ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ

ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಶಿವನಗೌಡ ಎಂಬ ರೈತ ತನ್ನ 18 ಎಕರೆ ಕಬ್ಬು ಬೆಳೆಯನ್ನು ಮಂಗಳವಾರ ಟ್ರಾಕ್ಟರ್ ಮೂಲಕ ನಾಶ ಮಾಡಿದ್ದಾರೆ...
ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ (ಸಾಂದರ್ಭಿಕ ಚಿತ್ರ)
ಬೆಳೆಗೆ ಸಿಗಲಿಲ್ಲ ಬೆಲೆ: ಹೊತ್ತಿಸಿದ ಜ್ವಾಲೆ (ಸಾಂದರ್ಭಿಕ ಚಿತ್ರ)

ಧಾರವಾಡ: ಸೂಕ್ತ ಬೆಲೆ ಸಿಗದ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನ ಕಲ್ಲಾಪುರ ಗ್ರಾಮದ ಶಿವನಗೌಡ ಎಂಬ ರೈತ ತನ್ನ 18 ಎಕರೆ ಕಬ್ಬು ಬೆಳೆಯನ್ನು ಮಂಗಳವಾರ ಟ್ರಾಕ್ಟರ್ ಮೂಲಕ
ನಾಶ ಮಾಡಿದ್ದಾರೆ.

ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ ಸೂಕ್ತ ಬೆಲೆ ನಿಗದಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಟಾವು ಮಾಡದಿರಲು ರೈತ ನಿರ್ಧರಿಸಿದ್ದರು. ಅಲ್ಲದೆ, ತರಕಾರಿ ಬೆಳೆಯುವ ಸಲುವಾಗಿ ಕಬ್ಬನ್ನು
ಭೂಮಿಯಲ್ಲೇ ನಾಶ ಮಾಡಿದ್ದಾರೆ. `ಕಬ್ಬು ಬೆಳೆಯಿಂದ ಕಿಂಚಿತ್ತೂ ಲಾಭವಾಗಲಿಲ್ಲ. ಸಕ್ಕರೆ ಕಾರ್ಖಾನೆಗಳು ಟನ್‍ಗೆ ರು.1,200 ನೀಡುತ್ತಿವೆ.

ಇದರಿಂದ ತೀರ ನಷ್ಟವಾಗುತ್ತಿದೆ. ಕಬ್ಬು ಕಟಾವು ಮಾಡಲು ಮುಂದಾದರೆ ನಿಗದಿತ ಬೆಲೆಗಿಂತಲೂ ಹೆಚ್ಚು ಖರ್ಚು ಬರುತ್ತದೆ. ಆದ್ದರಿಂದ ಬೆಳೆಯನ್ನು ನಾಶ ಮಾಡಿ ಭೂಮಿಗೇ ಸೇರಿಸಿದ್ದೇನೆ. ಅದೇ ಜಾಗದಲ್ಲಿ ಬೇರೆ ಬೆಳೆ ಬೆಳೆಯುತ್ತೇನೆ' ಎಂದು ಶಿವನಗೌಡ ಹೇಳಿದ್ದಾರೆ. `ಆಳೆತ್ತರ ಬೆಳೆದ ಕಬ್ಬನ್ನು ನಾಶಪಡಿಸಲು ನಮಗೂ ನೋವಾಗುತ್ತಿತ್ತು. ಆದರೆ, ಬೇರೆ ದಾರಿಯೇ ಇರಲಿಲ್ಲ' ಎಂದು ನೋವು ತೋಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com