ಸೀಲ್ ಇಲ್ಲದ ರಸೀದಿ: ಟ್ವಿಟರ್‍ನಲ್ಲಿ ದೂರು

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ವ್ಯಕ್ತಿಗೆ ರು.200 ದಂಡ ವಿಧಿಸಿ, ಸೀಲ್ ಹಾಕದೇ ರಸೀದಿ ನೀಡಿದ ಹೆಡ್ ಕಾನ್ಸ್ ಟೇಬಲ್ ಬಗ್ಗೆ ಟ್ವಿಟರ್ ನಲ್ಲಿ...
ಟ್ವೀಟರ್
ಟ್ವೀಟರ್

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ವ್ಯಕ್ತಿಗೆ ರು.200 ದಂಡ ವಿಧಿಸಿ, ಸೀಲ್ ಹಾಕದೇ ರಸೀದಿ ನೀಡಿದ ಹೆಡ್ ಕಾನ್ಸ್ ಟೇಬಲ್ ಬಗ್ಗೆ ಟ್ವಿಟರ್ ನಲ್ಲಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

ಮಂಗಳವಾರ ಎಚ್‍ಎಸ್‍ಆರ್ ಬಡಾವಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ ವ್ಯಕ್ತಿಯೊಬ್ಬರಿಗೆ ಕಾನ್ಸ್ ಟೇಬಲ್ ಸಿದ್ದಲಿಂಗಪ್ಪ ಅವರು ರು. 200 ದಂಡ ವಿಧಿಸಿದ್ದರು. ಆದರೆ, ರಸೀದಿ ನೀಡುವಾಗ ಕೇವಲ ದಂಡದ ಮೊತ್ತ, ದಿನಾಂಕ ನಮೂದಿಸಿ ಸಹಿ ಮಾಡಿದ್ದರು. ಆದರೆ, ಯಾವ ವ್ಯಕ್ತಿಯಿಂದ ಹಣ ಸಂಗ್ರಹಿಸಲಾಗಿದೆ ಹಾಗೂ ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿ ಕಾನೂನು ಉಲ್ಲಂಘಿಸಲಾಗಿದೆ ಎನ್ನುವುದನ್ನು ನಮೂದಿಸಿಲ್ಲ. ಇನ್ನು ನಿಯಮದ ಪ್ರಕಾರ ಠಾಣೆಯ ಸೀಲ್ ಅನ್ನೂ ಹಾಕಿಲ್ಲ.

ಕಾನ್ಸ್ ಟೇಬಲ್ ಕಾನೂನಿನ ಪ್ರಕಾರ ಕೇಸ್ ದಾಖಲಿಸಿದ್ದಾರೆ. ಆದರೆ, ಠಾಣೆಯ ಸೀಲ್ ಹಾಕದಿರುವುದರಿಂದ ಈ ಬಗ್ಗೆ ಮೇಲಧಿಕಾರಿಗೆ ವರಿದ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com