂ ಹತ್ತಿರದ ನಂಟು. ನೆಹರೂ-ಗಾಂಧಿ ಕುಟುಂಬದ ಕಟ್ಟಾ ಬೆಂಬಲಿಗ, ಆ ಕುಟುಂಬದ ಕಾನೂನು ರಕ್ಷಕವಚವಾಗಿ ಕರೆಸಿಕೊಂಡಿರುವ ಭಾರದ್ವಾಜ್ ಈಗ ಪಕ್ಷದ ವಿರುದ್ಧವೇ ಬಹಿರಂಗ ಆಕ್ರೋಶ ಹೊರಹಾಕುತ್ತಿರುವುದು ಎಲ್ಲರ ಹುಬ್ಬೇರಿಸಿದೆ.

ಲೋಕಸಭೆ ಚುನಾವಣೆ ಬಳಿಕ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಔಟ್‍ಲುಕ್ ನಿಯತಕಾಲಿಕ ನಡೆಸಿದ ಭಾರದ್ವಾಜ್ ಅವರ ಸಂದರ್ಶನದ ವಿವರ ಇಲ್ಲಿದೆ.

ನೀವು ಕಾಂಗ್ರೆಸ್‍ನಲ್ಲಿನ ನಿರುತ್ಸಾಹದ ವಾತಾವರಣದ ಕುರಿತು ಆಗಾಗ ಮಾಧ್ಯಮದ ಮುಂದೆ ಮಾತನಾಡುತ್ತಿದ್ದೀರಿ.
ಕಾಂಗ್ರೆಸ್‍ನ ಅವನತಿಗೆ ನಾನು ಕಾರಣನೇ? ನೆಹರೂ- ಗಾಂಧಿ ಕುಟುಂಬದ ಜತೆಗೆ ನಾನು ದೀರ್ಘಾವಧಿಯಿಂದ ಆತ್ಮೀಯ ಸಂಬಂಧ ಹೊಂದಿದ್ದೇನೆ. ನಾನು ಆ ಕುಟುಂಬದ ಜತೆಗೆ ಆತ್ಮೀಯನಾಗಿದ್ದಾಗ ಕೆಲ ರಾಜಕಾರಣಿಗಳು ಹುಟ್ಟಿಯೇ ಇರಲಿಲ್ಲ. ಇಂದಿರಾಗಾಂಧಿಧಿ ಸಂಜಯ್, ರಾಜೀವ್, ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಸುವಾಗ ನಾನು ಅವರ ಜತೆಗಿರುತ್ತಿದ್ದೆ. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗಲೂ ನಾನು ಇಂದಿರಾ ಅವರ ಜತೆಗಿದ್ದೆ. ಪಕ್ಷ ಇಬ್ಭಾಗದಂಥ ಪ್ರಕರಣಗಳಲ್ಲಿ ಯುವ ವಕೀಲನಾಗಿ ಇಂದಿರಾ ಪರ ವಾದಿಸಿದ್ದೆ. ರಾಜೀವ್‍ಗಾಂಧಿ ನನ್ನ ಮೇಲೆ ಪೂರ್ಣ ವಿಶ್ವಾಸ ಇಟ್ಟುಕೊಂಡಿದ್ದರು. `ನೀನು ನನ್ನ ಕಾನೂನು ಕವಚ' ಎಂದು ನನಗೆ ಹೇಳುತ್ತಿದ್ದರು.

ಆದ್ರೂ ಹೈಕಮಾಂಡ್ ನಿಮ್ಮನ್ನು ಮೂಲೆಗುಂಪು ಮಾಡುತ್ತಿದೆ ಎನ್ನುವ ಭಾವನೆ ಕಾಡುತ್ತಿಲ್ಲವೇ?
ನಾನು ಯಾವಾಗ ಕರ್ನಾಟಕದ ರಾಜ್ಯಪಾಲನಾದೆನೋ ಅವತ್ತೇ ಪಕ್ಷದ ಸದಸ್ಯತ್ವ ಕಳೆದುಕೊಂಡೆ. ದೆಹಲಿಗೆ ಆಗಮಿಸಿದಾಗ ಕೇವಲ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರನ್ನಷ್ಟೇ ಭೇಟಿಯಾಗುತ್ತಿದ್ದೆ. ನಾನು ಸೋನಿಯಾಜಿ ಅವರನ್ನು ಹಲವು ವರ್ಷಗಳ ಕಾಲ ಭೇಟಿಯಾಗಿಲ್ಲ. ರಾಜ್ಯಪಾಲನಾಗಿದ್ದಾಗ ಸೋನಿಯಾ ಎರಡು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು.

ಕಾಂಗ್ರೆಸ್‍ನಲ್ಲಿನ ಬಿಕ್ಕಟ್ಟಿಗೆ ನೀವು ಸೋನಿಯಾರನ್ನೇ ಹೊಣೆಗಾರರನ್ನಾಗಿ ಮಾಡುತ್ತೀರಾ?
ನಾನೇನು ಭಟ್ಟಂಗಿ ಅಲ್ಲ. ನೆಹರೂ- ಗಾಂಧಿ ಕುಟುಂಬದ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಆ ಕುಟುಂಬದ ಪರ ನಿಷ್ಠೆ ಹೊಂದಿದ್ದೇನೆ. ಆದರೆ, ಪಕ್ಷದ ಅವನತಿ ಕುರಿತು ಬೇಸರವಿದೆ. ಭ್ರಷ್ಟಾಚಾರ ಪಕ್ಷವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲೊಂದು. ಸೋನಿಯಾಜಿ ಅವರ ಸುತ್ತ ಭಟ್ಟಂಗಿಗಳೇ ಸುತ್ತಿಕೊಂಡಿದ್ದಾರೆ. ಜನರು ಭ್ರಷ್ಟಾಚಾರವನ್ನು ಸಹಿಸಿಕೊಳ್ಳುವುದಿಲ್ಲ. ಇಂಡಿಯಾ ಎಗೆನೆಸ್ಟ್ ಕರಪ್ಷನ್ ಕ್ಯಾಂಪೇನ್ ಇದೇ ಕಾರಣಕ್ಕೆ ಯಶಸ್ಸು ಗಳಿಸಿತು. ಕಾಂಗ್ರೆಸ್ ಸರ್ಕಾರ ಈ ವಿಚಾರವನ್ನು ನಿರ್ವಹಿಸಿದ ರೀತಿ ಮಾತ್ರ ಕೆಟ್ಟದಾಗಿತ್ತು. ದೆಹಲಿ ಪೊಲೀಸರು ಅಣ್ಣಾ ಮತ್ತು ರಾಮದೇವ್ ಪ್ರತಿಭಟನೆ ವೇಳೆ ಲಾಠಿ ಬೀಸಿದರು. ಇದು ತಪ್ಪು.

ರಾಹುಲ್ ಗಾಂಧಿ ಏನು ಬೇಡಿಕೆ ಇಡುತ್ತಿದ್ದಾರೋ ಅದನ್ನೇ ನೀವು ಹೇಳುತ್ತಿರುವಂತೆ ಕಾಣುತ್ತಿದೆ. ಅದು ಹಳೆತಲೆಗಳ ಬದಲಾವಣೆ! ಅಹ್ಮದ್ ಪಟೇಲ್ ಹಾಗೂ ಜನಾರ್ದನ ದ್ವಿವೇದಿ ಅವರನ್ನು ಪಕ್ಷದಿಂದ ಹೊರಗಿಡಲು ರಾಹುಲ್ ಪ್ರಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆಯಲ್ಲ?

ರಾಹುಲ್ ಗಾಂಧಿ ಎಲ್ಲಿದ್ದಾರೆ? ಸಾರ್ವಜನಿಕ ಜೀವನದಲ್ಲಿ ರಜೆ ಅನ್ನುವ ಪದಕ್ಕೆ ಅರ್ಥ ಇಲ್ಲ. ಒಂದು ಅಥವಾ ಎರಡು ದಿನ ರಜೆ ತೆಗೆದುಕೊಂಡರೆ ಅದೇ ಹೆಚ್ಚು. ನಾನ್ಯಾವತ್ತೂ ರಾಹುಲ್ ಜತೆಗೆ ನೇರಾ ನೇರಾ ಮಾತುಕತೆ ನಡೆಸಿಲ್ಲ. ಅಮೇಠಿಯಲ್ಲಿ ಮೊದಲ ಬಾರಿಗೆ ನಾಮಪತ್ರ ಸಲ್ಲಿಸುವ ವೇಳೆ ರಾಹುಲ್ ಜತೆಗಿದ್ದೆ. ಇದೇ ರೀತಿ ರಾಹುಲ್ ತಂದೆ ರಾಜೀವ್ ಗಾಂಧಿ ಮೊದಲ ಬಾರಿ ನಾಮಪತ್ರ ಸಲ್ಲಿಸುವಾಗಲೂ ಇದ್ದೆ. ಆಗ ನಾನು ಭಾವನಾತ್ಮಕವಾಗಿದ್ದೆ. ನನಗೆ ಆತ ರಾಜೀವ್ ರಂತೆ ಕಂಡ. ಯಾಕೆಂದರೆ ಅವರಿಬ್ಬರೂ ನೋಡಲು ಒಂದೇ ರೀತಿ ಇದ್ದಾರೆ.

ಇನ್ನು ನಾಯಕರು ಎಲ್ಲಿದ್ದಾರೆ? ಅಹ್ಮದ್ ಪಟೇಲ್ ಅಥವಾ ದ್ವಿವೇದಿ ನಾಯಕರಾ? ಸೋನಿಯಾ ಸುತ್ತಮುತ್ತ ಇರುವವರನ್ನು ಅಭದ್ರತೆಯ ಭಾವ ಕಾಡುತ್ತಿದೆ. ಗಾಂಧಿ ಕುಟುಂಬದ ಜತೆಗೆ ನನಗಿದ್ದ ಆತ್ಮೀಯತೆಯಿಂದ ಅವರೆಲ್ಲ ಕರುಬುತ್ತಿದ್ದರು. ನಾನು ಸೋನಿಯಾ ಪಾಲಿನ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದೆ. ಆದರೆ, ಇದು ಪಟೇಲ್‍ಗೆ ರುಚಿಸುತ್ತಿರಲಿಲ್ಲ. ಅವರು ಸೋನಿಯಾ ತಲೆಯಲ್ಲಿ ನನ್ನ ವಿರುದಟಛಿ ವಿಷದ ಬೀಜ ಬಿತ್ತಿದರು. ಹಾಗಾಗಿ ನಾನು ಸೋನಿಯಾರಿಂದ ದೂರ ಉಳಿದೆ. ಒಂದು ರೀತಿಯಲ್ಲಿ ಅವರೇ ಬಯಸಿದ್ದರಿಂದ ನಾನು ಈ ರೀತಿ ಮಾಡಿದೆ. ಇನ್ನು ಅಹಮದ್ ಪಟೇಲ್ ವಿಚಾರಕ್ಕೆ ಬಂದರೆ ಅವರು ನನ್ನನ್ನು ಭೇಟಿ ಮಾಡುವ ಮೊದಲು ಅಪಾಯಿಂಟ್‍ಮೆಂಟ್ ಪಡೆಯುತ್ತಿದ್ದರು. ನನ್ನ ಕಾರ್ಯದರ್ಶಿಗೆ ಕರೆ ಮಾಡುತ್ತಿದ್ದರು. ಅವರು ಯಾವತ್ತೂ ನನ್ನ ಮನೆಗೆ ನೇರವಾಗಿ ಭೇಟಿ ಕೊಡುವಂತಿರಲಿಲ್ಲ.

ಅಂದರೆ ಈಗ ಬದಲಾವಣೆಯ ಪರ್ವವೇ? ಹಳೆ ತಲೆಗಳಿಗೆ ವಿದಾಯ ಹೇಳುವ ಕ್ಷಣವೇ?
ಸಂಜಯ್ ಗಾಂಧಿ ಅವರ ಜತೆಗಿದ್ದ ಎಲ್ಲ ಯುವ ಕಾಂಗ್ರೆಸ್ ನಾಯಕರು ನಂತರ ಕ್ಯಾಬಿನೆಟ್ ಸಚಿವರಾದರು. ಪ್ರಣಬ್ ಹಾಗೂ ಆ್ಯಂಟನಿ ಅವರು ದೀರ್ಘಾವಧಿವರೆಗೆ ಕಾಂಗ್ರೆಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜೀವ್ ಹೊಸ ತಂಡ ಕಟ್ಟಿದ್ದರು. ಅರುಣ್ ನೆಹರೂರಂತೆ ನಾನೂ ಕೂಡ ಆ ತಂಡದ ಭಾಗವಾಗಿದ್ದೆ. ಈಗ ಸೋನಿಯಾ ಅಕ್ಕಪಕ್ಕದಲ್ಲಿರುವವರು ರೈಲ್ವೆ ಬೋಗಿಯ ರೀತಿಯಲ್ಲಿ ಅವರನ್ನು ಮುತ್ತಿಕೊಂಡಿದ್ದಾರೆ. ಇವರಿಂದಾಗಿಯೇ ಪಕ್ಷ ಇತ್ತೀಚಿನ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿತು.

ಸೋನಿಯಾ ಗಾಂಧಿ ಯಾವತ್ತಾದರೂ ನಿಮಗೆ ಕರೆ ಮಾಡಿದ್ದರಾ? ಪಕ್ಷದ ವಿರುದ್ಧ ಮಾತನಾಡದಂತೆ ಸೂಚಿಸಿದ್ದಾರಾ?
ಸೋನಿಯಾ ಯಾವತ್ತೂ ನನಗೆ ಕರೆ ಮಾಡಿಲ್ಲ. ನನಗೆ ಅವರ ಮತ್ತು ಅವರ ಕುಟುಂಬದ ಬಗ್ಗೆ ಅತ್ಯುನ್ನತ ಗೌರವ ಇದೆ. ನಾನು ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾಗೆ ಯಾವತ್ತೂ ನಿಷ್ಠನೇ. ಸೋನಿಯಾ ಅವರು ಕಾಂಗ್ರೆಸ್ ಅಧ್ಯಕ್ಷೆ ಹಾಗಾಗಿ ಪಕ್ಷವನ್ನು ಮುನ್ನಡೆಸುವುದು ಆಕೆಯ ಹೊಣೆ. ಆದರೆ ಕೆಲವು ವ್ಯಕ್ತಿಗಳು ಪಕ್ಷವನ್ನು ಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಪ್ರಿಯಾಂಕಾ ರಾಜಕೀಯಕ್ಕೆ ಕಾಲಿಟ್ಟರೆ ಪಕ್ಷ ಬಲಿಷ್ಠವಾಗಲಿದೆ.

ಪಕ್ಷದಲ್ಲಿ ನಿಮಗೇನಾದರೂ ಪಾತ್ರವಿದೆ ಎಂದು ನಿಮಗನಿಸುತ್ತಿದೆಯೇ?
ನಾನೀಗ ವಕೀಲ ವೃತ್ತಿಯಲ್ಲಿದ್ದೇನೆ. ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶ ನನ್ನ ಮುಂದಿಲ್ಲ. ನಾನು ಪಕ್ಷದ ಸದಸ್ಯನಲ್ಲ. ಸದಸ್ಯತ್ವಕ್ಕಾಗಿ ನೋಂದಣಿ
ಮಾಡಲು ಅವರು ಅವಕಾಶ ಮಾಡಿಕೊಡುವುದೂ ಇಲ್ಲ.

ನೀವು ಪಕ್ಷಕ್ಕೆ ಬೆಂಬಲ ನೀಡುವ ಬದಲು ಸಾರ್ವಜನಿಕವಾಗಿ ಪಕ್ಷದ ಮರ್ಯಾದೆ ತೆಗೆಯುತ್ತಿದ್ದೀರಿ ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರಲ್ಲ?

ನಾನು ಯಾವುದಕ್ಕೋಸ್ಕರ ಬೆಂಬಲ ನೀಡಬೇಕು? ನಾನೇನು ಮಾಡಬೇಕೆಂದು ಅವರು ಹೇಳಬೇಕೇ? ಅವರೆಲ್ಲ ಪಕ್ಷದ ದೊಣ್ಣೆನಾಯಕರೆ? ನನ್ನ ಮುಂದೆ ಅವರೆಲ್ಲ ಬಚ್ಚಾಗಳು. ಪಕ್ಷದ ಕುರಿತು ನಾನು ಕಾಳಜಿ ಹೊಂದಿದ್ದೇನೆ. ಪಕ್ಷದ ಅವನತಿಗೆ ನಿಜವಾದ ಕಾರಣವೇನು? ದೆಹಲಿ ಅಸೆಂಬ್ಲಿಯಲ್ಲಿ ಪಕ್ಷಕ್ಕೆ ಒಂದೇ ಒಂದು ಸ್ಥಾನವೂ ಸಿಕ್ಕಿಲ್ಲ. ಈ ಪ್ರಶ್ನೆಗೆ ಯಾರ ಬಳಿಯಾದರೂ ಉತ್ತರ ಇದೆಯೇ?

ನೀವು ಕಾನೂನು ಸಚಿವರಾಗಿದ್ದಾಗ ಮನಮೋಹನ ಸಿಂಗ್ ಅವರು ಸುರಕ್ಷಿತವಾಗಿದ್ದರು?
ನಗು... ಯುಪಿಎ-1 ಒಂದು ಯಶಸ್ಸಿನ ಕಥೆ. ಕಾನೂನು ರೀತಿಯಲ್ಲಿ ಒಪ್ಪಲರ್ಹ ಯಾವುದು ಎನ್ನುವ ಕುರಿತು ನನಗೆ ಸ್ಪಷ್ಟ ಅರಿವಿತ್ತು. ಹಿಂದಿನ ಮೂರು ಸರ್ಕಾರಗಳಲ್ಲಿ
ಕಾನೂನು ಸಚಿವನಾಗಿದ್ದ ಅನುಭವ ಇತ್ತು. ಕ್ಯಾಬಿನೆಟ್ ರಚನೆಯಲ್ಲಿ ಪ್ರಧಾನಿಗೆ ಮುಕ್ತ ಸ್ವಾತಂತ್ರ್ಯ ಇರಬೇಕು. ಯಾಕೆಂದರೆ ಪ್ರಧಾನಿ ಅವರ ಜತೆಗೇ ಕೆಲಸ ಮಾಡಬೇಕಲ್ವ.
ಮನಮೋಹನ ಸಿಂಗ್ ಅವರಿಗೆ ಲೋಕಪಾಲ ವಿಧೇಯಕ ಕುರಿತು ಸರಿಯಾಗಿ ವಿವರ ನೀಡಿರಲೇ ಇಲ್ಲ. ಕರಡು ವಿಧೇಯಕ ಅಥವಾ ಸರ್ಕಾರದ ಕೆಲಸವನ್ನು ಯಾವತ್ತೂ ಖಾಸಗಿ ವ್ಯಕ್ತಿಗಳಿಗೆ ನೀಡಬಾರದು. ಇನ್ನು ಯುಪಿಎ-2 ಅನ್ನು ನಡೆಸಿದ್ದು ಅಂಬಾನಿ ಹಾಗೂ ಇತರರು. ಈಗ ಪಕ್ಷವನ್ನು ಕೈಬಿಟ್ಟಿದ್ದಾರೆ. ಪಕ್ಷದ ಕೈಯಲ್ಲೀಗ ಉಳಿದಿರೋದಾದರೂ ಏನು?

ಈಗ ಕಲ್ಲಿದ್ದಲು ಹಗರಣದಲ್ಲಿ ಆರೋಪಿಯಾಗಿ ಮನಮೋಹನ ಸಿಂಗ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆಯಲ್ವಾ?
ಅವರೊಬ್ಬ ಸಜ್ಜನ. ಅವರು ಭ್ರಷ್ಟ ಅಲ್ಲ.

ಸರ್ಕಾರದ ಪಾತ್ರವನ್ನು ಪ್ರಶ್ನಿಸುವ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‍ನ ಮುಂದೆ ಮಂಡಿಸುವ ಅಫಿಡವಿಟ್ ಗಳನ್ನು ಕಾನೂನು ಸಚಿವರಾಗಿ ನೀವು ಸಿದ್ಧಪಡಿಸುತ್ತಿದ್ದೀರಾ?

ಸಿಬಿಐಯಲ್ಲಿ ಕಾನೂನು ಅ„ಕಾರಿಗಳಿದ್ದಾರೆ. ಸಿಬಿಐ ಒಂದು ರೀತಿಯಲ್ಲಿ ಕೇಂದ್ರದ ಪೊಲೀಸ್. ಅವರಿಗೆ ತನಿಖೆ ನಡೆಸುವ ಸ್ವಾತಂತ್ರ್ಯವಿದೆ. ನಾನ್ಯಾವತ್ತೂ ಅವರ ತನಿಖೆಯಲ್ಲಿ ಮಧ್ಯಪ್ರವೇಶಿಸಿಲ್ಲ.

ಚುನಾಯಿತ ಪ್ರತಿನಿಧಿಗಳ ಮಾನ್ಯತೆ ರದ್ದು ಮಾಡುವ ಕಾಯ್ದೆ ನಿಮ್ಮ ಕೂಸೇ?

ಅಲ್ಲ. ಅದು ರಾಜೀವ್ ಗಾಂಧಿ ಅವರ ಐಡಿಯಾ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(ಎ) ಯಾರ ಕನಸಿನ ಕೂಸು?
ಮಾಹಿತಿ ತಂತ್ರಜ್ಞಾನ ಸಚಿವ ಎ.ರಾಜಾ ನೇತೃತ್ವದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕಾನ್ಸೆಪ್ಟ್ ಪೇಪರ್ ಅನ್ನು ರಚಿಸಿತ್ತು. ಸಚಿವ ಸಂಪುಟ ಅದನ್ನು ಒಕ್ಕೊರಲಿನಿಂದ ಬೆಂಬಲಿಸಿತು. ಸಂಸತ್ತು ಅದನ್ನು ಅಂಗೀಕರಿಸಿತು. ಈಗ ವಿರೋಧಿಸುವವರು ಆಗ ಬೆಂಬಲಿಸಿದ್ದರು.

ಸಂದರ್ಶನವೊಂದರಲ್ಲಿ ಚಿದಂಬರಂ ಅವರ ಹೆಸರೆತ್ತಿದ್ದೀರಲ್ವಾ?
ಆ ಸಮಯದಲ್ಲಿ ಚಿದಂಬರಂ ಅವರು ಮಾರ್ಗದರ್ಶಿ ಹಾಗೂ ಚಿಂತಕ ಆಗಿದ್ದರು. ಡಿಎಂಕೆಯ ಬೆಂಬಲ ಇಲ್ಲದೆ ರಾಜಕಾರಣಿಯಾಗಿ ತಮಿಳುನಾಡಿನಲ್ಲಿ ಅವರಿಗೆ ಸ್ವತಂತ್ರ ಅಸ್ತಿತ್ವವಿದೆ ಎಂದು ನನಗನಿಸುತ್ತಿಲ್ಲ. ಜಯಲಲಿತಾಗೆ ಚಿದಂಬರಂರನ್ನು ಕಂಡರಾಗಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com