ಪಾಲಿಕೆ ಮೇಲೆ ಲೋಕಾ ದಾಳಿ ಇಬ್ಬರು ಅಧಿಕಾರಿಗಳ ಬಂಧನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಭಾರಿ ಪ್ರಮಾಣದ ಅವ್ಯವಹಾರ ಪತ್ತೆ ಮಾಡಿದ್ದಾರೆ...
ಪಾಲಿಕೆ ಮೇಲೆ ಲೋಕಾ ದಾಳಿ ಇಬ್ಬರು ಅಧಿಕಾರಿಗಳ ಬಂಧನ
ಪಾಲಿಕೆ ಮೇಲೆ ಲೋಕಾ ದಾಳಿ ಇಬ್ಬರು ಅಧಿಕಾರಿಗಳ ಬಂಧನ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಭಾರಿ ಪ್ರಮಾಣದ ಅವ್ಯವಹಾರ ಪತ್ತೆ ಮಾಡಿದ್ದಾರೆ.

ಈ ಮೂಲಕ ಬಿಬಿಎಂಪಿ ಹಗರಣಗಳ ಆಗರ ಎನ್ನುವುದನ್ನು ಲೊಕಾಯುಕ್ತ ಪೊಲೀಸರು ಮತ್ತೊಮ್ಮೆ ಸಾಬೀತು ಮಾಡಿದ್ದು, ಗುತ್ತಿಗೆದಾರರ ಹಣ ಬಿಡುಗಡೆಯಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಹಣ ಹಂಚಿಕೆಯಲ್ಲಿ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪದಡಿ ಬಿಬಿಎಂಪಿಯ ಮುಖ್ಯ ಲೆಕ್ಕಾಧಿಕಾರಿ ಕನಕರಾಜು ಮತ್ತು ಲೆಕ್ಕ ಅಧೀಕ್ಷಕ ನಾರಾಯಣಸ್ವಾಮಿ ಅವರನ್ನು ಬಂಧಿಸಿದ್ದಾರೆ.

ಗುತ್ತಿಗೆದಾರರಿಗೆ ತಮ್ಮ ಬಿಲ್ಲಿನ ಹಿರಿತನದ ಆಧಾರದ ಮೇರೆಗೆ ಹಣ ಬಿಡುಗಡೆ ಮಾಡಬೇಕು. ಆದರೆ, ಬಿಬಿಎಂಪಿ ಅಧಿಕಾರಿಗಳು 2012, 2013, 2014ನೇ ಸಾಲಿನ ಬಿಲ್ ಪಾವತಿಸದೆ 2015ನೇ ಸಾಲಿನ ಬಿಲ್‍ಗಳನ್ನು ಪಾವತಿಸುತ್ತಿದ್ದಾರೆಂಬ ಎಂಬ ದೂರು ಲೋಕಾಯುಕ್ತ ಪೊಲೀಸರಿಗೆ ಹೋಗಿತ್ತು. ಈ ಬಗ್ಗೆ ಪೊಲೀಸರು ಹಲವು ಗುತ್ತಿಗೆದಾರರಿಂದ ಮಾಹಿತಿ ಕಲೆಹಾಕಿದ್ದರು. ಗುತ್ತಿಗೆದಾರರು ನೀಡಿದ ದೂರಿನ ಮೇರೆಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಮಂಗಳವಾರ ದಾಳಿ ನಡೆಸಿದ್ದಾರೆ.

ಬಿಬಿಎಂಪಿಯ ಮುಖ್ಯ ಕಚೇರಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದು ಶೋಧನೆ ಕಾರ್ಯ ಮುಂದುವರಿಸಲಾಗಿದೆ. ಅಕ್ರಮ ಸಂಬಂಧ ಸಾಕಷ್ಟು ಕಡತಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಮನಸೋಇಚ್ಛೆ ಹಣ ಬಿಡುಗಡೆ ಬಿಬಿಎಂಪಿ ಅಧಿಕಾರಿಗಳು ಮನಸ್ಸೋ ಇಚ್ಛೆ ಹಣ ಬಿಡುಗಡೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಯೋಜನಾ ವಿಭಾಗದ ಅಧಿಕಾರಿಗಳು ಜನರ ನಕ್ಷೆ ಮಂಜೂರು ಅರ್ಜಿಗಳು, ಆರಂಭದ ದೃಢೀಕರಣ ಪತ್ರ ಮತ್ತು ಸ್ವಾಧೀನತಾ ದೃಢೀಕರಣಗಳ ವಿತರಣೆಗೆ ಲಂಚಕ್ಕಾಗಿ ಒತ್ತಾಯಿಸುತ್ತಿದ್ದರು.

ನಾಗರಿಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಆ ವಿಭಾಗದ ಮೇಲೂ ದಾಳಿ ನಡೆಸಿ ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ಬಿಬಿಎಂಪಿ ನಗರ ಯೋಜನಾ ವಿಭಾಗದ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಡಿವೈಎಸ್‍ಪಿ, ಆರು ಇನ್ಸ್‍ಪೆಕ್ಟರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com