ಸ್ಪೆಲ್‍ಲಿಂಕ್ ಸ್ಪರ್ಧೆಯಲ್ಲಿ ಹೊಸ ದಾಖಲೆ

ಲಿಂಕ್‍ಪೆನ್ ಹಾಗೂ ಪ್ಲಾಸ್ಟಿಕ್ಸ್ ಸಂಸ್ಥೆ ಆಯೋಜಿಸುವ ಸ್ಪೆಲ್‍ಲಿಂಕ್ ಸ್ಪರ್ಧೆಯಲ್ಲಿ ಇದುವರೆಗೆ 7 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಿಂಕ್‍ಪೆನ್ ಹಾಗೂ ಪ್ಲಾಸ್ಟಿಕ್ಸ್ ಸಂಸ್ಥೆ ಆಯೋಜಿಸುವ ಸ್ಪೆಲ್‍ಲಿಂಕ್ ಸ್ಪರ್ಧೆಯಲ್ಲಿ ಇದುವರೆಗೆ 7 ಲಕ್ಷ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಹೊಸ ದಾಖಲೆ ಬರೆದಿದೆ.

ನಗರದಲ್ಲಿ ಇತ್ತೀಚೆಗೆ 16ನೇ `ಸ್ಪೆಲ್‍ಲಿಂಕ್' ಸ್ಪರ್ಧೆ ಆಯೋಜಿಸುವ ಮೂಲಕ ಒಟ್ಟು 7 ಲಕ್ಷ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿರುವ ಹೆಮ್ಮೆಗೆ ಸಂಸ್ಥೆ ಪಾತ್ರವಾಗಿದೆ. ಮದರ್ ಟೆಕ್ಲಾ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಶಾಲೆಗಳ 30ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವವಹಿಸಿದ್ದರು. ಈ ಸ್ಪರ್ಧೆಗಳು ಸೇರಿದಂತೆ ಇದುವರೆಗೆ ಕೋಲ್ಕತಾ, ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಸೂರತ್, ಜೇಮ್ಶೆಡ್‍ಪುರ ಹಾಗೂ ಭುವನೇಶ್ವರ ನಗರಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಜಲನ್ ಮಾತನಾಡಿ, 13-15 ರ ವಯೋಮಾನದ ವಿದ್ಯಾರ್ಥಿಗಳಲ್ಲಿ ಮೊಬೈಲ್ ಸಂದೇಶಗಳ ಬಳಕೆ ಹೆಚ್ಚುತ್ತಿರುವುದರಿಂದ ಭಾಷೆ ಹದಗೆಡುತ್ತಿದೆ. ಸ್ಪೆಲ್‍ಲಿಂಕ್ ನಂತಹ ಸ್ಪರ್ಧೆಗಳು ವ್ಯಾಕರಣ ಪ್ರಯೋಗವನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com