ಮೇಕೆದಾಟುಗಾಗಿ ಹಾಲಿ, ಮಾಜಿಗಳ ಡಿಪಿಆರ್ ಜಟಾಪಟಿ!

ಮೇಕೆದಾಟು ವಿಚಾರದಲ್ಲಿ ಈಗ ಹಾಲಿ ಮತ್ತು ಮಾಜಿ ಜಲ ಸಂಪನ್ಮೂಲ ಸಚಿವರ ನಡುವೆ ಆರಂಭವಾಗಿದೆ...
ಮೇಕೆದಾಟುಗಾಗಿ ಹಾಲಿ, ಮಾಜಿಗಳ ಡಿಪಿಆರ್ ಜಟಾಪಟಿ!
ಮೇಕೆದಾಟುಗಾಗಿ ಹಾಲಿ, ಮಾಜಿಗಳ ಡಿಪಿಆರ್ ಜಟಾಪಟಿ!

ಬೆಂಗಳೂರು: ಮೇಕೆದಾಟು ವಿಚಾರದಲ್ಲಿ ಈಗ ಹಾಲಿ ಮತ್ತು ಮಾಜಿ ಜಲ ಸಂಪನ್ಮೂಲ ಸಚಿವರ ನಡುವೆ  ಆರಂಭವಾಗಿದೆ.

2 ದಿನಗಳ ಹಿಂದಷ್ಟೇ ಸುದ್ದಿಗೋಷ್ಠಿ ನಡೆಸಿದ ಮಾಜಿ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿವರು, ಮೇಕಾದಾಟು ಯೋಜನೆ ಪ್ರಸ್ತಾಪ  ಹೊಸದೇನಲ್ಲ. 1996ರಲ್ಲೇ ಪ್ರಸ್ತಾಪವಾಗಿತ್ತು. ನಂತರ ತಮ್ಮ ಸರ್ಕಾರದ ಅವಧಿಯಲ್ಲಿ ಪರಿಷ್ಕೃತ ಡಿಪಿಆರ್ ಕೂಡ ಆಗಿತ್ತು ಎಂದು ಪ್ರಸ್ತಾಪಿಸಿದ್ದರು.

ಅಷ್ಟೇ ಅಲ್ಲದೇ, ಸರ್ಕಾರ ಅದೇ ಡಿಪಿಆರ್‍ನ್ನು ಅಗತ್ಯ ಬಿದ್ದರೆ ಪರಿಷ್ಕರಿಸಿದರೆ ಸಮಯ ಉಳಿತಾಯವಾಗುತ್ತದೆ ಎಂದು ತಮ್ಮ ಕಾಳಜಿ  ವ್ಯಕ್ತಪಡಿಸಿದ್ದರು. ಇದಕ್ಕೆ ಆಕ್ಷೇಪ ಎತ್ತಿರುವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಸಮಗ್ರ ಯೋಜನಾ ವರದಿಯ ಅವಶ್ಯಕತೆಯನ್ನು  ಪ್ರತಿಪಾದಿಸುವ ಜೊತೆಗೆ ಬಿಜೆಪಿ ಸರ್ಕಾರದಲ್ಲಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಚಿವರು ಹೇಳುವುದೇನು?
1996ರ ಸೆಪ್ಟೆಂಬರ್ 20ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಗಮವು ಯೋಜನಾ ವರದಿ ಸಲ್ಲಿಸಿತ್ತು, ಅದು ವಿಸ್ತೃತ ಯೋಜನಾ ವರದಿಯಾಗಿರಲಿಲ್ಲ  ಯೋಜನಾ ವರದಿಯಷ್ಟೆ. ಇದೀಗ ಭಾರತ ಸರ್ಕಾರದ ಮಾರ್ಗಸೂಚಿಗಳನ್ವಯ ತಯಾರಿಸಿರುವ ವಿಸ್ತೃತ ಯೋಜನಾ ವರದಿಗೆ ಈಗ ರಾಜ್ಯ ಸರ್ಕಾರದ ಆಡಳಿತಾತ್ಮಕ ಅನುಮೋದನೆ ಪಡೆಯಬೇಕಾಗಿದೆ. ಅಲ್ಲದೇ ವಿಸ್ತೃತ ಯೋಜನಾ ವರದಿ ತಯಾರಿಸಲು ಗ್ಲೋಬಲ್ ಟೆಂಡರ್ ಆಹ್ವಾನಿಸುವ ಅವಶ್ಯಕತೆ ಇಲ್ಲವೆಂದೂ ಮಾಜಿ ಸಚಿವರು ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ ಅದರ ಅಗತ್ಯತೆ ಇದೆ.

ಉದ್ದೇಶ: ಪ್ರಸ್ತುತ ಪ್ರಸ್ತಾವನೆಯಲ್ಲಿರುವ ನಾನಾ ಸ್ಥಳಗಳಲ್ಲಿ ಪರ್ಯಾಯ ಅಣೆಕಟ್ಟುಗಳ ನಿರ್ಮಾಣ, ವಿವಿಧ ಸಂಗ್ರಹಣಾ ಸಾಮರ್ಥ್ಯದ ಸಮತೋಲನಾ ಜಲಾಶಯಗಳು ಹಾಗೂ ಕೆಆರ್‍ಎ ಮತ್ತು ಕಬಿನಿ ಜಲಾಶಯಗಳ ಸಮಂಜಸ ನಿರ್ವಹಣೆಯನ್ನು ಆಧಾರವಾಗಿ ಇಟ್ಟುಕೊಂಡು ಮತ್ತು ಕನಿಷ್ಠ ಅರಣ್ಯ ಪ್ರದೇಶ ಮುಳುಗಡೆಯನ್ನು ತತ್ವವಾಗಿ ಇಟ್ಟುಕೊಂಡು ಯಾವುದೇ ವಿಧವಾದ ಪನರ್ವಸತಿ ಮತ್ತು ಪುನರ್ ನಿರ್ಮಾಣ ಅವಕಾಶ ಇಲ್ಲದಂತೆ ಪರಿಸರ ಮತ್ತು ಅರಣ್ಯ ಮಂತ್ರಾಲಯದ ತೀರುವಳಿ ಪಡೆಯುವ ದೃಷ್ಟಿಕೋನ ಹೊಂದಲಾಗಿದೆ.

ವಿಸ್ತೃತ ಯೋಜನಾ ವರದಿಯಲ್ಲಿ ಗರಿಷ್ಠ ಜಲ ವಿದ್ಯುತ್ ಉತ್ಪಾದನೆಯನ್ನು ಹಾಲಿ ಮತ್ತು ಉದ್ದೇಶಿತ ಜಲಾಶಯಗಳ ಸಮಂಜಸ ನಿರ್ವಹಣಾ ಕಾರ್ಯನೀತಿಯನ್ನು ರೂಪಿಸಲು ಯೋಜಿಸಲಾಗಿದೆ. ಅಲ್ಲದೇ ಕಾವೇರಿ ನ್ಯಾಯಮಂಡಳಿಯ ಆದೇಶಕ್ಕನುಗುಣವಾಗಿ ಕೆಳ ಹರಿವಿನ ಮಾದರಿಯನ್ನು ಪರಿಗಣನೆಗೆ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಗಮವು ಈ ಹಿಂದೆ ತಯಾರಿಸಿರುವ ಯೋಜನಾ ವರದಿಯು ಒಂದು ಸಾಮಾನ್ಯ ವರದಿಯಾಗಿತ್ತು. ಈಗ ವಿಸ್ತೃತ ಯೋಜನಾ ವರದಿಯನ್ನು ಭಾರತ ಸರ್ಕಾರದ ಮಾರ್ಗಸೂಚಿಗಳನ್ವಯ ತಯಾರಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಪ್ರಸ್ತುತ ವರದಿಯು ನೀರಿನ ಲಭ್ಯತೆ, ಪ್ರಸುತ್ತ ಜಲ ಮತ್ತು ನೆಲ ಸಂಪನ್ಮೂಲಗಳ ಮಾಹಿತಿಗಳ ಪುನರ್ ವಿಮರ್ಶೆ, ಎರಡು ರಾಜ್ಯಗಳ ಭಾಗದ ವರೆಗೆ ಕಾವೇರಿನ ನದಿ ಪಾತ್ರದ ಅಧ್ಯಯನ, ಫೋಟೋಗ್ರಾಫಿಕ್, ದೂರಸಂವೇದಿ ಆಧಾರಿತ ಮತ್ತು ವೈಮಾನಿಕ ನಕ್ಷೆಗಳ ವಿಶ್ಲೇಷಣೆ ಹಾಗೂ ಜಿಐಎಸ್ ಡಿಜಿಟಲ್ ನಕ್ಷೆಗಳನ್ನು ತಯಾರಿಸುವ ಬಗ್ಗೆ ನೂತನ ತಾಂತ್ರಿಕತೆಯನ್ನು ಒಳಗೊಂಡಿರುತ್ತದೆ. ಅಲ್ಲದೇ ಸಾಮಾಜಿಕ- ಆರ್ಥಿಕ ಪರಿಸರ ವಿಷಯಗಳು,

ನೀರಿನ ಹರಿಯುವಿಕೆ ಮತ್ತು ಲಭ್ಯತೆ ಮೇಲೆ ವಾತಾವರಣ ಬದಲಾವಣೆ, ಪರಿಸರದ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆಯೂ ಅಧ್ಯಯನ ನಡೆಸಲಾಗುತ್ತದೆ. ರಾಜ್ಯ ಜಲ ವಿವಾದಗಳಲ್ಲಿ ವಾದಗಳನ್ನು ಮಂಡಿಸುತ್ತಿರುವ ಹಿರಿಯ ವಕೀಲ ಎಫ್.ಎಸ್.ನಾರಿಮನ್ ಅವರು ಶೀಘ್ರವಾಗಿ ವಿಸ್ತೃತ ಯೋಜನಾ ವರದಿಯನ್ನು ಶೀಘ್ರವಾಗಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲು ಸೂಚಿಸಿದ್ದಾರೆಂದು ಸಚಿವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com