ಮತ್ತೆ ಐವರು ರೈತರು ಸಾವಿಗೆ ಶರಣು

ರಾಜ್ಯದಲ್ಲಿ ರೈತರ ಸಾವು ಮುಂದುವರಿದಿದ್ದು, ಮಂಗಳವಾರವೂ ಐವರು ಸಾವಿಗೆ ಶರಣಾಗಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ರಾಜ್ಯದಲ್ಲಿ ರೈತರ ಸಾವು ಮುಂದುವರಿದಿದ್ದು, ಮಂಗಳವಾರವೂ ಐವರು ಸಾವಿಗೆ ಶರಣಾಗಿದ್ದಾರೆ. ಕಡೂರು ತಾಲೂಕಿನ ದೇವನೂರು ಹೋಬಳಿಯ ಹಳ್ಳದಹಳ್ಳಿ ಗ್ರಾಮದ ಚಂದ್ರೇಗೌಡ (56) ಅವರ ಬೆಳೆ ಹಾನಿಗೀಡಾಗಿತ್ತು, ಬೋರ್‍ವೆಲ್ ಕೂಡ ಬರಿದಾಗಿತ್ತು. ರೂ. 4 ಲಕ್ಷ ಸಾಲ ಹೊಂದಿದ್ದ ಅವರು ಸಾವಿಗೆ ಶರಣಾಗಿದ್ದಾರೆ.

ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೇಮಕಾಂತ್ (53) ಅವರಿಗೆ ರೂ 1.50 ಲಕ್ಷ ಕೈ ಸಾಲವಿತ್ತು. ರೇಷ್ಮೆಗೆ ಸೂಕ್ತ ಧಾರಣೆ ಸಿಗದೆ, ಸಾಲ ಕಟ್ಟಲಾಗದೆ ಬೇಸತ್ತಿದ್ದ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಸಮೀಪದ ಕನ್ನಮಂಗಲದ ವೆಂಕಟರೆಡ್ಡಿ ಬೆಂಕಿ ಹಚ್ಚಿಕೊಂಡು ಪ್ರಾಣ ಬಿಟ್ಟಿದ್ದಾರೆ. ಇನ್ನು, ಸಾಗರ ತಾಲೂಕಿನ ಭೈರಾಪುರದ ಬೋಳನಕಟ್ಟೆ ರೈತ ಕೆರೆಯಪ್ಪ (60) ರೂ. 2 ಲಕ್ಷದ ವರೆಗೆ ಸಾಲ ಹೊಂದಿದ್ದರು. ಹಾವೇರಿ ಕನವಳ್ಳಿ ಗ್ರಾಮದ ಯಲ್ಲಪ್ಪ ಆರೇರ (55) ಅವರು ಮಾಡಿಕೊಂಡ ಸಾಲ ತೀರಿಸಲಾಗದೆ ನೇಣು ಬಿಗಿದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com