ಟ್ಯಾಂಕರ್ ನೀರು ಬಾಕಿ ಬೇಗ ಪಾವತಿಗೆ ಸೂಚನೆ

ಕುಡಿಯುವ ನೀರಿಗೆ ಹೊಸ ಕೊಳವೆಬಾವಿಗಿಂತ ಇರುವ ಕೊಳವೆಬಾವಿಯನ್ನು ಬಾಡಿಗೆಗೆ ಪಡೆದುಕೊಳ್ಳಿ, ಟ್ಯಾಂಕರ್ ಮೂಲಕ ನೀರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕುಡಿಯುವ ನೀರಿಗೆ ಹೊಸ ಕೊಳವೆಬಾವಿಗಿಂತ ಇರುವ ಕೊಳವೆಬಾವಿಯನ್ನು ಬಾಡಿಗೆಗೆ ಪಡೆದುಕೊಳ್ಳಿ, ಟ್ಯಾಂಕರ್ ಮೂಲಕ ನೀರು ಪೂರೈಸಿರುವುದಕ್ಕೆ ಎರಡು ತಿಂಗಳ ಹಿಂದಿನ ಎಲ್ಲ ಬಾಕಿಯನ್ನು ಒಂದು ವಾರದಲ್ಲಿ ಬಿಡುಗಡೆ ಮಾಡಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ವಾರವೂ ಸಭೆ ಮಾಡಿ. ರಾಜ್ಯದಲ್ಲಿ ಮಳೆ ಅಭಾವದಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಿರುವ ಸೂಚನೆ ಇದು.

ಬರ ನಿರ್ವಹಣೆಗೆ ಸಂಬಂಧಿಸಿದಂತೆ ಬೆಂಗಳೂರು ಕಂದಾಯ ವಿಭಾಗದ ಶಾಸಕರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಡೆಸಿದ ಬಳಿಕ ಕುಡಿಯುವ ನೀರು ಒದಗಿಸಲು ಸೂಕ್ತ ನಿರ್ದೇಶನ ನೀಡಿದರು. ಹೊಸದಾಗಿ ಬೋರ್ ವೆಲ್ ಕೊರೆಯಬೇಕೆಂದರೆ ರೂ. 6ರಿಂದ ರೂ.7 ಲಕ್ಷ ವೆಚ್ಚವಾಗುತ್ತದೆ. ಇದರ ಆಯಸ್ಸು ಒಂದು ವರ್ಷ. ನಿರ್ವಹಣೆ, ವೈಫಲ್ಯ ಎಲ್ಲ ಸೇರಿದರೆ ತಿಂಗಳಿಗೆ ರೂ.70 ಸಾವಿರ ವೆಚ್ಚವಾಗುತ್ತದೆ. ಹೀಗಾಗಿ, ಜನರಲ್ಲಿರುವ ಬೋರ್‍ವೆಲ್‍ಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬಳಸಿಕೊಳ್ಳಿ. ಇದಕ್ಕೆ ರೂ. 10 ಸಾವಿರ ಬಾಡಿಗೆ ಎಂಬುದನ್ನು ನಿಗದಿಪಡಿಸಿಕೊಳ್ಳಬೇಡಿ. ಅಲ್ಲಿನ ಅಗತ್ಯಕ್ಕನುಸಾರವಾಗಿ ಬಾಡಿಗೆಯನ್ನು ನಿಗದಿ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಟ್ಯಾಂಕರ್ ಮೂಲಕನೀರು ಪೂರೈಸಿರುವವರಿಗೆ ಕೋಟ್ಯಂತರ ರುಪಾಯಿ ಬಾಕಿಯಲ್ಲಿ ಈಚೆಗಿನ 2 ತಿಂಗಳು ಬಿಟ್ಟು ಉಳಿದ ಹಣ ಪಾವತಿಸಿ ಎಂದು ಸೂಚಿಸಿದರು.ಇದಕ್ಕೂ ಮುನ್ನ ಮಾತನಾಡಿದ ಶಾಸಕ ರಮೇಶ್‍ಕುಮಾರ್, ಜಿಲ್ಲಾಧಿಕಾರಿಗಳು ಕಚೇರಿ ಬಿಟ್ಟು ಹೊರಗೇ ಹೋಗುವುದಿಲ್ಲ. ನೀರು ಕೊಡುವವರಿಗೆ ಹಣ ಕೊಟ್ಟಿಲ್ಲ. ಪಿಡಿಒಗಳು ಕ್ರಿಮಿನಲ್‍ಗಳಾಗಿದ್ದಾರೆ. ಅವರಿಂದಲೇ ಸಮಸ್ಯೆಗಳು ಹೆಚ್ಚಾಗಿರುವುದು ಎಂದು ಆರೋಪಿಸಿದರು. ಶಾಸಕರಾದ ಎಚ್.ಸಿ.ಬಾಲಕೃಷ್ಣ, ಮಂಜುನಾಥ, ಎಸ್.ಎನ್. ಸುಬ್ಬಾರೆಡ್ಡಿ, ಜೆ.ಕೆ. ಕೃಷ್ಣಾರೆಡ್ಡಿ, ಎನ್. ರಾಜಣ್ಣ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com