
ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 11 ಕಾಂಗ್ರೆಸ್ ಮುಖಂಡರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ರಾಯಪುರ ವಾರ್ಡ್ ನ ಕಮಲಾ ಅಂಜನ್, ದೀಪಾ ಚಂದ್ರಶೇಖರ್, ಆಯಾಸ್ ಬೇಗಂ; ಹಲಸೂರಿನ ಮಮತ ಸರವಣ; ಮಾರಪ್ಪನ ಪಾಳ್ಯದ ಸಾಗರ್ ಸತೀಶ್; ಮಹಾಲಕ್ಷಿ ್ಮಪುರದ
ಜಯಲಕ್ಷ್ಮೀ; ವೃಷಭಾವತಿನಗರದ ಪದ್ಮ ಪ್ರಕಾಶ್; ಸಗಾಯಪುರಂನ ಏಳುಮಲೈ; ವಿದ್ಯಾಪೀಠದ ಆಶಾ ಕಾರ್ತಿಕ್; ಜಯನಗರ ಈಸ್ಟ್ ನ ಮುನಿಸಂಜೀವಯ್ಯ; ಹೊಯ್ಸಳ
ನಗರದ ಆನಂದ್; ನಂದಿನಿ ಲೇಔಟ್‍ನ ಬಿ. ಎನ್. ಕುಮಾರ್; ಓಕಳಿಪುರಂನ ಅಮರ ನಾಥ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಸೂಚನೆ ಮೇರೆಗೆ ಉಚ್ಚಾಟಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೋಸ್‍ರಾಜ್ ತಿಳಿಸಿದ್ದಾರೆ.
Advertisement