ರೈತಸೇನೆ ರಾಜ್ಯಾಧ್ಯಕ್ಷರಿಗೆ ರೈತರಿಂದಲೇ ಘೇರಾವ್

ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಸತತ 43 ದಿನಗಳಿಂದ ನರಗುಂದದಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಳ್ಳುತ್ತಿದ್ದು, ಗುರುವಾರ ರೈತ...
ಗದಗ ಜಿಲ್ಲೆ ರೋಣಾ ತಾಲ್ಲೂಕು ಮಲ್ಲಾಪುರ ಬಳಿ ವಿಜಯಪುರ-ಹುಬ್ಬಳ್ಳಿ ಎಕ್ಸ್ ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲು ತಡೆದು ರೈತರು ಪ್ರತಿಭಟನೆ ನಡೆಸಿದರು.
ಗದಗ ಜಿಲ್ಲೆ ರೋಣಾ ತಾಲ್ಲೂಕು ಮಲ್ಲಾಪುರ ಬಳಿ ವಿಜಯಪುರ-ಹುಬ್ಬಳ್ಳಿ ಎಕ್ಸ್ ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲು ತಡೆದು ರೈತರು ಪ್ರತಿಭಟನೆ ನಡೆಸಿದರು.

ನರಗುಂದ: ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಸತತ 43 ದಿನಗಳಿಂದ ನರಗುಂದದಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಳ್ಳುತ್ತಿದ್ದು, ಗುರುವಾರ ರೈತ ಸೇನೆ ರಾಜ್ಯಾಧ್ಯಕ್ಷರಿಗೇ ರೈತರು ಘೇರಾವ್ ಹಾಕಿದರು.

ರೈತ ಮುಖಂಡರು, ಮಠಾಧೀಶರ ಉಪಸ್ಥಿತಿಯಲ್ಲಿ ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ರೂಪುರೇಷೆ ಕುರಿತು ಸಭೆ ನಡೆದಿತ್ತು. ಆದರೆ, ಸಭೆಯಲ್ಲಿ ಮುಖಂಡರು ಹಾಗೂ ಮಠಾಧೀಶರ ಮಾತುಗಳು ರೈತರಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಆಗ, ನಿಮ್ಮ ಮಾತುಗಳು ನಮಗೆ ಕೇಳಿಸುತ್ತಿಲ್ಲ.ಸಭೆ ರೈತರಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಆಗ, ನಿಮ್ಮ ಮಾತುಗಳು ನಮಗೆ ಕೇಳಿಸುತ್ತಿಲ್ಲ. ಸಭೆಯನ್ನು ಧರಣಿ ವೇದಿಕೆಗೆ ಸ್ಥಳಾಂತರಿಸಿ ಎಂದು ರೈತರು ಆಗ್ರಹಿಸಿದರು.

ವೇದಿಕೆಯಲ್ಲಿ ಮುಖ್ಯ ನಿರ್ಣಯ ತೆಗೆದುಕೊಂಡು ರೈತಸೇನೆ ರಾಜ್ಯಾಧ್ಯಕ್ಷ ವೀರೇಶ ಸೊರದಮಠ ಮಾತನಾಡಿ, ಈ ಹೋರಾಟವನ್ನು ಕೈ ಬಿಟ್ಟು ನಾವು ಗ್ರಾಮಗಳಿಗೆ ಹೋಗಿ ಜನಜಾಗೃತಿ ಮೂಡಿಸುತ್ತೇವೆ. ನಾಳೆಯಿಂದ ರೈತರು ವೇದಿಕೆ ಹತ್ತಿರ ಬಾರದೆ, ತಮ್ಮ ಕೆಲಸ-ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಆಗ ಆಕ್ರೋಶಗೊಂಡ ರೈತರು, ಮಹಾದಾಯಿ ಯೋಜನೆಗಾಗಿ ಪ್ರಾಣ ನೀಡುವುದಾಗಿ ಹೇಳಿದ್ದಿರಿ. ಈಗ ಯಾರನ್ನು ಕೇಳಿ ಹೋರಾಟ ಕೈ ಬಿಡುವ ನಿರ್ಧಾರ ಕೈಗೊಂಡಿರಿ?  ಕಾಂಗ್ರೆಸ್‍ನಿಂದ 50 ಲಕ್ಷ ರೂಪಾಯಿ ಪಡೆದು ಒಳ ಒಪ್ಪಂದ ಮಾಡಿಕೊಂಡಿದ್ದಿರಿ ಎಂದು ಆರೋಪಿಸಿ ಸೊಬರದಮಠ ಅವರಿಗೆ ಘೇರಾವ್ ಹಾಕಿದರು. ಹೋರಾಟವನ್ನು ಯಾವ ಕಾರಣಕ್ಕಾಗಿ ಮೊಟಕುಗೊಳಿಸುತ್ತೀರಿ?

ನಿಮ್ಮ ಹೋರಾಟಕ್ಕೆ ಅನುಕೂಲವಾಗಲಿ ಎಂದು ನರಗುಂದ ರೈತರು ನೀಡಿದ 
ದೇಣಿಗೆ ಹಣ ಏನಾಯ್ತು? ಅದರ ಲೆಕ್ಕ ಕೊಡಿ, ತಕ್ಷಣವೇ ಹೋರಾಟ ವೇದಿಕೆಗೆ ಬನ್ನಿ ಎಂದು ತಾಕೀತು ಮಾಡಿದರು. ಈ ಹಿನ್ನೆಲೆಯಲ್ಲಿ ಸಭೆ ಗೊಂದಲದ ಗೂಡಾಗಿ ಕೊನೆಗೊಂಡಿತು.

ಈ ವೇಳೆ, ರಾಜ್ಯಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಅಂಬಲಿ ಅವರನ್ನು ಪೊಲೀಸರ ರಕ್ಷಣೆಯಲ್ಲಿ ಪಂಚಮಸಾಲಿ ಮಠಾಧೀಶರ ವಾಹನದಲ್ಲಿ ಕೂಡಿಸಿ ವೇದಿಕೆಯಿಂದ ಪಾರು
ಮಾಡಬೇಕು ಎನ್ನುತ್ತಿದ್ದಂತೆಯೇ ರೈತರು ವಾಹನಕ್ಕೆ ಅಡ್ಡ ನಿಂತು ಆಕ್ರೋಶ
ವ್ಯಕ್ತಪಡಿಸಿದರು.

ಸೋಮವಾರ ಮತ್ತು ಮಂಗಳವಾರ ನರಗುಂದ ಪಟ್ಟಣದಲ್ಲಿ ನಡೆದ ಪ್ರತಿಭಟನೆಯ ವಿಷಯವಾಗಿ 25ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿದ್ದು ರೈತರ ಗಮನಕ್ಕೆ ಬಂದಿದೆ. ತಕ್ಷಣವೇ ಅವರ ಮೇಲಿನ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತರು ಪೊಲೀಸ್ ಅಧಿಕಾರಿಗಳಿಗೂ ಘೇರಾವ್ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com