ಡಬ್ಬಿಂಗ್‍ಗಾಗಿ ಆನ್‍ಲೈನ್ ಸಹಿ ಸಂಗ್ರಹ

ಡಬ್ಬಿಂಗ್ ಮೇಲಿನ ನಿಷೇಧವನ್ನು ಸಿಸಿಐ ತೆರವು ಮಾಡಿರುವ ಹಿನ್ನೆಲೆಯಲ್ಲಿ ಬನವಾಸಿ ಬಳಗವು ಆನ್‍ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನ ಅರಂಭಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡಬ್ಬಿಂಗ್ ಮೇಲಿನ ನಿಷೇಧವನ್ನು ಸಿಸಿಐ ತೆರವು ಮಾಡಿರುವ ಹಿನ್ನೆಲೆಯಲ್ಲಿ ಬನವಾಸಿ ಬಳಗವು ಆನ್‍ಲೈನ್ ಮೂಲಕ ಸಹಿ ಸಂಗ್ರಹ ಅಭಿಯಾನ ಅರಂಭಿಸಿದೆ.
ಸಿಸಿಐ ತೀರ್ಪಿನ ಅನ್ವಯ ಅನ್ಯ ಭಾಷೆಯ ಕಾರ್ಯಕ್ರಮಗಳನ್ನು ನೋಡಲು ಬಯಸುವವರಿಗೆ ಅಡೆತಡೆ ಇರಬಾರದು. ಆದರೆ, ರಾಜ್ಯ ದಲ್ಲಿ ಡಬ್ಬಿಂಗ್ ಮಾಡಲು ಅವಕಾಶ
ನೀಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಇದು, ಕಾನೂನು ಸುವ್ಯವಸ್ಥೆ ಮತ್ತು ಸರ್ಕಾರದ ಸಾರ್ವಭೌಮತೆಯನ್ನೇ ಪ್ರಶ್ನಿಸಿದಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ, ಡಬ್ಬಿಂಗ್ ವಿರುದ್ಧ ಹೇಳಿಕೆ ನೀಡುತ್ತಿರುವವರ ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಡಬ್ಬಿಂಗ್ ಮಾಡುವ ಮತ್ತು ಡಬ್ಬಿಂಗ್ ಚಿತ್ರಗಳನ್ನು ನೋಡುವ ಪ್ರೇಕ್ಷಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಸಹಿ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ.
ಈ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಬನವಾಸಿ ಬಳಗವು ಹೇಳಿಕೆಯಲ್ಲಿ ತಿಳಿಸಿದೆ. ಆನ್‍ಲೈನ್ ಮೂಲಕ ಆರಂಭಿಸಿರುವ ಸಹಿ ಸಂಗ್ರಹ
ಅಭಿಯಾನಕ್ಕೆ ಈಗಾಗಲೇ ಸಾವಿರಕ್ಕೂ ಹೆಚ್ಚು ಜನರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ. ರಾಜ್ಯದ ಚಿತ್ರ ಮಂದಿರಗಳಲ್ಲಿ ಡಬ್ಬಿಂಗ್ ಚಿತ್ರ ನೋಡುವ ಜನರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com