ರು.10 ಸಾವಿರ ಕೋಟಿ ಮೌಲ್ಯದ ಒತ್ತುವರಿ ತೆರವಿಗೆ ಸಿದ್ಧತೆ

ಸಾರಕ್ಕಿ ಕೆರೆ ಒತ್ತುವರಿ ತೆರವು ಪೂರ್ಣಗೊಳಿಸಿರುವ ಜಿಲ್ಲಾಡಳಿತ ಸುಮಾರು ರು.10 ಸಾವಿರ ಕೋಟಿ ಮೌಲ್ಯದ 4 ಕೆರೆ ಜಾಗಗಳಲ್ಲಿನ ಒತ್ತುವರಿ ತೆರವುಗೊಳಿಸಲು ಸಿದ್ಧತೆ ನಡೆಸಿದೆ...
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸಾರಕ್ಕಿ ಕೆರೆ ಒತ್ತುವರಿ ತೆರವು ಪೂರ್ಣಗೊಳಿಸಿರುವ ಜಿಲ್ಲಾಡಳಿತ ಸುಮಾರು ರು.10 ಸಾವಿರ ಕೋಟಿ ಮೌಲ್ಯದ 4 ಕೆರೆ ಜಾಗಗಳಲ್ಲಿನ ಒತ್ತುವರಿ ತೆರವುಗೊಳಿಸಲು ಸಿದ್ಧತೆ ನಡೆಸಿದೆ.

ಸಾರಕ್ಕಿ ಕೆರೆ ಜಾಗದ ಮೌಲ್ಯವೇ ರು.2000 ಕೋಟಿಯಷ್ಟಿದ್ದು, ಇದುವರೆಗಿನ ತೆರವು ಕಾರ್ಯಾಚರಣೆಯಲ್ಲಿ ಇದು ಅತಿ ದೊಡ್ಡ ಮೌಲ್ಯದ ತೆರವು. ಮುಂದಿನ ತಿಂಗಳು ಅಂದಾಜು ರು.10 ಸಾವಿರ ಕೋಟಿ ಮೌಲ್ಯದ ಒತ್ತುವರಿಯಲ್ಲಿ ತೆರವುಗೊಳಿಸಲಿದೆ. ಆದರೆ ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕಿರು ವುದರಿಂದ ಒಂದು ತಿಂಗಳಲ್ಲಿ ಸಿದ್ಧತೆ ನಡೆಸುವುದಾಗಿ ಜಿಲ್ಲಾಡಳಿತ ಹೇಳಿದೆ. ಗೌಡನಪಾಳ್ಯ, ಚಿಕ್ಕಲ್ಲಸಂದ್ರ, ಇಟ್ಟಮಡು ಹಾಗೂ ಬಿಳೇಕಹಳ್ಳಿ ಕೆರೆಗಳಲ್ಲಿ ಒತ್ತುವರಿ ತೆರವಿಗೆ ಸಿದ್ಧತೆ ನಡೆಸಲಾಗಿದೆ.

ಗೌಡನಪಾಳ್ಯ ಹಾಗೂ ಕದಿರೇನಹಳ್ಳಿಯ ಸರ್ವೆ ನಂ.33ರಲ್ಲಿ 9.33 ಎಕರೆ, ಚಿಕ್ಕಲ್ಲಸಂದ್ರದ ಸ.ನಂ.10ರಲ್ಲಿ 6.33 ಎಕರೆ,  ಇಟ್ಟಮಡು ಕೆರೆಯ ಮತ್ತೊಂದು ಭಾಗದ ಸ.ನಂ.7 ರಲ್ಲಿ 4 ಎಕರೆ, ಬಿಳೇಕಹಳ್ಳಿ ಕೆರೆಯ ಡಾಲರ್ಸ್ ಕಾಲೋನಿ ಬಳಿ 56 ಎಕರೆಯಲ್ಲಿ ಒತ್ತುವರಿಯಾಗಿದ್ದು, ಒಂದು ತಿಂಗಳ ನಂತರ ಕಾರ್ಯಾಚರಣೆ ಆರಂಭವಾಗಲಿದೆ. ಮತ್ತೊಂದು ಮೂಲಗಳ ಪ್ರಕಾರ ಇಲ್ಲಿ ಸುಮಾರು 100 ಎಕರೆ ಒತ್ತುವರಿಯಾಗಿದ್ದು, ಎಲ್ಲ ಸೇರಿದರೆ ಒಟ್ಟು ರು.10ಸಾವಿರ ಕೋಟಿ ಮೌಲ್ಯದ ಕೆರೆ ಜಾಗ ಒತ್ತುವರಿಯಾಗಿದೆ. ಇಲ್ಲಿ ಬೃಹತ್ ಕಟ್ಟಡಗಳಿದ್ದು, ಕಾರ್ಯಾಚರಣೆಯೂ ದೊಡ್ಡ ಪ್ರಮಾಣದಲ್ಲೇ ನಡೆಯಲಿದೆ.

ಕೆರೆ ಜಾಗದ ಒತ್ತುವರಿ ತೆರವು ಜೊತೆಗೆ ಭೂ ಒತ್ತುವರಿ ತೆರವು ತೆರವು ಕಾರ್ಯಾಚರಣೆಯೂ ನಡೆಯಲಿದೆ. ಆನೇಕಲ್ ತಾಲೂಕಿನಲ್ಲಿ ಬೃಹತ್ ಪ್ರಮಾಣದ ಒತ್ತುವರಿಯಾಗಿದ್ದು, ಗುರುವಾರ ಜಿಲ್ಲಾಡಳಿತದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಸಾರಕ್ಕಿಯಲ್ಲಿ ತೆರವು ಕಾರ್ಯಾಚರಣೆ ಅಂತಿಮಗೊಂಡಿದ್ದು, ಗುರುವಾರ ಬಿಡಿಎಂಗೆ ಜಾಗವನ್ನು ಹಸ್ತಾಂತರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com