
ಬೆಂಗಳೂರು: ಬಿಬಿಎಂಪಿಯ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಸರಳ ಬಹುಮತ ಬರುತ್ತಿದ್ದಂತೆಯೇ ಮೇಯರ್ ಹಾಗೂ ಉಪ ಮೇಯರ್ ಹುದ್ದೆಯ ಮೇಲಿನ ಒತ್ತಾಸೆ ಹೆಚ್ಚಾಗುತ್ತಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನದ ಮೇಲೆ ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್, ಮಾಜಿ ಆಡಳಿತಪಕ್ಷ ನಾಯಕ ಎನ್. ನಾಗರಾಜ್
ಹಾಗೂ ಹಿರಿಯ ಮುಖಂಡ ಪದ್ಮನಾಭರೆಡ್ಡಿ ನಡುವೆ ತೀವ್ರ ಪೈಪೋಟಿ ಸೃಷ್ಟಿಯಾಗುವ ಲಕ್ಷಣವಿದೆ.
ಮೇಯರ್ ಸ್ಥಾನದ ಮೇಲೆ ಹಿರಿಯ ನಾಯಕರು ಕಣ್ಣಿಟ್ಟು ಮೂವರು ಕಾರ್ಯತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ಎಲ್. ಶ್ರೀನಿವಾಸ್ ಉಪ ಮೇಯರ್ ಆಗಿದ್ದರಿಂದ ಮತ್ತೆ ಅವರಿಗೆ ಮೇಯರ್ ಸ್ಥಾನ ಸಿಗುವುದೇ ಎಂಬುದು ಮಾತಿದೆ. ಜಯನಗರದ ಬೈರಸಂದ್ರ ವಾರ್ಡ್‍ನಿಂದ 2ನೇ ಬಾರಿಗೆ ಬಿಜೆಪಿಯಿಂದ ಗೆದ್ದಿರುವ ಎನ್. ನಾಗರಾಜ್‍ಗೆ ಉಪಮೇಯರ್ ಸ್ಥಾನ ಕಡೆಗಳಿಗೆಯಲ್ಲಿ ತಪ್ಪಿ ಹೋಗಿದ್ದರಿಂದ ಆಡಳಿತಪಕ್ಷದ ನಾಯಕರ ನ್ನಾಗಿಯೂ ಮಾಡಲಾಗಿತ್ತು. ಆದರೆ, ಈ ಬಾರಿ ಅವರು ಮೇಯರ್ ಸ್ಥಾನದ ಆಕಾಂಕ್ಷಿ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ಜೆ. ಜಾರ್ಜ್‍ಗೇ ಪ್ರಬಲ ಪೈಪೋಟಿ ನೀಡಿದ್ದ ಪದ್ಮನಾಭರೆಡ್ಡಿ ನಾಲ್ಕನೇ ಬಾರಿ ಪಾಲಿಕೆ ಪ್ರವೇಶಿಸಿದ್ದಾರೆ.
ಹಾಗಾಗಿ ಇವರೂ ಮೇಯರ್ ಆಕಾಂಕ್ಷಿ. ಇದಲ್ಲದೆ, ವಿ. ಸೋಮಣ್ಣ ತಾವು ಶಾಸಕರಲ್ಲದಿದ್ದರೂ ಎರಡು ಕ್ಷೇತ್ರಗಳಲ್ಲಿ 11 ಸ್ಥಾನ ಗೆಲ್ಲಿಸಿದ್ದೇನೆ, ನಮ್ಮವರೇ ಮೇಯರ್ ಆಗಬೇಕೆಂದರೆ ಉಮೇಶ್ ಶೆಟ್ಟಿ, ಮಲ್ಲೇಶ್ವರ ಶಾಸಕ ಅಶ್ವತ್ಥ- ನಾರಾಯಣ ಕೂಡ ತಮ್ಮ ಕ್ಷೇತ್ರದ ಪರ ಬ್ಯಾಟಿಂಗ್ ಮಾಡಿ ಕಾಡುಮಲ್ಲೇಶ್ವರದ ಮಂಜು-ನಾಥ ರಾಜು ಅವರತ್ತ ಓಲೈಕೆ ಮಾಡುತ್ತಿದ್ದಾರೆ. ನಗರ ಯೋಜನೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಕೆ. ರಾಮಮೂರ್ತಿ, ಆಡಳಿತಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಮುಂಚೂಣಿಯಲ್ಲಿದ್ದಾರೆ.
ಪಟ್ಟಾಭಿರಾಮ ನಗರದಿಂದ ಎಚ್.ಸಿ. ನಾಗರತ್ನ ಅವರನ್ನು ಭಾರಿ ಅಂತರದಿಂದ ಗೆಲ್ಲಿಸಿಕೊಂಡಿರುವ ಸಿ. ಕೆ. ರಾಮಮೂರ್ತಿ ಅವರು ಕಳೆದ ಅವಧಿಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಕೆಲವು ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. ಇನ್ನು ಕೊನೆಯ ಅವ„ಯಲ್ಲಿ ಆಡಳಿತ ಪಕ್ಷ ನಾಯಕರಾಗಿದ್ದ ಎನ್.ಆರ್. ರಮೇಶ್ ಮೀಸಲು ಬದಲಾಗಿದ್ದರಿಂದ ಪತ್ನಿ ಪೂರ್ಣಿಮಾರನ್ನು ನಿಲ್ಲಿಸಿ ಜಯ ಸಾಧಿಸಿದ್ದಾರೆ. ಉಪ ಮೇಯರ್ ಸ್ಥಾನಕ್ಕಾಗಿ ಪ್ರಯತ್ನಗಳು ನಡೆದಿವೆ.
ಸರ್ಕಾರದ ಮೇಲೆ ಅವಲಂಬಿತ!
ಬಿಬಿಎಂಪಿಯಲ್ಲಿ ಬಿಜೆಪಿಗೆ ಬಹುಮತವೇನೋ ಬಂದಿರಬಹುದು. ಆದರೆ, ಬಿಬಿಎಂಪಿಯ ಈ ಬಾರಿಯ ಪ್ರಥಮ ಮೇಯರ್ ಉಪಮೇಯರ್ ಚುನಾವಣೆ ಯಾವಾಗ ನಡೆಯಬೇಕು. ಯಾವ ಮೀಸಲು ಇರಬೇಕು ಎಂಬುದು ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಅವಲಂಬಿತವಾಗಿದೆ. ಏಕೆಂದರೆ, ಸರ್ಕಾರ ಜಯಸಾಧಿಸಿದ ಅಭ್ಯರ್ಥಿಗಳ ರಾಜ್ಯಪತ್ರ ಹೊರಡಿಸಿ, ಮೀಸಲನ್ನೂ ಸ್ಪಷ್ಟಪಡಿಸಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಕಳಿಸಿದ ಮೇಲಷ್ಟೇ ಮೇಯರ್ ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಚಾಲನೆ ಆಗುವುದು. ಈಗಾಗಲೇ ಪ್ರಕಟಿಸಿರುವಂತೆ 16ನೇ ಅವಧಿಯಲ್ಲಿ ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು.
Advertisement