ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆ.14 ಮತ್ತು 15ರಂದು ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆ.14 ಮತ್ತು 15ರಂದು ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳದ ಅಭಾವ ಇರುವುದರಿಂದ ಹಾಗೂ ಪ್ರಯಾಣಿಕರಿಗೆ ಅನುಕೂಲ ವಾಗಲು ನಗರದ ವಿವಿಧ ಪಿಕಪ್ ಪಾಯಿಂಟ್‍ಗಳಿಂದ ಮುಂಗಡ ಬುಕ್ಕಿಂಗ್ ವ್ಯವಸ್ಥೆಯ ವಾಹನಗಳ ವ್ಯವಸ್ಥೆ ಮಾಡಿದೆ.

ಹೆಚ್ಚುವರಿ ಸಾರಿಗೆಗಳನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ ಟಿ.ಟಿ.ಎಂ.ಸಿ, ಗಂಗಾನಗರ, ಮಲ್ಲೇಶ್ವರಂ 18ನೇ ಕ್ರಾಸ್, ಜಯನಗರ 4ನೇ ಬ್ಲಾಕ್ ಮತ್ತಿತರ ಸ್ಥಳಗಳಿಂದ ಆರಂಭಿಸಲಾಗುವುದು. ಮುಂಗಡ ಟಿಕೆಟ್ ಪಡೆಯುವ ಪ್ರಯಾಣಿಕರು ಈ ಸ್ಥಳಗಳಿಂದಲೇ ಪ್ರಯಾಣಿಸಬಹುದು. ದಾವಣಗೆರೆ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ಶಿವಮೊಗ್ಗ ಮಾರ್ಗದ ಮುಂಗಡ ರಹಿತ ಮತ್ತು ಹೆಚ್ಚುವರಿ ವಾಹನಗಳು ಕೆಂಪೇಗೌಡ ಬಸ್ ನಿಲ್ದಾಣದಿಂದಲೇ ಹೊರಡಲಿವೆ ಎಂದು ಪ್ರಕಟಣೆ ತಿಳಿಸಿದೆ.

ಕಬ್ಬನ್ ಪಾರ್ಕ್ ನಲ್ಲೂ ಫಲಪುಷ್ಪ ಪ್ರದರ್ಶನ
ಬೆಂಗಳೂರು: ಇಷ್ಟು ದಿನ ಲಾಲ್‍ಬಾಗ್ ಆವರಣದಲ್ಲಿ ಪುಷ್ಪಗಳ ದರ್ಶನ ಪಡೆದ ಸಾರ್ವಜನಿಕರು ಇನ್ನು ಮುಂದಿನ ಮೂರು ದಿನಗಳಲ್ಲಿ ಕಬ್ಬನ್ ಪಾರ್ಕಿನಲ್ಲೂ ಅದೇ ರೀತಿಯ ಪುಷ್ಪ ದರ್ಶನ ವೀಕ್ಷಿಸಬಹುದು. ಆಗಸ್ಟ್ 14ರಿಂದ 16ರವರೆಗೆ ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನದಲ್ಲಿ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಚಾಮರಾಜೇಂದ್ರ ಪ್ರತಿಮೆ ಆವರಣ ಮತ್ತು ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳನ್ನು ಕಾಣಬಹುದು. ಬೆಳಗ್ಗೆ 7 ಗಂಟೆಗೆ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಕೆ. ಪಟ್ನಾಯಕ್ ಚಾಲನೆ ನೀಡುವರು. ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲಾ ಇಕೆಬಾನ ಜೋಡಣೆ ಹಾಗೂ ನಗರ ಸಂಚಾರ ಹೆಚ್ಚುವರಿ ಆಯುಕ್ತ ಡಾ. ಎಂ.ಎ. ಸಲೀಂ ಆರ್ಕಿಡ್ಸ್ ಮಳಿಗೆಗಳನ್ನು ಉದ್ಘಾಟಿಸುವರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com